ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಎಷ್ಟೋ ವರುಷದ ಒಲವು
ಮನ ತುಂಬಿ ತುಳುಕಿತ್ತು
ಅರಿಯದೆ ಮಾತು
ಮೌನಕ್ಕೆ ಶರಣಾಗಿತ್ತು
==

ಎಷ್ಟು ನಿಧಾನ ನಡೆಯುತ್ತಿದ್ದರು
ಹಾದಿ ಬಲು ಬೇಗ ಓಡುತ್ತಿದೆ
ಕಡು ಬಿಸಿಲು ಜಡಿ ಮಳೆಯಾಗಿದೆ
ಇದೆ ಇರಬಹುದೇನೋ ಪ್ರೇಮ
==

ಒಳಗೊಳಗೆ ಬಚ್ಚಿಟ್ಟು
ತಳಮಳಿಸಿದೆ ಏಕೆ
ನೀನೊಮ್ಮೆ ಹೇಳಬಾರದೆ
ಮನದ ಮಾತು….
==

ಅಪರಿಚಿತವಾಗಿದ್ದ ಕಾಲವದು
ನನ್ನಲ್ಲಿಯೂ ಅಡಗಿತ್ತು ನಿನ್ನ ರೂಪ
ನೆರಳಾಗಿ ಹಿಂದೆ ಮುಂದೆ ಅಳಿದುಳಿದು
ಪ್ರಕಟಗೊಂಡಿತು ನಿನ್ನ ಕಂಗಳಲ್ಲಿ ನನ್ನ ರೂಪ


About The Author

Leave a Reply

You cannot copy content of this page

Scroll to Top