ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮುನಿಸೇತಕೆ ಮನಸೇ

ಮಹೇಶ್ ಹೆಗಡೆ ಹಳ್ಳಿಗದ್ದೆ

ಮುನಿಸೇತಕೆ ನಿನಗೆ ಮನಸೇ ಇಂದು
ಹೂವರಳಿ ನಗುವಂತೆ ನಗುವುದನು ಬಿಟ್ಟು
ಮುಂಜಾನೆಯ ಎಳೆ ಬಿಸಿಲಿನಲಿ ಮಿಂದು
ಹಗುರಾಗಿಸು ಎದೆಯ ದುಗುಡವನು ಸುಟ್ಟು

ತರು ಲತೆಗಳೆಲ್ಲ ಬಳುಕಿವೆ ಸಂತಸವ ತಂದು
ಹಸಿರು ಹೊದಿಕೆಯ ಹೊದ್ದು ಬಳೆಯ ತೊಟ್ಟು
ನಕ್ಕುಬಿಡು ಒಮ್ಮೆ ನೀ ಕೆಂದುಟಿಯ ಬಿರಿದು
ಭಾವದಲೆಗಳನೆಲ್ಲ ಸುರಿದು ಕಣ್ಣೊಳಗೆ ಇಟ್ಟು

ಎಲ್ಲಿ ಓಡುವೆ ನೀ ಅಲೆದಲೆಯುತ ನೊಂದು
ಮರೆಯದೇ ಮರಳು ಮನೆಗೆ ನೀ ನಗುವನುಟ್ಟು
ಹುಸಿಗೋಪ ತುಸು ಇರಲಿ ಅಲ್ಲಲ್ಲಿ ಸೊಗಸಿಹುದು
ಓ ಮನವೆ ಮುನಿಯದಿರು ನೀ ಪ್ರೀತಿ ನೆಟ್ಟು


About The Author

2 thoughts on “ಮಹೇಶ್ ಹೆಗಡೆ ಹಳ್ಳಿಗದ್ದೆ ಕವಿತೆ-ಮುನಿಸೇತಕೆ ಮನಸೇ”

  1. Anbumani Philip Raja

    SIR PLEASE TRANSLATE IN TAMIL. I AM VERY MUCH INTEREST TO KNOW DEEP KANNADA WORDS. WHAT IS THE MEANING OF ಮುನಿಸೇತಕೆ.

  2. Anbumani Philip Raja

    sir please translate your following poem in English or tamil
    ಮುನಿಸೇತಕೆ ನಿನಗೆ ಮನಸೇ ಇಂದು
    ಹೂವರಳಿ ನಗುವಂತೆ ನಗುವುದನು ಬಿಟ್ಟು
    ಮುಂಜಾನೆಯ ಎಳೆ ಬಿಸಿಲಿನಲಿ ಮಿಂದು
    ಹಗುರಾಗಿಸು ಎದೆಯ ದುಗುಡವನು ಸುಟ್ಟು

    ತರು ಲತೆಗಳೆಲ್ಲ ಬಳುಕಿವೆ ಸಂತಸವ ತಂದು
    ಹಸಿರು ಹೊದಿಕೆಯ ಹೊದ್ದು ಬಳೆಯ ತೊಟ್ಟು
    ನಕ್ಕುಬಿಡು ಒಮ್ಮೆ ನೀ ಕೆಂದುಟಿಯ ಬಿರಿದು
    ಭಾವದಲೆಗಳನೆಲ್ಲ ಸುರಿದು ಕಣ್ಣೊಳಗೆ ಇಟ್ಟು

    ಎಲ್ಲಿ ಓಡುವೆ ನೀ ಅಲೆದಲೆಯುತ ನೊಂದು
    ಮರೆಯದೇ ಮರಳು ಮನೆಗೆ ನೀ ನಗುವನುಟ್ಟು
    ಹುಸಿಗೋಪ ತುಸು ಇರಲಿ ಅಲ್ಲಲ್ಲಿ ಸೊಗಸಿಹುದು
    ಓ ಮನವೆ ಮುನಿಯದಿರು ನೀ ಪ್ರೀತಿ ನೆಟ್ಟು

Leave a Reply

You cannot copy content of this page

Scroll to Top