ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನೇ ನೀನಾಗಿ

ಹರ್ಷಿಣಿ ಡಿ ಆರ್.

ತಬ್ಬಲಿಲ್ಲ ನಿನ್ನ ನಾನು
ಬರಸೆಳೆದು ಬಿಗಿದಪ್ಪಿ.
ನಡೆಯಲಿಲ್ಲ ನಿನ್ನೊಟ್ಟಿಗೆ ಕೈಯ ಹಿಡಿದು
ಬೆರಳ ಹೊಸೆದು…
ಬದಲು, ಹಬ್ಬಿದೆ ನಿನ್ನ
ಸುಳಿ _ ಸುಳಿದು ಚಿಗುರೊಡೆದ ಬಳ್ಳಿಯಂತೆ,

ತುಸು ಕದಲಿದೆ
ಬೀಸೋ ಗಾಳಿಗೆ
ನಲುಗುವ ಮೃದು ಹೂವಿನಂತೆ
ಬಿರುಸು ಮಾತಿಗೋ
ಸೆಳೆವ ವರಸೆಗೋ
ನೀನೇ ನಾನಾಗಿ
ನಾನೇ ನೀನಾಗಿ


ಹರ್ಷಿಣಿ ಡಿ ಆರ್

About The Author

Leave a Reply

You cannot copy content of this page

Scroll to Top