ಕಾವ್ಯ ಸಂಗಾತಿ
ಅಭಿಸಾರ
ವಸಂತ ವಿ.ಬೆಕ್ಕೇರಿ

ಕಾರಣವೇ ತಿಳಿಯದು
ಮನಸಲ್ಲೇನು ಚಡಪಡಿಕೆ
ಸಮಯವೇ ಸಾಗದು
ಸಂಗಾತಿ ಇಲ್ಲದೆ.!
ಕಾಯದೇ ಕೋಗಿಲೆ
ಮಾಮರ ಚಿಗುರಲು
ನೃತ್ಯಿಸುವುದೇ ನವಿಲು ?
ಮೂಗಾರು ಮೊಳಗಲು!

ಶೃಂಗಾರ ಬೇಕಿದೆ
ಭಾವನೆಯ ಬೆಸಯಲು
ಬೆಸುಗೆಗಾಗಿ ಕಾದಿದೆ
ಏದೆಯ ಭಾವ ಬೆರೆಯಲು!
ಸಂಬಂಧವಿರದೆ
ಸುಯೋಗ ಬರದು
ಸಂಚಾರ ಸಾಕಾಗಿ
ಏಕಾಂತ ಬೇಕಾಗಿದೆ!
ಅರಳುವ ಹೂ
ಮೂಡಿವ ಭಾಗ್ಯ
ಬಯಸುವುದೇ?!
ಹರಿವ ನದಿ
ಸಾಗರವ ಸೇರದೆ?!




1 thought on “ವಸಂತ ವಿ.ಬೆಕ್ಕೇರಿ ಕವಿತೆ-ಅಭಿಸಾರ”