ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೇಮ ಪ್ರಕಾಶ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಇದು ನಿನಗೆ ಧರ್ಮವೇ
ತಿರೆಯಲುತ್ತಮನೆನಿಸಿ ತಾಮಸ ತೊಲಗಿಸಿ
ಪಾವನ ಪರಂಜ್ಯೋತಿ ಬೆಳಗಿಸುವ
ಎನ್ನಾತ್ಮದ ಪ್ರೇಮ ಪ್ರಕಾಶನೇ

ನೂರು ನೋವನು ಸಹಿಸಿ
ಮುಳುಗಿಹೆನು ಬಾಳ ಹಳವಂಡದಲಿ
ಕರೆದಿರುವೆ ಕರಪಿಡಿದು ಮೇಲೆತ್ತು
ಋಣಿಯಾಗುವೆ ಉಸಿರ ಪ್ರಬೋಧನೆ

ಧನ್ಯನಾ ಪಡೆದ ಒಲವಿಗೆ
ಗೆಲುವಿನ ನಗುನೀಡಿ ಉದ್ಧರಿಸು
ಕನಿಕರಿಸು ಕೈಮುಗಿವೆ ಕರುಣಿಯಲಿ
ಎನ್ನೊಡಲ ಪ್ರಾಣ ಪ್ರಭುವೇ

ಕನಸಿನ ಲೋಕವನು ಬಿಡಿಸಿ
ಕಣ್ಣೆದುರು ದರುಶನ ನೀಡಿ
ಉದ್ಧರಿಸಿ ಉಳಿಸು ಉಪಚರಿಸಿ
ಇಹಪರ ತ್ರಿಲೋಕ ಪ್ರಚಂಡನೆ

ನನ್ನರಿಕೆಯ ಪೂರೈಸಿ ಪೊರೆಯೋ
ಶರಧಿ ಸುರರತ್ನ ವಲ್ಲಭನೆ
ಸದಾಶಿವನ ಒಲುಮೆಯ ಪಡೆದೆ
ಒಲಿಯದಾದೆಯ ಎನಗೆ ಪ್ರಾಣಪದಕನೆ


About The Author

Leave a Reply

You cannot copy content of this page

Scroll to Top