ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ನನ್ನ ದೇಶ ನನ್ನ ಧ್ವಜ

ಡಾ.ಡೋ ನಾ ವೆಂಕಟೇಶ

ಶೌರ್ಯ ಧೈರ್ಯ
ಶಾಂತಿ ಸಂಪ್ರೀತಿ
ಸಮೃದ್ಧಿಯ ಸಂಕೇತ
ನನ್ನ ದೇಶ
ನನ್ನ ಧ್ವಜ!

ಚಿಮ್ಮುತ್ತ ಆಕಾಶದೆತ್ತರಕೆ
ಬಿಮ್ಮುತ್ತ ಸಾಗರದಾಳಕ್ಕೆ
ಮೆರೆಯುತ್ತೆ ನನ್ನ ದೇಶದ ಧರ್ಮ ಚಕ್ರ ಅಶೋಕ ಚಕ್ರ

ಕಾಲ ಚಕ್ರ ಸರಿದಂತೆ
ಭರತ ವರ್ಷ ಮೆರೆದಂತೆ
ನನ್ನೊಲುಮೆ ಆಗಿ
ಹಾಲ್ಜೇನು ಹೊಳೆ
ನೀ ಕಾಮಧೇನು!

ದೇಶ ಭಕ್ತಿ ಮೇರೆದಾಟಿ
ಭಾರತೀಯತೆ ಒಂದಾಗಿ
ಹಳೆ ಹಂಪೆ ಹಳೆ ನಳಂದ
ಇತ್ಯಾದಿ ಹಳೆ ಕಂಪು ಬೀರುವ
ಹೊಸ ನೋಂಪು!

ಬುಧ್ಧ ಬಸವ
ಮಹಾವೀರ ರಿಂದ
ಶಿವಾಜಿ ಕೃಷ್ಣ ದೇವರಾಯರು
ಬೆಳೆಸಿದ ನಾಡು

ಪಂಪ ರನ್ನರಿಂದ
ತುಳಸಿದಾಸರ ತನಕ
ಅಕ್ಕ ಮಹಾದೇವಿಯಿಂದ
ತಿರುವಳ್ಳವರರ ತನಕ
ಕಲ್ಹಣನ
ರಾಜ ತರಂಗಿಣಿಯಿಂದ
ಕನ್ಯಾಕುಮಾರಿಯ ತನಕ
ಮೆರೆದಾಟ
ಆರ್ಭಟ!!

ತಟ ದಾಟಿದ ನಿನ್ನ ಕೀರ್ತಿ
ಬಣ್ಣಿಸಲಸದಳ ನಿನ್ನ ಮೂರ್ತಿ

ಭಾರತಾಂಬೆಗೆ ನಮನ
ಭಾರತ ಧ್ವಜಕ್ಕೆ ನಮನ


About The Author

14 thoughts on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ”

  1. ಬಹಳ ಚನ್ನಾಗಿದೆ ಅಣ್ಣ. ಸದಾ ಹೀಗೇ ಕವನ ಗಳನ್ನು
    ಬರೆಯುತಯಿರಿ. ಆ ದೇವರು ಹೀಗೆ ಸದಾ ನಿಮ್ಮನ್ನು ಇಟ್ಟಿರಲಿ.

  2. Dr K B SuryaKumar

    ಭಾರತಾಂಬೆಯ ಕಿರೀಟ ನಮ್ಮ ಧ್ವಜದ ಬಗ್ಗೆ ಹೆಮ್ಮೆಯ ಕವನ… ಬಹಳ ಚೆನ್ನಾಗಿದೆ ವೆಂಕಣ್ಣ.

  3. ಭಾರತಾಂಬೆಗೆ ಮತ್ತು ಭಾರತಧ್ವಜಕ್ಕೆ ಗೌರವ ನೀಡಿ ಬರೆದ
    ಈ ಕವಿತೆ ಬಹಳ ಸುಂದರವಾಗಿದೆ.ಓದಿ ಆನಂದವಾಯಿತು.

Leave a Reply

You cannot copy content of this page

Scroll to Top