ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಅನುರಾಧಾ ಶಿವಪ್ರಕಾಶ್

ಅಂಗಳದ ತುಂಬೆಲ್ಲಾ ಹೂವರಳಿ ನಗುತಿದೆ ಬಾರೆಯಾ ಗೆಳೆಯಾ
ತಿಂಗಳಿನ ಬೆಳಕಿ‌ನಲಿ ಒಲವ ಬಿಂಬವನು ತೋರೆಯಾ ಗೆಳೆಯಾ

ರಾತ್ರಿ ರಾಣಿಯು ಬಿರಿದು ಕರೆಯುವಳು ಕಂಪ ಸೂಸುತಲಿ
ಪ್ರಕೃತಿ ಪುರುಷನ ಸಮಾಗಮಕೆ ಮುದ್ರೆ ನೀಡೆಯಾ ಗೆಳೆಯಾ

ಮಲ್ಲಿಗೆಯ ಚಿತ್ತಾರ ಮನದ ಮಂಟಪದಿ ನಳನಳಿಸುತಿಹದು
ಕೆಂಪೇರಿದ ಕೆನ್ನೆಯಲಿ ಪ್ರೀತಿಯ ಭಾಷ್ಯ ಕಾಣೆಯಾ ಗೆಳೆಯಾ

ತಾರೆಗಳ ತೋಟದಲಿ ಸುತ್ತಾಡು ಬಾ ಎನಲಾರೆ ನಾನು
ಬಾಳ ದಾರಿಯಲಿ ಪ್ರೇಮ ಕುಸುಮಗಳ ಹಾಸೆಯಾ ಗೆಳೆಯಾ

ಅನು ಬೆಸೆದ ಬಂಧಗಳ ಕಳಚಲಾರಳು ಅರಿಯದೇ ನಿನಗೆ
ತನುವಿನಲಿ ಮಧುರ ಭಾವವ ಹದವಾಗಿಮೀಟೆಯಾ ಗೆಳೆಯಾ


About The Author

1 thought on “ಅನುರಾಧಾ ಶಿವಪ್ರಕಾಶ್-ಗಝಲ್”

Leave a Reply

You cannot copy content of this page

Scroll to Top