ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಜೀವವನು ಹಿಂಡಿ ಹಿಸುಕಿ ಹಿಪ್ಪೆ ಮಾಡಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ
ನರಕದ ಕೂಪದಿ ನೂಕಿ ತೊಳಲಿ ಬಳಲಿಸಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ

ಶರೀರದ ಕಾಮಲಾಲಸೆಗೆ ಮುಗ್ದ ಮನಸುಗಳನು
ಬಳಸುವಿರೇಕೆ ಜಗದಿ
ಚಟ್ಟವೇರುವರೆಗೂ ಭೂತದಂತೆ ಕಾಡಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ

ಭೊಗಾಸಕ್ತ ಹೃದಯಗಳನು ಕುದಿಯುವ ಎಣ್ಣೆಯಲಿ
ಅದ್ದಿ ತಗೆದುಬಿಡು
ರೋಗಗಳ ಗೂಡಾಗಿ ಅವಿರತ ನರಳಿಸಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ

ಸುಖವನ್ನೆ ಅರಸುವ ಕಾಮಾಂಧರನು ಶೂಲದಲಿ
ಚುಚ್ಚಿ ಕೊಂದುಬಿಡು
ಲೋಕದಿ ಬದುಕುವ ಆಸೆಗಳನ್ನು ಕಮರಿಸಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ

ಅಭಿನವನ ಲೋಕೋಕ್ತಿಗಳನು ಅರಿತು ಇನ್ನಾದರೂ
ಬದಲಾಗಲಿ ಇಂತವರು
ಮುಪ್ಪಿನಲಿ ಕಾಯವನು ಬೀದಿಪಾಲಾಗಿಸಿದವರಿವರು
ದೇವರೆ ಶಿಕ್ಷೆಕೊಡು ಇವರಿಗೆ


About The Author

1 thought on “ಗಝಲ್”

Leave a Reply

You cannot copy content of this page

Scroll to Top