ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿ ಶೂನ್ಯತೆ

ವಿದ್ಯಾಶ್ರೀ ಅಡೂರ್

“Closeup oil painting of young girl face, full frame background, my own artwork”

ಬರಲೊಲ್ಲೆನೆನುತಿಹಳು ಕಾವ್ಯಕನ್ನಿಕೆಯಿಂದು
ಕುಪಿತಳಾಗಿಹಳೇನೋ ನನ್ನ ಮೇಲೆ..
ಹಿಡಿಯಲಾಗದೆ ಅವಳ ಕನವರಿಸುತಿಹೆನಿಲ್ಲಿ
ಅವ್ಯಕ್ತ ಗೆರೆಗಳದು ಹಣೆಯ ಮೇಲೆ..

ಮುಗುಳುನಗೆಗೊಂದರ್ಥ ನಿಶ್ಶಬ್ಧಕಿನ್ನೊಂದು
ಪದಪುಂಜದೊಡತಿಯದು ಮಿಂಚು ಬೆಳಕು..
ಎಷ್ಟು ಹಲುಬಿದರೂನು ಎಷ್ಟು ನಲುಗಿದರೂನು
ಬರಲೊಲ್ಲದಿರುವವಳ ಕಾಯಬೇಕು..

ಹನಿಯುವಳು ಮಂಜಂತೆ ತೊನೆಯುವಳು ಮಳೆಯಂತೆ
ಅಡಿಗಡಿಗೆ ಬರಗಾಲ ಅವಳದೇ ಇಚ್ಛೆ..
ಬಂದಾಗ ಝಳಪಿಸುತಾ ಬರದಾಗ ಮರುಗಿಸುತಾ
ಸರ್ವತಂತ್ರಳೂ ಅವಳೇ,ಅವಳದೇ ಸ್ವೇಚ್ಛೆ..


About The Author

3 thoughts on “ವಿದ್ಯಾಶ್ರೀ ಅಡೂರ್ -ಕವಿತೆ-ಕವಿ ಶೂನ್ಯತೆ”

  1. ಪದಗಳ ಹೆಣೆದ ಶೈಲಿ ಉತ್ತಮ ವಾಗಿತ್ತು. ಹೋಲಿಕೆಯ ಛಾಯಾ ಚಿಂತೆನೆಗೆ ದಾರಿಯಾಗಿತ್ತು.

Leave a Reply

You cannot copy content of this page

Scroll to Top