ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಿಶುಗೀತೆ

ಮರಳ ಕು( ಕೂ)ಸುರಿ

ಈರಪ್ಪ ಬಿಜಲಿ ಕೊಪ್ಪಳ

ಓಡಿ ಬಾರೋ ನನ್ನ ಸೇರು
ಮುದ್ದುಕಂದನೆ
ಕಡಲ ತಡಿಯ ಸಂಜೆ ಸಮಯ
ಚಂದ ಕಂದನೆ ||

ಮರಳ ರಾಶಿ ಆಟಕೆ ಖುಷಿ
ಕೇಳೊ ಕಂದನೆ
ಮರಳಿನಲ್ಲಿ ಮಾಡ್ದ ಚಿತ್ರ
ನೋಡೊ ಕಂದನೆ ||

ಮರಳಿನಲ್ಲಿ ಚಿತ್ರ ಬಿಡಿಸಿದ
ಕೈಗೆ ವಂದನೆ
ಕಲೆಗೆ ಬೆಲೆಯು ಕಟ್ಟಲಸಾಧ್ಯ
ಅರಿಯೊ ಕಂದನೆ ||

ಮರಳ ಹಸ್ತದಲ್ಲಿ ನಗುವ
ಪುಟ್ಟ ಕಂದವು
ಬಹಳ ಸೊಗಸು ಅರಳಿತು ಮನಸು
ನೋಡಿ ಚಿತ್ರವು||

ನಂಗು ಮರಳಲಿ ಗೊಂಬೆ ಬಿಡಸೊ
ಆಸೆ ಮಾಮನೆ
ಗುಂಗು ಹಿಡಿಸಿತು ಮರಳ ಕುಸುರಿಯು
ಕೇಳೊ ಮಾವನೆ ||


About The Author

Leave a Reply

You cannot copy content of this page

Scroll to Top