ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ನರಸಿಂಗರಾವ ಹೇಮನೂರ
ಮಾತಾಡು ಒಂದೊಮ್ಮೆ ಮೌನ ಮುರಿದು

ಮನದ ಬೇಗುದಿಯನ್ನು
ಹೇಗೆ ಹೇಳಲಿ ನಿನಗೆ
ನಿನ್ನ ಕಣ್ಣೆದುರಿಗೇ
ಇರುವುದೆನ್ನ ಸ್ಥಿತಿಯುl
ನಿನ್ನೊಂದೆ ಕಿರು ನೋಟ
ನನ್ನ ಜೀವನಕಿಂದು
ಜೀವರಸವನೆ ತುಂಬಿ
ಹರಿವ ತೊರೆಯುl
ನಿನ್ನ ಸುಂದರ ವದನ
ನೋಡುತ್ತ ನೋಡುತ್ತ
ಕದಲದೇ ನಿಂತಿಹುವುದು
ನನ್ನ ಮನವುl
ಬೈಗು ಬೆಳಗುಗಳೆಲ್ಲ
ಯಾಂತ್ರಿಕವು ನನಗೀಗ
ನಿನ್ನ ನೆನಪಲೆ ನಾನು
ಕೊರಗುತಿಹೆ ದಿನದಿನವುl
ನಿನ್ನ ಹೊರತೀ ಜೀವ
ಬದುಕಿ ಉಳಿಯದು ಗೆಳತಿ
ನೀನಿರದ ಬದುಕೆನಗೆ
ಬರಿದೊ ಬರಿದುl
ಮನದಾಳದೀ ಮೊರೆತ
ಕೇಳಿಸದೆ ಸಖಿ ನಿನಗೆ?
ಮಾತಾಡು ಒಂದೊಮ್ಮೆ
ಮೌನ ಮುರಿದುl
ನರಸಿಂಗರಾವ ಹೇಮನೂರ




