ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಪದಗಳು

ತಡಕಾಡಿದೆ ಪದಗುಚ್ಚಗಳ
ಪದಗಳ ಪುನರಾವರ್ತನೆಯಾಗದಂತೆ
ಪರದಾಡಿದೆ ಪದವಿನ್ಯಾಸ ಗಳ
ಅರ್ಥ ಗಳನ್ನು ಹುಡುಕುವ
ಶಬ್ದ ಕೋಶದಲ್ಲಿ
ಹುಡುಕಾಡಿದೆ ಪದರಂಗದ
ಚೌಕು ಮನೆಗಳ ಚೌಕಟ್ಟಿನಲ್ಲಿ

ಪದರು ಪದರಾಗಿ ಬಿಡಿಸಿಟ್ಟ
ಹಾಳೆಯಲ್ಲಿ, ಪದವಿಭಾಗ ಮಾಡಿ
ಪದಪಲ್ಲಟ ಮಾಡ ಹೊರಟೆ
ಪದ ಪುಂಜಗಳ ನಡುವೆ
ಪದಾರ್ಪಣ ಮಾಡಿ
ಪದಾವೃತ್ತಿ ಮಾಡ ಹೊರಟೆ

ಪರಾಮರ್ಶೆ ಮಾಡದೇ, ಪರೀಕ್ಷಕಳಾ ಗದೆ, ಪದಜೋಡಣೆ ಮಾಡಿ
ಪರಭಾರೇ ಮಾಡುವ ಕಾತುರ
ಪರವಶಳಾಗಿ ಪರವಾನಗಿ
ಬೇಡದೆ, ಛಾಪು ಒತ್ತುವ ಅವಸರ

ಪದಗಳ ಜೋಡಣೆಗೆ
ಪರಾಗ ಸ್ಪರ್ಶದ ತಳುಕು
ಪದಗಳ ವಿಂಗಡಣೆಗೆ
ಸಾರ್ಥಕತೆಯ ಮೆರುಗು
ಪರಾಂಬರಿಸುವ, ವಿಮರ್ಶಿಸುವ
ಕೇಳುಗರೇ ನೀವೇ ನನ್ನ ಪದಗಳ ಹೆಜ್ಜೆಗುರುತುಗಳು


About The Author

7 thoughts on “ಸುಧಾ ಪಾಟೀಲ್ ಕವಿತೆ-ಪದಗಳು”

  1. ಪದಗಳ ಸುಂದರ ಮನಸಿನ ಪದರನ್ನು ಬಿಚ್ಚಿಟ್ಟ ಭಾವ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಸುಧಾ .

    1. ಪ್ರಥಮ ಪದಪುಂಜಗಳನ್ನು ಪಾರದರ್ಶಕತೆಯಿಂದ ಜೋಡಿಸಿ ಪ್ರೇಕ್ಷಕರನ್ನು ಪುಳಕಿತಗೊಳಿಸಿರುವಿರಿ ಸುಧಾ

      1. ಪರಿಪೂರ್ಣ ಅರ್ಥದಿ ಪದಗಳಪುಂಜವನ್ನು ಪದವಾಗಿಸಿ ಪ್ರಫುಲ್ಲತೆಯಿಂದ ಪಸರಿಸುವಂತೆ ಮಾಡಿರುವಿರಿ ಸುಧಾ …. ಅತ್ಯಂತ ಸುಂದರವಾಗಿ ಮೂಡಿಬಂದಿದೆ .

  2. ಪ್ರಥಮ ಪದಪುಂಜಗಳನ್ನು ಪಾರದರ್ಶಕತೆಯಿಂದ ಜೋಡಿಸಿ ಪ್ರೇಕ್ಷಕರನ್ನು ಪುಳಕಿತಗೊಳಿಸಿರುವಿರಿ ಸುಧಾ -❣️

Leave a Reply

You cannot copy content of this page

Scroll to Top