ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಕನಲಿದ ಹೃದಯಕ್ಕೆ ಪ್ರೀತಿಯ ಮುಲಾಮು
ಹಚ್ಚು ಬಾ
ಕನವರಿಸಿದ ಕನಸುಗಳ ಮೂಟೆಯ ಬಾಯಿ
ಬಿಚ್ಚು ಬಾ

ಕಿನಿಸು ತೊರೆದು ಪ್ರೇಮದಲಿ ನುಡಿಯಬಾರದೆ
ಈಗ
ಕರುಣೆ ತೋರುವ ಸಮಾಧಾನದ ನುಡಿಗಳನು
ಮೆಚ್ಚು ಬಾ

ಕುರುಹು ಉಳಿದು ಹೋಯಿತೆ ತಾಜಮಹಲಾಗಿ
ಇಂದು
ಕಮರಿದ ಒಡಲ ಸವಿಭಾವಗಳನು ತೋಷದಲಿ
ಮುಚ್ಚು ಬಾ

ಕಣ್ಣಾಲೆಯಲಿ ಕುಣಿದು ಹೋಗದಿರು ಮುದ್ದಿನ
ರತ್ನ
ಕಮಲದ ಎಸಳಂತೆ ಮಧುರ ಅಧರವನು
ಕಚ್ಚು ಬಾ

ಕೋಗಿಲೆ ಕಂಠದಲಿ ಸುಶ್ರಾವ್ಯ ಗೀತೆಯನು
ಹಾಡುವೆಯಲ್ಲ
ಕವಿವರ್ಯ ಅಭಿನವನ ಸಂಗವನು ಅವಿರತ
ನೆಚ್ಚು ಬಾ


About The Author

Leave a Reply

You cannot copy content of this page

Scroll to Top