ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವೈದ್ಯೇಶ್ವರ

ಜಯಲಕ್ಷ್ಮಿ ಎಂ.ಬಿ

ಹೃದಯದಲಿ ಪ್ರೀತಿಯನು ಮನಸಿನಲಿ ಶಾಂತಿಯನು
ಮುದದಿಂದ ತೋರುತಲಿ ಸಂತೈಸುತ
ವದನದಲಿ ನಸುನಗುತ ಕಾಯಕವ ಮಾಡುತಿಹ
ಪದುಮನಾ ಕುಲದವನೆ ವೈದ್ಯನಾಥ

ಶಕ್ತಿಯನು ಮೀರುತಲಿ ಕಾಯಿಲೆಯ ಗುಣಪಡಿಸಿ
ಮುಕ್ತಿಯನು ತೋರುವವ ಪುರುಷೋತ್ತಮ
ರಕ್ತವನು ಒದಗಿಸುತ ಶ್ರಮವಹಿಸಿ ದುಡಿಯುತಲಿ
ಯುಕ್ತಿಯಿಂದಲಿ ಮನವ ಸೆಳೆಯುವಾತ

ಕಣ್ಣಿನಲಿ ಕಣ್ಣಿಟ್ಟು ನೋಡುತಲಿ ಕಾಯಿಲೆಯ
ಬಣ್ಣಿಸದೆ ಕಾಯಕವ ಗೈಯುತಿಹನು
ಸಣ್ಣ ಗುಣದವನಲ್ಲ ವೈದ್ಯನಾಗಿಹನಲ್ಲ
ಮಣ್ಣಿನಾ ಋಣವನವ ತೀರಿಸುತಿಹ

ವಂದನೆಯ ನಿನಗಿಂದು ಸಲ್ಲಿಸುತ ಹರಸುವೆವು
ಬಂಧನದಿ ಸಿಲುಕದಿರು ನೀನೆಂದಿಗು
ಮಂದಿಯನು ಮರೆಯದಲೆ ಸೇವೆಯನು ಮಾಡುತಿರೆ
ಚಂದದಲಿ ನಿನ್ನನ್ನು ನೆನೆಯುತಿಹೆವು


About The Author

Leave a Reply

You cannot copy content of this page

Scroll to Top