ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ನಿನ್ನಂತೆಯೇ ಅವಳು ‘ನೀಲಕುರಂಜಿ’

ಟಿ.ದಾದಾಪೀರ್. ತರೀಕೆರೆ

ನೀನು ಅಪರೂಪಕ್ಕೆ
ಅರಳಿದರು ನೆಲವೆಲ್ಲ
ಹೊಳೆವಂತೆ ‘ ನೀಲ ಕುರುಂಜಿ ‘

ಬಿಸಿಲಿಗೆ ಕಾದು ಕೆಂಪಾಗಿ
ಮಳೆಗೆ ತಂಪಾಗಿ ಕಪ್ಪಿಟ್ಟ ನೆಲ
ಈಗ ನಿನ್ನ ತುಂಬಿಕೊಂಡು
ನಳ ನಳಿಸಿದೆ
ಎಲ್ಲೆಲ್ಲೂ ನೀಲಿ, ನೀಲಿ
ಅಂಬರಕ್ಕು ಭುವಿಗೂ
ವ್ಯತ್ಯಾಸ ಹೇಗೆ ಹುಡುಕಲಿ
ಎಲ್ಲವು ಶುಭ್ರ ನೀಲಿ

ಗೆಳತಿ ನೀವಿಬ್ಬರೂ ಒಂದೇ
ಸಮತೋಲಿತ
ಹವಾಮಾನದಲ್ಲಿ ಹುಟ್ಟಿದವರು
ಮಲೆ,ಬೆಟ್ಟ,ಕಣಿವೆಗಳಲ್ಲಿ

ನಿನ್ನ ನೀಲಾಂಬರ ಅಂದಿದ್ದೆ
ಭೂಮಿ ಎಂದು ಕರೆದೆ
ಇದರಥ೯ ನಿನಗಷ್ಟೆ ಗೊತ್ತು
ಕವಿತೆ ಬರೆಯಲು ಈಗ
ನನಗಿಲ್ಲ ಕಷ್ಟ
ಆಕಾಶ ಭೂಮಿ ಎಲ್ಲ ಒಂದೇ ಆಗಿ
ನೀಲಿ, ನೀಲಿಯಾಗಿರುವಾಗ

ಈ ಹೂವಿನ ಸೋಜಿಗ
ನಿನಗೆ ಗೊತ್ತೆ ಗೆಳತಿ?
ಜನರ ವಯಸ್ಸು, ವಷ೯ಗಳ
ಅಳೆಯಲು ಈ ಹೂವೇ
ಅರಳಬೇಕಿತ್ತಂತೆ
ನಿನ್ನ ವಿಷಯದಲ್ಲಿ ಮಾತ್ರ ‘difrence’ ವಯಸ್ಸು,ಕಾಲಗಳು
ಮರೆತೇ ಹೋಗುತ್ತವೆ
ನಿನ್ನ ಸನಿಹದಲ್ಲಿದ್ದಾಗ

ಮುಟ್ಟುವ, ಸೆಲ್ಫಿಗಳ
ಖಯಾಲಿಗೆ ನೀಲಿ ಕುರಂಜಿ
ಕಳೆಗುಂದುತ್ತಿದೆ ಎಂಬ
ನೋವಿನ ಧ್ವನಿ
ಈ ಮಧ್ಯೆ ನನಗೂ ಅದೇ ಭಯ
ಹಾಗೂ ನಿನ್ನ ಮುಟ್ಟುವ,ಸೆಲ್ಫಿಯ
ಬಯಕೆ
ದ್ರಾವಿಡ ಜನರ ‘ ಪ್ರೇಮ ಪುಷ್ಪ’ ‘ದೇವಲೋಕದ ಹೂ’
ಬರೆದರೆ ಮುಗಿಯದ ಕವಿತೆ
ಒಂದೇ ಪದದಲ್ಲಿ ಹೇಳುವೆ
‘ನೀವಿಬ್ಬರು ನೀಲಿ ಕುರಂಜಿ’


About The Author

Leave a Reply

You cannot copy content of this page

Scroll to Top