ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಎ.ಹೇಮಗಂಗಾ

ನೀ ಬಿತ್ತಿದ ಕನಸಿನ ಬೀಜ ಹೆಮ್ಮರವಾಗಿಸಿದೆ ನೀನದನ್ನು ನೆನೆಯಲಿಲ್ಲ
ನೀ ಉತ್ತಿದ ಬಾಳಬಯಲ ಹಸಿರಾಗಿಸಿದೆ ನೀನದನ್ನು ನೆನೆಯಲಿಲ್ಲ

ಎದುರಾದ ಎಷ್ಟೋ ಸಂದೇಹಗಳಿಗೆ ಉತ್ತರ ನಿನ್ನಲ್ಲೆಂದೂ ಇರಲಿಲ್ಲ
ಬತ್ತಿದ ಒಲವಿನೊರತೆಯ ಮತ್ತೆ ಚಿಮ್ಮಿಸಿದೆ ನೀನದನ್ನು ನೆನೆಯಲಿಲ್ಲ

ನೀ ನನ್ನ ಪೂರ್ಣ ಮರೆತು ಮತ್ತೊಂದು ಜೀವಕೆ ಆತುಕೊಂಡಿದ್ದೆ
ಹತ್ತಿದ ಮಸಿಯ ಬಾಳಪುಟದಿ ಅಳಿಸಿದೆ ನೀನದನ್ನು ನೆನೆಯಲಿಲ್ಲ

ಎರಡು ದೋಣಿಗಳ ಪಯಣದಲಿ ಸಮತೋಲನ ಎಲ್ಲಿಹುದು
ಮುತ್ತಿದ ಪ್ರಶ್ನೆಗಳ ಮೂಕವಾಗಿಸಿದೆ ನೀನದನ್ನು ನೆನೆಯಲಿಲ್ಲ

ನಿಷ್ಠೆಯಿಲ್ಲದ ಬಾಳಲಿ ಅರ್ಥವಿನ್ನೇಕೆ ಹುಡುಕಿ ನೋಯುವೆ ಹೇಮ?
ಒತ್ತಿದ ನೋವುಗಳ ನಿಶ್ಶೇಷವಾಗಿಸಿದೆ ನೀನದನ್ನು ನೆನೆಯಲಿಲ್ಲ


About The Author

2 thoughts on “ಗಜಲ್,ಎ.ಹೇಮಗಂಗಾ”

  1. ಟಿ .ತ್ಯಾಗ ರಾಜು ಮೈಸೂರು

    ಮೇಡಂ ತಮ್ಮ ಈ ಮಹಾಕಾವ್ಯವನ್ನು ಅರಿತೆ ಬಹಳ ಕಷ್ಟವನ್ನು ಪಟ್ಟಿದ್ದೀರ ನೋವು ನಲಿವು ಅವಮಾನಗಳ ಬೇರೆಯವರ ತಿಕ್ಕಲಾಟಗಳ ಸ್ವತಃ ಅನುಭವಿಸಿ ಬರೆದಂತೆ ಇದೆ ತುಂಬಾ ಚೆನ್ನಾಗಿದೆ ಮೇಡಮ್

Leave a Reply

You cannot copy content of this page

Scroll to Top