ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಫಿಯಾನಾ

ಎ. ಹೇಮಗಂಗಾ

Woman legs walking on snow.

ಮೈ ಮರೆತು ಹಗಲುಗನಸು ಕಾಣುತ್ತಾ ಸಮಯ ಕಳೆಯದಿರು
‘ ಕೈ ಕೆಸರಾದರೆ ಬಾಯಿ ಮೊಸರೆಂ’ಬ ಸತ್ಯವ ಮರೆಯದಿರು

ಗಮ್ಯ ತಲುಪುವ ಹಾದಿಯಲ್ಲಿ ನೂರಾರು ಕಲ್ಲು, ಮುಳ್ಳುಗಳು
ಪಲಾಯನ ಮಾಡಲು ಹೊಣೆಗಳ ಪರರ ಹೆಗಲಿಗೆ ಏರಿಸದಿರು

ಕಷ್ಟಗಳೇ ಇಲ್ಲದ ಬಾಳು ಯಾರಿಗೂ ಲಭ್ಯವಿಲ್ಲ ಬುವಿಯಲ್ಲಿ
ಬರಿಯ ಸುಖದ ಪಾಲೇ ಸದಾ ನಿನಗಿರಲೆಂದು ಬಯಸದಿರು

ಉಪದೇಶ ಮಾಡುವುದರಲ್ಲೇ ಕಾಲಹರಣವಾದರೆ ಹೇಗೆ ?
ಶ್ರಮಜೀವಿಯಾಗದೇ ಮಾದರಿ ನೀನೆಂದು ಭ್ರಮಿಸದಿರು

ಸತ್ತ ನಂತರ ಗೋರಿಯಲ್ಲಿ ಮಲಗುವುದು ಇದ್ದೇ ಇದೆ ಹೇಮ
ಕ್ಷಣಿಕ ಬಾಳಲ್ಲಿ ಅಲ್ಪವಾದರೂ ಸಾಧಿಸದೇ ಇಲ್ಲಿಂದ ತೆರಳದಿರು


About The Author

Leave a Reply

You cannot copy content of this page

Scroll to Top