ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೂ – ರೂಹು

One Women Shopping outdoor

ತುಸು ಅರಳಿದ ಹೂ ಕಿತ್ತು
ದೇವರಿದ್ದ ಪಟದ ಮೇಲೆ
ಏರಿಸಿದೆ; ಅರೆಗಳಿಗೆ
ನಕ್ಕು ಬಾಡಿ ಹೋಯ್ತು
ನಸು ಮೊಗ್ಗನು ಕೊಯ್ಯದೆ
ಬಿಟ್ಟೆ; ಅಂಗಳದಿ ಸಂಜೆವರೆಗೆ
ಪರಿಮಳವೊಂದು ತೇಲಾಡಿತು

ಹೂ ಬಣ್ಣ ಕದಿವ ಆಸೆಗೆ
ಮನಸ್ಸು ಸೈ ಎಂದು ಹೂ
ಕೊಯ್ದೆ ಕಣ್ಣಿಗಂಟಿದ್ದ ಬಣ್ಣ
ಬೆರಳ ಸೋಕದೆ ಮಂಕಾಯ್ತು

ಮಕರಂದ ಹೀರಲು ಬಂದ
ದುಂಬಿಯಿಂದ ಹೂ ರಕ್ಷಿಸಲು
ದಾರಿಗಡ್ಡ ನಿಂತೆ; ಘಮಲು
ಮೂಗಿಗೆ ಸವರಿತು ಹಣ್ಣೊಂದ
ಕುಟುಕಿ ಹಕ್ಕಿ ಮರಿಗೆ ನೀಡಿತು

ಗಿಡದ ನಿಗೂಢ ರಹಸ್ಯಗಳನು
ಚೆಲುವ ಹೂವೊಂದು ಜಗಕೆ
ಮೌನವಾಗಿ ಹೇಳಿಬಿಟ್ಟಿತ್ತು
ಮಣ್ಣಿನ ಸಾಂಗತ್ಯ ಮಾಡಿದ್ದ
ಬೇರುಗಳು ಅಲ್ಲಿಯೇ ನಾಚಿ
ಅವಿತುಕೊಂಡವು


About The Author

Leave a Reply

You cannot copy content of this page

Scroll to Top