ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಗದ ಪ್ರೀತಿ

ನಾಗಜಯ ಗಂಗಾವತಿ

ಸಾವೆಂಬ ಕದವ ನಾ ತಟ್ಟಿ ಬಂದಿದ್ದೆ
ನಾ ಸಾವ ಬಯಸಿ.
ಸಾಯುವುದು ಲೇಸೊ, ಬದುಕುವುದು ಲೇಸೊ ತಿಳಿಯದೆ.
ನಾನಾಗ ಅತ್ತದ್ದು ನನ್ನಂತರಂಗದ ಸೊಲ್ಲ ಸೋಲಿಗೆ.

ನಾ ಕಾಣದಾಗಿದ್ದೆ ಚೇತನವ
ನಿತ್ಯ ತೇಜದ ಅಭಾವದಲ್ಲಿ ನಿರಾಳತೆಯರಸಿ ಹೋಗಿದ್ದೆ
ಸಮತಟ್ಟಿನ ಬದುಕು ಬಿಟ್ಟು.
ಹೂವ ಹಾಸಿಗೆಯ ಮಗ್ಗಲು ಬಿಟ್ಟು.

ಅತ್ತು ಅತ್ತು ಕೊರಗಿದಾಗ ಹೊಳೆದದ್ದು
ನಿಜದ ಸೊಲ್ಲು.
ಸಾವು ತೆಗೆದು ಕೊಳ್ಳುವ , ಕೊಳ್ಳುವ ವಸ್ತುವಲ್ಲ
ಅದು ತಾನಾಗೆರೊರಗುವ ಎರಗುವ ನಿಸ್ತೇಜ ಭಾವ.

ಏರುಪೇರುಗಳು, ಗೊದ್ದಗಳು, ಗೊಂದಲಗಳಿದ್ದಾವು
ನನಗಲ್ಲದೆ ಮತ್ತಾರಿಗವು…
ಅಂತೆ ನಾ ಸಾವಿನ ಕದ ಮುಚ್ಚಿ ಬಂದಿದ್ದೆ.
ಸಚೇತನದ ಪಾಡಾಗಿ ಉಳಿದು

ಉಚಿತ ಸಾವು’ ಗೆ ಈಡಾಗೊ ಹಂಬಲಕ್ಕೆ.
ಬದುಕಿಗೆ ಎದೆ ಕೊಟ್ಟು ; ಹೆಗಲೂ ಕೊಡುವುದಕ್ಕೆ…
ನಾ ಉಳಿದಿದ್ದೆ , ಮರಳಿದ್ದೆ…


About The Author

18 thoughts on “ಜಗದ ಪ್ರೀತಿ-ನಾಗಜಯ ಗಂಗಾವತಿ-ಕವಿತೆ”

  1. ಲಕ್ಷ್ಮೀದೇವಿ

    ಸಾವು ಗೆದ್ದ ಕವನ ಮನಸ್ಸನ್ನು ಗೆದ್ದಿದೆ ಸರ್

      1. ಬಯಸಿದಾಗ ಕಾಣದಿರುವ ಮುಖ ಸಾವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಸಾವು ಖಚಿತವಾದರೂ ಸಾವನ್ನು ಗೆದ್ದು ಬದುಕುವ ಬಗ್ಗೆ ಮನಮುಟ್ಟುವಂತೆ ಉಲ್ಲೇಖಿಸಿದ್ದೀರಿ. ಅಭಿನಂದನೆಗಳು

      2. ಶರಣು ಯಾಪಲಪರವಿ

        ಬಯಸಿದಾಗ ಕಾಣದಿರುವ ಮುಖ ಸಾವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಸಾವು ಖಚಿತವಾದರೂ ಸಾವನ್ನು ಗೆದ್ದು ಬದುಕುವ ಬಗ್ಗೆ ಮನಮುಟ್ಟುವಂತೆ ಉಲ್ಲೇಖಿಸಿದ್ದೀರಿ. ಅಭಿನಂದನೆಗಳು

  2. ರಮೇಶ ಗಬ್ಬೂರ್

    ಗಂಗಾವತಿ ಅಡಿಗರ ಕವಿತೆ ಅಂದಮೇಲೆ ಕೇಳಬೇಕೆ…

    1. ಅರಳಿ ನಾಗಭೂಷಣ ಗಂಗಾವತಿ

      ಅಡಿಗಡಿಗೆ ನನ್ನ ಕಾಡುವ ಕಾವ್ಯಗಳು ಅಡಿಗರವು ನಿಜ.
      ಅದರೆ ನಾ ಆ ಮಹಾಚೇತನ ಅಡಿಗರ ಅಡಿಯಾಳು.
      ಅವರ ಕಾವ್ಯಗಳ ರಸ ಸ್ವಾದ ನನ್ನ ಬೆರಳಿಗೆ ಸಿಕ್ಕಷ್ಟು ಉಂಡವನು. ನಾನವರ ” ಅಡಿ ” ಮಾತ್ರ ಗಂಗಾವತಿ ಅಡಿಗ ಎನ್ನುವುದು ನಿಮ್ಮ ಆಶಿರ್ವಾದ ಎಂದು ಸ್ವಿಕರಿಸುತ್ತೆನೆ….

  3. Raghavendra Mangalore

    ಬಹಳ ಚಂದದ ಕವಿತೆ. ಓದಲು ಖುಷಿಯಾಗುತ್ತದೆ. ಅಭಿನಂದನೆಗಳು

  4. ಅಧ್ಭುತ ಬರಹ ಸರ್ ….ನಾನು ಕೇಳಿದ ಹಾಗೆ ಇದು ನಿಮ್ಮ ಅನುಭವಕ್ಕೆ ಬಂದು ಬರೆದ ಕವನ ಎಂದು….ಹೃದಯ ಸ್ಸ್ಪರ್ಶಿ ಸಾಲುಗಳು

  5. ಚನ್ನಬಸವ ಆಸ್ಪರಿ

    ಸಾವನ್ನು ಗೆಲ್ಲುವ ಸಂಗತಿಯೇ ಬಹು ವಿಶಿಷ್ಟ.ಉತ್ತಮ ಕವಿತೆ ಸರ್

  6. ಕಣೋ ನಾನು ಊಹೆ ಮಾಡಿರೋದು ಇದು ನಿನ್ನ ಅನುಭವದಿಂದ ಬಂದಿರೋ ಕವಿತೆ ಅಂತ ಅನ್ಕೊಂಡೆ, ತುಂಬಾ ಚೆನ್ನಾಗಿ ಮೂಡಿದೆ ಹೆಮ್ಮೆ ಆಗುತ್ತೆ ನನಗೆ

Leave a Reply

You cannot copy content of this page

Scroll to Top