ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ನಿರ್ಮಲ ಬಟ್ಟಲ

ಒಲವು ಬೆಳೆಸಿಕೊಳ್ಳುವುದೆಂದರೆ

.

ಒಲವು ಬೆಳೆಸಿಕೊಳ್ಳುವುದೆಂದರೆ
ಸರಳ ಮಾತಲ್ಲ….

ಮಾತು ಮಾತಲ್ಲಿ ಮಾಧುರ್ಯದ
ಜೇನು ತುಂಬಿ ಸ್ಪೂರಿಸಿ
ಬಯಲಿನೊಳಗೊಂದು
ಮೂರ್ತಿ ರೂಪಿಸಿ
ಮನದೊಳಗೊಂದು
ಭಾವ ಮಂಟಪ ಕಟ್ಟಿದಂತೆ…

ಏಕಾಗ್ರತೆಯಲಿ ಮಂತ್ರ ಜಪಿಸಿ
ಒಲವು ಪೂಜೆ
ಸಾಕಾರಗೊಳಿಸಿಕೊಳ್ಳಲು ಪ್ರೇಮ ಪುಷ್ಪ ಅರ್ಪಿಸಿ
ಜ್ಯೋತಿ ಬೆಳಗಿಸಿಕೊಂಡು
ಅರಿವಿನ ಬೆಳಕ ಅನುಭವಿಸುವಂತೆ

ಗಂಧದ ಕಡ್ಡಿಯ ಒಳಕಿಡಿಯ ಪ್ರೇಮದ ತುಡಿತದ ಪರಿಮಳ
ಮನದಿ ಹದಗೊಂಡ ಭಾವಗಳ ಭಸ್ಮ
ಪೀಚು ಕಾಯಿಯೊಂದು ಫಲಿತು
ಹಣ್ಣಾಗುವವರೆಗೆ ಕಾಯ್ದು ನೈವೇದ್ಯವಿಟ್ಟಂತೆ

ಅಡೆತಡೆಗಳ ಮೀರಿ ಆಸಕ್ತಿ ಕದಡದಲೆ ತೊಡಗಿಸಿಕೊಳ್ಳುತ
ಇರುವುದೆಲ್ಲವ ಮರೆತು
ಸ್ಥಳ ಕಾಲ ಮಿತಿ ಮೀರಿ
ಸದಾಕಾಲ ಧ್ಯಾನಿಸುವ
ಯೋಗಿಯ ತೆರನಂತೆ

ನಿರಂತರ ತಪಸ್ಸಿನಿಂದ ಪಡೆದ ವರ
ಒಲವ ಸನ್ಮಾನ
ಉನ್ಮಾದ ತೊರೆದ ಭಾವಬಂಧನದಿ
ಆತ್ಮ ಸಂಗತ್ಯದ
ನಿಜ ತೃಪ್ತಿ ಸಾಕ್ಷಾತ್ಕಾರಗೊಂಡಂತೆ


About The Author

8 thoughts on “ಡಾ. ನಿರ್ಮಲ ಬಟ್ಟಲ ಒಲವು ಬೆಳೆಸಿಕೊಳ್ಳುವುದೆಂದರೆ”

    1. ದತ್ತಾತ್ರೇಯ ಶ್ರೀ ವಿಶ್ವಕರ್ಮ

      ಸುಂದರ ಕಾವ್ಯ.
      ಅಭಿನಂದನೆಗಳು ಮೇಡಂ.

    1. Dr. Nagendra acharya

      ಜೇಡರ ಬಲೆಯಂತೆ
      ನವಿರು
      ನಿಮ್ಮ ಕವಿತೆ

      ತುಂಬಾ ಚೆನ್ನಾಗಿ ಮೂಡಿಬಂದಿದೆ.
      – ಡಾ. ನಾಗೇಂದ್ರ

  1. ಎಸ್.ಕೆ. ಹೊಳೆಪ್ಪನವರ

    —– ಸದಾ ಕಾಲ ಧ್ಯಾನಿಸುವ
    ಯೋಗಿಯ ತೆರನಂತೆ
    ಅದ್ಬುತ ಕಾವ್ಯ ರಚನೆ.
    ಅಭಿನಂದನೆಗಳು ಮೆಡಮ್

Leave a Reply

You cannot copy content of this page

Scroll to Top