ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಜಯಂತಿ ಸುನಿಲ್

ಗಜಲ್

ತಲಾಷ್ ಬೇಕಿಲ್ಲ ಪ್ರೇಮಯುದ್ಧದಲ್ಲಿ ಮಣಿಯಲು
ಕಣ್ಣುಗಳೇ ಸಾಕಲ್ಲಾ..ಹೃದಯದಲ್ಲಿ ಬಂಧಿಸಲು..!!

ಖಾಲಿ ಬೊಗಸೆಗೊಂದಿಷ್ಟು ಒಲವಿನ ಹನಿಸುರಿಸು ಮುಸಾಫಿರಾ…
ನಿನ್ನ ಮೈ ಬೆವರಿನ ಹಸಿವಾಸನೆಯೇ ಸಾಕು ಪ್ರೀತಿಯಲ್ಲಿ ಜಾರಲು…!!

ಮಳೆಗೆ ಕಾತರಿಸಿದ ಇಳೆಯಂತೆ ಕಾದಿಹುದು ಮನ ನಿನ್ನ ಉಸಿರಿನ ಜೊತೆ ಮೆರವಣಿಗೆ ಹೊರಡಲು..
ಹೆಜ್ಜೆಗೆ ಹೆಜ್ಜೆಗೂಡಿಸಿ ಬಾಳಪಯಣದಲ್ಲಿ ಜೊತೆಯಾಗಲು..!!

ಶಿಶಿರ ಋತುವಿನ ಎಲೆಗಳಂತೆ ಮನಸು ಕದಡದಿರಲಿ…
ಬಿಕರಿಯಾಗದ ಕನಸುಗಳೊಂದಿಷ್ಟಿವೆ ಬಾ… ಜೊತೆಯಲ್ಲಿ ನನಸಾಗಿಸಲು!!

ಪ್ರೇಮಠಾಣೆಯಲ್ಲಿ ಪ್ರೇಮಿಗಳು ವಿರಸದ ಮೊಕದ್ದಮೆ ಹೂಡಿದ್ದಾರಂತೇ…
ವಿರಹವೇ ಬಾರದಂತೆ ಬಳಿಸೇರು ಬದುಕಿನ ರಂಗಿನಲ್ಲಿ ಓಕುಳಿಯಾಡಲು..!!

ಚಂದ್ರನೇಕೆ ಮುನಿಸಿಕೊಂಡು ಮೋಡಗಳ ಗೋರಿಯೊಳಗೆ ಇಳಿದನು..?
ದೀಪವಾರದ ಇರುಳು ಇದ್ದಾಗಲೇ ಬಂದುಬಿಡು ಖಾಲಿ ರಾತ್ರಿಗಳಲ್ಲಿ ನಿಶೆತುಂಬಲು..!!

ಕತ್ತಲು ತುಂಬಿದ ಒಳಗೂ ಹೊರಗೂ ಬೆಳಕನ್ನು ಬಿತ್ತಬೇಕಿದೆ ನೀನು..
ನನ್ನ ಜಯಕೆ ಜ್ಯೋತಿಯಾಗಿ ಚರಿತ್ರೆಯ ಪುಟಗಳಲ್ಲಿ ಅಮರವಾಗಲು..!

—————–

About The Author

1 thought on “ಜಯಂತಿ ಸುನಿಲ್”

Leave a Reply

You cannot copy content of this page

Scroll to Top