ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಹಮೀದಾ ಬೇಗಂ ದೇಸಾಯಿ

ವಿಷವೂಡುವ ಜನರ ನಡುವಲಿ ಬದುಕಬೇಕಾಗಿದೆ
ವಂಚಿಸುವ ಕುತಂತ್ರರ ಜಾಲದಲಿ ನರಳಬೇಕಾಗಿದೆ

ಮುಖವಾಡವ ಹಾಕಿದವರ ಜೊತೆಯಲಿ ನಡೆಯಬೇಕಾಗಿದೆ
ಜಾತಿಬೇಲಿಯ ಕಟ್ಟಿದವರ ನೆರಳಲಿ ನಲುಗಬೇಕಾಗಿದೆ

ಅಂಧಶ್ರದ್ಧೆಯ ಹರಡಿದವರ ಕತ್ತಲಲಿ ತೆವಳಬೇಕಾಗಿದೆ
ಬಂಧುರವ ಮುರಿದವರ ಹಂಗಿನಲಿ ಮರುಗಬೇಕಾಗಿದೆ

ಎಂಜಲೆಲೆಯ ನೆಕ್ಕುವವರ ತಟ್ಟೆಯಲಿ ಹಳಸಬೇಕಾಗಿದೆ
ಅನಾಚಾರವ ಮೆರೆವವರ ಅಬ್ಬರದಲಿ ಕೊರಗಬೇಕಾಗಿದೆ

ನೆತ್ತರವ ಸುರಿವವರ ಧಾರೆಯಲಿ ನೆನೆಯಬೇಕಾಗಿದೆ
ಬೇಗಂ ಮನವ ರಮಿಸುವವರ ಒಲವಿನಲಿ ಬೆರೆಯಬೇಕಾಗಿದೆ-

——————————————

.

About The Author

2 thoughts on “ಹಮೀದಾ ಬೇಗಂ ದೇಸಾಯಿರವರ ಗಜಲ್”

Leave a Reply

You cannot copy content of this page

Scroll to Top