ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಮಗಿದುವೇ ಹೊಸ ಸವಂತ್ಸರ

ಸುಲೋಚನಾ ಮಾಲಿಪಾಟೀಲ

ನಿಲ್ಲದ ಸಮಯ ಮನುಜನಿಗದೋ ಅಭಯ
ಜಗವಿದು ಸಂಚಾರಿ ಸಾಗುತಿಹುದು ನಿರ್ಭಯ
ಸ್ನೇಹ ಸಂಬಂಧಗಳಲಿ ಚಿಗುರಲಿ ಹೊಸ ಅಲೆಯ
ಹೊಸ ಪರ್ವದಲಿ ನಾವು ಕಾಣುವೆವು ಅಕ್ಷಯ

ನಾವುಗಳು ನಮಗಾಗಿ ಹಾಕಿಕೊಂಡ ಲೆಕ್ಕಣಿಕೆಯ
ಹಾಕಿಕೊಂಡ ಸಮಯ ಸಂದರ್ಭದ ಗಣನೆಯ
ಆಚರಣೆಗೆ ಸಿದ್ಧವಾದ ಜನಮನಗಳ ಲಾಂಛನೆಯ
ತೊರುವ ವಿವಿಧ ಭಾವಭಂಗಿಯ ಶುಭಕಲ್ಪನೆಯ

ಪ್ರಕೃತಿಯಲಿ ಪ್ರತಿದಿನವು ಬದಲಾಗುವ ಹೊಸತನವು
ಮನಗಣನೆಯ ಪ್ರವೃತ್ತಿಗೆ ಪ್ರತಿಕೂಲದ ಶುಭಕಾಲವು
ಸೂರ್ಯೋದಯ ಚಂದ್ರೋದಯದ ಸದಾಕಾಲವು
ವಿವೇಕತೆಯಲಿ ವ್ಯವಹರಿಸುವ ಕ್ಷಣದ ಶುಭಫಲವು

ಅರಿವಳಿಕೆಯ ಪಯಣ ಶುಭದಿಕ್ಸೂಚಿಯ ಕಿರಣ
ದುರಾಚಾರ ದುರ್ನಡತೆಯ ದುರ್ಗತಿಗೆ ಆವ್ಹಾನ
ಸಜ್ಜನರ ಸಂಗದಲಿ ಸವಿದ ಸಜ್ಜನತೆಯ ಸವಿಜೇನ
ಪಾಶ್ಚಿಮಾತ್ಯದ ನಡೆನುಡಿಗೆ ಹಾಕೋಣ ಕಡಿವಾಣ

ನಮ್ಮದೆಯಾದ ಸ್ಪಚ್ಛ ಶುಭ್ರತೆಯ ಶುಭಸಂವತ್ಸರ
ಶೋಭಾಯಮಾನದ ಭವ್ಯತೆಯ ಸೂಚಿಸುವ ಮರ
ಸಮೃದ್ಧವಾಗಿ ಬೆಳೆದ ಸಂಸ್ಕೃತಿಗೆ ಬೆಲೆ ನೀಡುವ ಧರ
ಅದುವೇ ಪ್ರತೀತಿ ಉಡುಗರೆಯ ಹೊಸ ಸವಂತ್ಸರ


About The Author

Leave a Reply

You cannot copy content of this page

Scroll to Top