ಕಾವ್ಯಸಂಗಾತಿ
ಬಿಡದ ಕನಸು
ಮಾಜಾನ್ ಮಸ್ಕಿ


ಒಪ್ಪಿ ಅಪ್ಪಿದ ಪ್ರೀತಿಗೆ
ಕಾಣುವ ಬಯಕೆ ಏಕೋ
ಅದೇಕೋ ಸೆಳೆತ
ಸುಳ್ಳೋ ನಿಜವೋ
ಎರಡರಲ್ಲಿ ಅಡಗಿದೆ
ಬಿಡಿಸದ ಒಗಟು
ಸುಳ್ಳು ಬದುಕಿಸುತ್ತಿದೆ
ಸತ್ಯ ಹೆಣೆಯುತ್ತಿದೆ
ಬಿಡದ ಕನಸು
ಹೂವಿನ ಜೊತೆ ಮುಳ್ಳು
ಬದುಕಿನ ಸತ್ಯತೆ
ಕಳೆ ಕೀಳಿದ ಹೊನಲು
ಕಣ್ಣು ಮನಸ್ಸು ತುಂಬಲು
ಹಂಬಲಿಸುತ್ತಿದ್ದೆ
ನಿನ್ನನ್ನು ನೋಡಲು
ಮಾಜಾನ್ ಮಸ್ಕಿ



