ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಅಮೃತಮಹೋತ್ಸವ

ಅಭಿಜ್ಞಾ ಪಿ ಎಮ್ ಗೌಡ

ಸೂರ್ಯನಂತೆ ಹೊಳೆಯುತಿಹ
ಮನೆಮನೆಯ ಶಿಖರದಲಿ
ಗುಡಿಗೋಪುರ ಕಛೇರಿಯಲಿ
ನಮ್ಮೀ ತಿರಂಗದ
ಉಲ್ಲಾಸ ಉತ್ಸವ..!
ಹಳತುಗಳ ಸವಿಯುತ
ವರ್ತಮಾನ ಮೆರೆಯುತ
ಭವಿಷ್ಯದ ಉನ್ನತಿಗೆ
ಸಿದ್ಧಗೊಂಡ ಶುಭಗಳಿಗೆ
ಈ ಅಮೃತಮಹೋತ್ಸವ..!

ಪರಕೀಯರ
ದಾಸ್ಯದಿಂದ ಮುಕ್ತಿಗೊಂಡ
ದೇಶಕ್ಕೀಗ ಸ್ವಾತಂತ್ರ್ಯದ ಸಂಭ್ರಮ
ವಂದೇ ಮಾತರಂ
ಗೀತೆಯ ರಿಂಗಣದಲಿ
ತ್ರಿವರ್ಣ ಧ್ವಜ ಏರಿದ
ಈ ಶುಭದಿನ
ಅಮೃತ ಗಳಿಗೆ ಅನುಪಮ..!

ಸ್ವಾತಂತ್ರ್ಯವೆಂಬ ಸತ್ಯರ್ಥ
ಜ್ಞಾನದ ಬೆಳಕಿನಲಿ
ಮೂಡಿದ ಚಿಂತನೆಯ ಹಾಡಿದು
ಕಾರ್ಯಕ್ಷಮತೆ ಪರಿಧಿಯೊಳಗೆ
ಪ್ರಗತಿಪಥದ ಉತ್ತುಂಗವಿದು..
ಸಮಾನತೆ ತಂಬೆಲರಲಿ
ಪಲ್ಲವಿಸೊ ಸುಮವಿದು
ಸಾಮರಸ್ಯ ಸಮಾನತೆಯ
ಸದ್ಭಾವದ ಗಣಿಯಿದು
ಧನಾತ್ಮಕತೆಯ ಹಾದಿಯೊಳಗೆ
ಹಾರುತಿಹ ತಿರಂಗವಿದು..!

ಹಳೆಬೇರುಗಳ ಚಿಗರಿನಲಿ
ಹೊಸತನದ ಆವಿರ್ಭಾವ
ಹೆಗಲೇರಿದ ಪರಂಗಿಗಳ ಹುಟ್ಟಡಗಿಸಿ
ಕುಣಿದ ಮೆರೆದಭಾವ..
ಇತಿಹಾಸದ ಮೈಲಿಗಲ್ಲಲಿ
ಮಹಾಯುದ್ಧಗಳ ಸೆಣಸಿನಲಿ
ದೇಶದ ಉಳಿವಿಗಾಗಿ
ತ್ಯಾಗಬಲಿದಾನಗಳ ಸಾಲಿನಲಿ
ನಳನಳಿಸಿದೆ ಈ ಜೀವ..!

ಸ್ವಾವಲಂಬಿ ಭಾರತ
ಸಮರ್ಥ ಬಲಿಷ್ಟವಾಗುತಿರಲಿ
ಸಾಲು ಸಾಲು ಸಾಧನೆಗಳು
ಶಿಖರವೇರಿ ಮಿನುಗುವಲ್ಲಿ
ನಮ್ಮೆಲ್ಲರ ದೇಶಭಕ್ತಿ
ಪೂರಕವಾಗುತಿರಲಿ..!
ಪ್ರೇರಕಶಕ್ತಿಯ ಬೆಳಕು
ವರ್ಣಿಸಲಸದಳದ ಈ ಕುರುಹು
ಭಾವೈಕ್ಯತೆ ಸಾರುತ
ದೇಶಶಕ್ತಿ ತೋರುತ
ಉದ್ಘೋಷದಿ ಮೊಳಗುತಿರಲಿ..!

ಮನ ಮನೆಗಳಲಿ
ಹರಿಯಲಿ ಸ್ವಾತಂತ್ರ್ಯದ ಹರ್ಷ
ನಿತ್ಯನಿರತ ಬೆಳೆಯುತಿರಲಿ
ಸ್ವಾವಲಂಬಿ ಪ್ರಗತಿಯತ್ತ..!
ಸದಾಶಯದ ಹೊಸ್ತಿಲಲಿ
ಅಮೃತಮಹೋತ್ಸವ
ಪ್ರಜ್ವಲಿಸಲಿ ಗಡಿಯಾಚೆ
ನಮ್ಮೀ ದೇಶಶಕ್ತಿ ಆತ್ಮನಿರ್ಭರದತ್ತ..!


About The Author

2 thoughts on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ”

Leave a Reply

You cannot copy content of this page

Scroll to Top