ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈ ಬದುಕು

ರೇಷ್ಮಾ ಕಂದಕೂರ

ಅಪಾರ್ಥ ಅನರ್ಥದಿ ಬದುಕು ಗೋಜಲು
ನಿಷ್ಪಕ್ಷಪಾತ ನಿಷ್ಠುರ ಮಾತಿಗೆ ಬಿರುಕು
ಸ್ವಾರ್ಥ ಅನುಮಾನಗಳ ಸುಳಿಗೆ ಬಿರುಗಾಳಿ
ಏಕಿಂತಹ ಬದುಕು ಮಾನವ.

ಧನಕನಕದ ಹಿಂದೆ ಜೂಟಾಟ
ಮಾನಕಗಳೂ ಬರೀ ನೇಪಥ್ಯಕ್ಕೆ
ಅಧಿಕಾರದ ಮದಕೆ ತಿರುಗಾಟ
ಮಾನವೀಯ ಬಂಧ ಮೂರುಕಾಸಿಗೆ ಹರಾಜು.

ನಾನೆಂಬ ಮಹಲಿಗೆ ಕಾದಾಟ
ಸಂಪತ್ತಿನ ಮೋಹಕೆ ಜಟಾಪಟಿ
ಮಾತು ಮಾತಿಗೂ ಮಸಲತ್ತು
ಸವಲತ್ತಿಗಾಗಿ ಬಿಗುಮಾನದ ರಂಗು.

ಏನೆಂದು ಹೇಳಲಿ ಈ ಜಗವ
ಯಾರನ್ನು ಕೇಳಲಿ ಮಾಧವ
ಜಂಜಡಕೆ ಮುಕ್ತಿ ಇಲ್ಲವೇ
ಜಗದೊಡೆಯ ಬೆಳ್ಳಿ ರೇಖೆ ತರಬಾರದೇ.


About The Author

Leave a Reply

You cannot copy content of this page

Scroll to Top