ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಂಬಿರುವೇ ನೀ ನನಗಾಗಿ

ಚಂದ್ರು ಪಿ ಹಾಸನ್

CHANDRU HASSAN

ಚಂದನವನದ ಚೆಂಗುಲಾಬಿಯೇ
ನಂದನವನವನ್ನೇ ನಿರ್ಮಿಸಿ
ಮುದದಿ ಘಮಘಮಿಸಿ ಅರಳಿ
ನನ್ನೆದೆ ಕದವಾ ಬಡಿದೆಯಾ?

ಮುಂಜಾವಿನ ಭಾಸ್ಕರನು
ಹೊನ್ನ ಬೆಳಕನ್ನು ಎಲ್ಲೆಡೆ ಬೀರಿ
‌ಜಗ ಜಗಮಗಿಸಿದಂತೆ
ಪ್ರೇಮಕಿರಣವ ನನ್ನಲ್ಲಿ ಚೆಲ್ಲಿದೆಯಾ?

ನಿನ್ನುಸಿರ ಪರಿಮಳವ
ನನ್ನೆದೆಗೆ ಪಸರಿಸಿ
ಹಸನಾದ ಹೃದಯವು
ಹೊಸತನವ ಮಿಡಿದಿದೆ

ನಂಬಿ ಕಾದಿರುವೆ ಓ ಒಲವೇ
ನಿನ್ನ ಚೆಲುವೆಲ್ಲಾ ನನಗಾಗಿ
ಹುಂಬದೊಳ್ ನಿಜ ಹೇಳುವೆ
ನನ್ನ ಬದುಕು ನಿನಗಾಗಿ

ನೆಲೆಸುವೆನು ಹೃದಯದಲ್ಲಿ
ನನಗಾಗಿ ಕಾದಿರುವೆಯಾ
ನಂಬಿರುವೆ ನನ್ನೊಲವೇ
ನನಗಾಗಿ ಅರಳಿರುವೆ.


About The Author

1 thought on “ನಂಬಿರುವೇ ನೀ ನನಗಾಗಿ-ಚಂದ್ರು ಪಿ ಹಾಸನ್ ಕವಿತೆ”

  1. ನಿಮಗಾಗಿ ಕಾದು ನಿಮ್ಮ ಬಾಳ ಸಂಗಾತಿಯಾಗಿ ಬಂದಾಯಿತು ನನ್ನ ಜೀವನವೇ ನೀವಲ್ಲವೇ…..

Leave a Reply

You cannot copy content of this page

Scroll to Top