ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಅಮೃತ ಮಹೋತ್ಸವ

ಬೆಂಶ್ರೀ ರವೀಂದ್ರ

.

ಅಮೃತ ಮಹೋತ್ಸವಕೆ ಬರೆಯಬೇಕೆ ಕವನ
ಭಾವೋದ್ವೇಗದಲಿ ಮರೆಯದಿರಲಿ ಜೀವನ

ಸುತ್ತಲೂ ಹಾರಿಸುತ್ತಿರಲಿ ನವಭಾರತ ಧ್ವಜ
ತ್ರಿವರ್ಣದ ನಿಜದರ್ಥವ ನೆನೆಸುತ್ತಿರಲಿ ಮನ

ಸುಮ್ಮನೇರಲಿಲ್ಲ ಗುಡಿ ಗೌರಿಶಂಕರ ಶಿಖರ
ಹಾದಿಲಿ ಹರಿದಿದೆ ಬಲಿದಾನದ ರಕ್ತ ಅಮರ

ಅಹಿಂಸೆ ಸತ್ಯಾಗ್ರಹ ಚಳುವಳಿ ಜನ ಜಾಗೃತಿ
ನಾಡಹೊತ್ತು ನಡೆಯಿತು ಓ ಹಲವು ಸಂತತಿ

ಇಟ್ಟಿಲ್ಲ ಲೆಕ್ಕ ಕೊಟ್ಟಿಲ್ಲ ತಾಮ್ರಪತ್ರ ಪಿಂಚಣಿ
ಭಾರತದ ಭವಿಷ್ಯ ಪ್ರೀತಿಯೆ ಅವರ ರಂಪಣಿ

ಕಿರೀಟಕಿಂದು ಸಟಾಸಟೆ ನುಡಿಯ ಕಕ್ಖಟ
ಅವರಿಗಿಂತ ಇವರು ಹೆಚ್ಚು ಎಂಬ ಕಂಗಾಟ

ಹೊಗಳಿಕೆ ಹೊನ್ನಶೂಲ ಜನಮನಕೆ ಗೂಟವು
ಮರುಳು ನುಡಿಗೆ ತೆರೆದಿಡಿ ಜಾಗೃತಿ ಆಟವು

ಎಪ್ಪತೈದು… ನೂರು ನೂರು ಸಾವಿರ ದಾಟಲಿ
ಬಾಗದಂತೆ ಕಾಯೋಣ ನಾವು ದಿಟ್ಟತನದಲಿ

ಯಾರೋ ಇತ್ತ ಭಾಗ್ಯವಲ್ಲ ನಮ್ಮ ಆರ್ಜನೆ
ನೀವು ನಾವು ಏನೆಂದರಿತರದೇ ಸಮರ್ಥನೆ.


About The Author

5 thoughts on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ”

  1. ಸ್ವಾತಂತ್ರ್ಯ ದ ಹಿರಿಮೆ,ಘನತೆ ಗಾಂಭೀರ್ಯವನ್ನು ಕಾಯ್ದುಕೊಳ್ಳಲು ಎಚ್ಚರಿಸುವ ಉತ್ತಮ ಕವನ.

  2. ವಿಠ್ಠಲ್ ಇಜೇರಿ

    ಅಮೃತ ಮಹೋತ್ಸವಕ್ಕೊಂದು ಉತ್ತಮ ಕವನ
    ಇಜೇರಿ vittal

  3. Rajendra Kittur

    ಸುಂದರವಾಗಿ ಮೂಡಿಬಂದಿದೆ. ಲೇಖನಿ‌ ಹೀಗೆಯೇ ಬರೆಯುತ್ತಲೇ ಇರಲಿ

  4. ಅಮೃತ ಮಹೋತ್ಸವ ಕ್ಕೆ ನಿಮ್ಮ ಸುಂದರ ಕವನ ಬಹಳ ಮೆರುಗು ತಂದು ಕೊಟ್ಟಿದೆ. ಧನ್ಯವಾದಗಳು.

  5. Venkatasubbaiah K

    ಅಮೃತ ಮಹೋತ್ಸವ ಕ್ಕೆ ನಿಮ್ಮ ಸುಂದರ ಕವನ ಬಹಳ ಮೆರುಗು ತಂದು ಕೊಟ್ಟಿದೆ. ಧನ್ಯವಾದಗಳು ಸಾರ್

Leave a Reply

You cannot copy content of this page

Scroll to Top