ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಹರಿನರಸಿಂಹ ಉಪಾಧ್ಯಾಯ

ಹುಣ್ಣಿಮೆಯ ರಾತ್ರಿಯಲಿ ನಾ ಕಂಡ ಸುಂದರಿಯು ನೀನು
ತಣ್ಣನೆಯ ತಂಗಾಳಿಯಲಿ ತೇಲಿ ಬಂದ ಕಿನ್ನರಿಯು ನೀನು

ಬೆಳದಿಂಗಳ ಬೆಳಕಿನಲಿ ಹೊಳೆವ ವಯ್ಯಾರಿ ಯಾರಿವಳು
ಇಳೆ ಬಾನು ಹುಡುಕಿದರೂ ಕಾಣದ ಸಿಂಗಾರಿಯು ನೀನು

ಆಗಸದ ತುಂಬೆಲ್ಲ ಚುಕ್ಕಿ ತಾರೆಗಳ ಸಂಭ್ರಮವು ಇಂದು
ವೇಗದಲಿ ಬಿಳಿಮೋಡವೇರಿ ನಡೆದ ಬಂಗಾರಿಯು ನೀನು

ಇರುಳ ಒಂಟಿತನವನು ಕಳೆಯಲು ಓಡೋಡಿ ಬಾ ಬೇಗ
ಮರುಳಾಗಿಸುವ ಅಪ್ಸರೆಯಂತಹ ಕೌಮಾರಿಯು ನೀನು

ಹರಿಯಿಲ್ಲಿ ಕುಳಿತಿರುವ ಕಾರಣವನು ಕೇಳುವವರೇ ಇಲ್ಲ
ಮರೆಯದೇ ಆಗಮಿಸಿ ತಂಪೆರೆವ ಮದನಾರಿಯು ನೀನು


About The Author

1 thought on “ಗಝಲ್”

  1. ಸಂಗಾತಿ ಬ್ಲಾಗ್ ನಲ್ಲಿ ನನ್ನ ಗಝಲ್ ಪ್ರಕಟಿಸಿದ ಸಂಪಾದಕರಿಗೆ ತುಂಬು ಮನದ ಧನ್ಯವಾದಗಳು

Leave a Reply

You cannot copy content of this page

Scroll to Top