ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೆಲೆ ಎಲ್ಲಿ ಈಗ.

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಮಲಗಿದರಿವ ಬಡಿದು
ಎಚ್ಚರಿಸಿ ಕೇಳುತಿದೆ ನಾಡಿನ ಭವಿತವ್ಯ
ಎತ್ತ ಕಡೆ ಪಯಣ
ನೆಲೆ ಎಲ್ಲಿ ಈಗ

ತನ್ನತನವ ಮಾರಿಕೊಂಡು
ಮುಖವಾಡ ಧರಿಸಿ ನಕ್ಕು ನಗಿಸಿ
ಹೊಂಚು ಹಾಕುತ ಸಂಚು ಮಾಡಿ
ಸಿಕ್ಕ ಸಿಕ್ಕದುದ ದೋಚಿಕೊಂಡು
ಸೋಗಲಾಡಿತನದ ಕಳ್ಳ ನಾಯಕರಿರಲು

ಶಕ್ತಿದೈವದ ಹೆಸರು ಕೊಟ್ಟು
ಗಾಳಿಯಾಡದ ಗರ್ಭ ಗುಡಿಯಲಿ
ಕೂಡಿಹಾಕಿ
ಶಾಂತಿಗಾಗಿ ಬಲಿ ಕೊಟ್ಟು
ತಿಂದು ತೇಗಿ ಮಜಾ ಮಾಡುವ
ಸಮಾಜ ಸುಧಾರಕ ನಯವಂಚಕರಿರಲು

ತಾಯಿನೆಲದ ಏಳ್ಗೆಗಾಗಿ
ಸಾಕ್ಷರತೆಯ ಪಣವ ತೊಟ್ಟು
ಪೆನ್ನು ಹಿಡಿವ ಕೈಗಳಲೀಗ
ಮದ್ದು ಗುಂಡು ತಾಲೀಮು ಕೊಟ್ಟು
ದೇಶವನ್ನೆ ದೋಚುತಿರುವ
ದೇಶಭಕ್ತಿಯ ಭ್ರಷ್ಟರಿರಲು

Neolithic mask stuns archaeologists, raises eyebrows

ಮನುಷ್ಯತ್ವಕ್ಕೆ ಬೆಂಕಿ ಹಚ್ಚಿ
ಅದರ ಬಿಸಿಯಲ್ಲಿ ಚಳಿ ಕಾಯಿಸುತ
ಕಂಡುದೆಲ್ಲವು ತಮ್ಮದೆಂದು
ಹುಕಾಯಿ ಹಣ್ಣು ಪೀಚು ಬಿಡದೆ
ರಕ್ತ ಹೀರಿ ತೃಪ್ತಿ ಪಡುವ
ಪಾಪಿ ಕಾಮಪಿಶಾಚಿಗಳಿರುತಿರಲು

ಎತ್ತ ಕಡೆ ಪಯಣ
ಯಾವುದರ ಹುಡುಕಾಟ
ನೆಲೆ ಎಲ್ಲಿ ಈಗ.


ಡಾ. ನಾಗರತ್ನ ಅಶೋಕ ಭಾವಿಕಟ್ಟಿ

About The Author

Leave a Reply

You cannot copy content of this page

Scroll to Top