ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರುಣಾ ನರೇಂದ್ರ

ಹಸಿರ ಹೊನ್ನು

ಮಲೆನಾಡ ಮನೆಯಲ್ಲಿ
ನಗುನಗುತಲಿರುವಳು
ಕುಸುಮ ಕೋಮಲೆ
ಅದೆನಿತು ಜನರನು
ಕೈ ಮಾಡಿ ಕರೆವಳು
ಸಸ್ಯಶ್ಯಾಮಲೆ !

ಉದಯ ಸೂರ್ಯನ
ಹಣೆಬೊಟ್ಟು
ಭೂರಮೆಗೆ ಶೃಂಗಾರ
ಹಸಿರುಟ್ಟ ರಮಣಿಗೆ
ಮುತ್ತ ಮಣಿ
ಬಲು ಭಾರ

ನೋಡಲ್ಲಿ…
ಮರವನಪ್ಪಿದ
ಬಳ್ಳಿಯ ಒನಪು!
ಅರೆ ಬಿರಿದು
ಮುಗುಳ್ನಗುವ
ಹೂವಿನ ಕದಪು !

ಸಹ್ಯಾದ್ರಿಯ ಸೆರಗಿನಲಿ
ಮಂಜ ಮಣಿ ಸಿಂಗಾರ
ಮೈ ತುಂಬಾ ನಳನಳಿಸಿದೆ
ಹ‌ಚ್ಚ ಹಸಿರ ಬಂಗಾರ


About The Author

Leave a Reply

You cannot copy content of this page

Scroll to Top