ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬ್ರಹ್ಮ ಪುಷ್ಪವು…… ನೀನಾಗು

ಯಮುನಾ. ಕಂಬಾರ

.

ಅರಿವನು ತಿಳಿಸುವ
ಭವದುರಿ ಅಳಿಸುವ
‘ಮನ ಮೆಚ್ಚುವ ಗುರು ‘ ನೀನಾಗು

ಕಾಯದ ಮೋಹದ
ಬಲೆಯನು ಮೀರಿ
‘ ನಡೆಯುವ ಕಾವಿ ‘ ನೀನಾಗು

ಬೀದಿಯ ಹೂಗಳು
ಬಾನಿನ ಚುಕ್ಕೆಯು
‘ಹೊಗಳುವ ತಪಸ್ವಿ’ ನೀನಾಗು

ಬಣ್ಣದ ಮೋಹಕೆ
ಜಾರದ ಜೀವ
‘ತ್ಯಾಗ ಯೋಗಿ ‘ ನೀನಾಗು

ಕೆರೆಯ ನೀರನು
ಕೆರೆಗೆ ಚೆಲ್ಲಿ
‘ಬರಿಗೈ ಭಕ್ತ ‘ ನೀನಾಗು

ಅನ್ನ ಅಕ್ಶರ
ಭಕ್ತಗೆ ನೀಡುವ
‘ತ್ರಿವಿಧ ದಾಸೋಹಿ ‘ನೀನಾಗು

ಮನದ ಕಾಳವ
ಪರಿ ಪರಿ ಸುಟ್ಟು
‘ಅರಳುವ ಕಲ್ಲು’ ನೀನಾಗು

ಬಗೆ ಬಗೆ ಬಣ್ಣದ
ಹೂವಲಿ ಅರಳಿದ’

ಬ್ರಹ್ಮ ಪುಷ್ಪವು ‘ ನೀನಾಗು

——————-

About The Author

2 thoughts on “ಯಮುನಾ. ಕಂಬಾರ-ಬ್ರಹ್ಮ ಪುಷ್ಪವು…… ನೀನಾಗು”

Leave a Reply

You cannot copy content of this page

Scroll to Top