ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೇಶಾಭಿಮಾನದ ಕಿಚ್ಚು

ಶಿವಲೀಲಾ ಹುಣಸಗಿ

ಸತ್ಯದ ಹಾದಿ ದುರ್ಗಮವೆಂದು
ನಿತ್ಯ ಕೊರಗಿದವರೆಷ್ಟೋ
ತ್ಯಾಗ ಬಲಿದಾನಗಳ ಮಹಾಪೂರ
ರೊಚ್ಚಿಗೆದ್ದ ಕೊಳ್ಳಿದೆವ್ವಗಳ ಸಾಲು
ಪಟಪಟನೆ ಉದುರಿದ ಹೆಣಗಳು
ಪಿಸ್ತೂಲ್ ಗಂಜಿ ಭೂಗತವಾದವರೆಷ್ಡೋ
ಮರಳಿಬಾರದ ಊರಿಗೆ ಪಯಣ..
ವಿಪರ್ಯಾಸ ನಮಗೆ ನಾವೆ ಶತ್ರು..

ನಾಯಿ ರೊಟ್ಟಿಗಾಗಿ ಕಾದುಕುಳಿತಂತೆ
ಹಯಗಳ ಲದ್ದಿಯೆತ್ತಿ ಉಂಡಂತೆ
ಬೂಟುಗಾಲಿನ ಪಾಲಿಶ್ ಎದೆಗಪ್ಪಿದಂತೆ
ಅಬ್ಬಾ ಎಂಥ ಸುಖ,ರಕ್ತ ಹೀರುವಿಕೆಗೆ
ಉಂಬಳವನ್ನೂ ಮೀರಿಸಿದವರು
ಲಾಠಿ ಏಟಿಗೆ ಮುರಾಬಟ್ಟೆ ಬದುಕಾದಂತೆ
ಆದ್ರೂ ಅನ್ಯಾಯದ ಧ್ವನಿ ಗಂಟಲಲ್ಲಿಲ್ಲ

ಅತಿಥಿ ಸತ್ಕಾರಕೆ ಎತ್ತಿದ ಕೈ ನಮ್ಮದು
ದುಃಖ ಮರೆಮಾಚಿ ರತ್ನಗಂಬಳಿ ಹಾಸಿ
ನಮ್ಮೊಳಗಿನ ಅಸಮಾನತೆಯ ತೆರೆದವರು
ಮಂಕುದಿನ್ನೆಗಳಾಗಿ ಸ್ವಾರ್ಥದಾಟಕೆ
ದೇಶವ ಪರತಂತ್ರಕೆ ಬಲಿಯಾಗಿಸಿದವರು
ಬುದ್ದನು ಸೋತ‌ ಸತ್ಯ ದರ್ಶನ ಮಾಡಿಯು
ಬುದ್ದಿ ಬರಲಿಲ್ಲ ನಮ್ಮಂತರಂಗಳಿಗೆ

ಅಧಿಕಾರದ ಮೋಹಕೆ ನಿರ್ಗತಿಕರು ಬಡವರು
ಅವರೆಂದೂ ಮೇಲೆಳಲಿಲ್ಲ ಧ್ವನಿ ಮೊಳಗಲಿಲ್ಲ
ತುಟಿಕಚ್ಚಿ ನೋವ ನುಂಗಿ ಸಾವನ್ನಪ್ಪಿದರು
ತಾಳ್ಮೆಗೂ ಮಿತಿಯಿದೆ ಸಿಡಿದೆದ್ದವರ ಬಾಳು
ಅಸಹನೀಯತೆಯ ಗೋಳು
ಮನಸ್ಸು ಸ್ವಾತಂತ್ರ್ಯ ಬಯಸಿದ್ದೆ ಮುನ್ನುಡಿ
ಪ್ರಾಣದಾಹುತಿ ಭಾರತಾಂಬೆಯ ಮುಕ್ತಿಗೆ

ಅಬ್ಬಾ! ಇನ್ನೂರು ವರ್ಷಗಳ ಕಾಲಾಪಾನಿ!
ಹೋರಾಡಿ ಮಡಿದವರಿಗೆ ಗೊತ್ತು ಸ್ವಾತಂತ್ರ್ಯ
ದೇಶಾಭಿಮಾನದ ಕಿಚ್ಚು ಸ್ವಂತಿಕೆಯದಾಗಲಿ
ಭಾರತೀಯ ಸಂಸ್ಕೃತಿಯ ಕಹಾನಿ
ಭಾರತೀಯರಿಗೆ ಮುನ್ನುಡಿಯಾಗಲಿ
ಅಮೃತ ಮಹೋತ್ಸವ ಶಾಶ್ವತ ಉಸಿರಾಗಲಿ.


About The Author

3 thoughts on “ದೇಶಾಭಿಮಾನದ ಕಿಚ್ಚು-ಶಿವಲೀಲಾ ಹುಣಸಗಿ”

  1. ಶೈಲಜಾ ಹುಲಗೂರ

    ಭಾರತೀಯ ಸಂಸ್ಕೃತಿಯ ಕಹಾನಿ
    ಭಾರತೀಯರಿಗೆ ಮುನ್ನುಡಿಯಾಗಲಿ
    ಅಮೃತ ಮಹೋತ್ಸವ ಶಾಶ್ವತ ಉಸಿರಾಗಲಿ.

  2. ಸ್ವಾತಂತ್ರ್ಯದ ಕಿಚ್ಚು’ ಹೇಗಿತ್ತು ಎಂಬುದು ಕಣ್ಣು ಕಟ್ಟುವಂತಿದೆ .ಸುಂದರ ಅತೀ ಸುಂದರ ಅಭಿವ್ಯಕ್ತಿ

  3. sunandapatankar

    ಸ್ವಾತಂತ್ರ್ಯ ಹೋರಾಟದ ಕ್ಷಣಗಳು ಕಣ್ಣ ಮುಂದೆ ಹಾದು ಹೋದಂತಾಯಿತು. ಸುಂದರ ಬರವಣಿಗೆ.

Leave a Reply

You cannot copy content of this page

Scroll to Top