ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣಾ ನರೇಂದ್ರ

Pin on Art

ಮಧುರ ನೆನಪು

Woman Eyes Pictures | Download Free Images on Unsplash

ನಿನ್ನ ನೆನಪು ನನ್ನ ನೋವಿಗೆ
ಸಾಂತ್ವನ ಹೇಳುತ್ತದೆ
ಕಣ್ಣ ರೆಪ್ಪೆಯ ಬಡಿತಕ್ಕೆ
ಹೃದಯದ ಮಿಡಿತಕ್ಕೆ
ಸಾಕ್ಷಿಯಾಗುತ್ತದೆ

1500+ Dark Moon Pictures | Download Free Images on Unsplash

ನಿನ್ನ ನೆನಪಿನ ಗುಂಗಲ್ಲಿ
ಅಮಾವಾಸ್ಯೆಯ ಕತ್ತಲಲ್ಲೂ
ಹುಣ್ಣಿಮೆಯ ಬೆಳಕು
ನನ್ನೆದೆ ಬೆಳಗುತ್ತದೆ

ನಾ ನೆಟ್ಟ ಸಸಿಗೆ
ನೀನೇಕೆ ನೀರೆರೆದೆ
ಅದು ಬಿಟ್ಟ ಹೂವ
ಪರಿಮಳದಲ್ಲಿ
ನಿನ್ನದೇ ನೆನಪಿದೆ

ನಾನುಟ್ಟ ಸೀರೆಯ
ಒಂದೊಂದು ಮಡಿಕೆಯಲ್ಲೂ
ನಿನ್ನ ನೆನಪುಗಳ
ಮೆರವಣಿಗೆ
ತೊಟ್ಟ ರವಿಕೆಯ
ಒಂದೊಂದು ಎಳೆಯಲ್ಲೂ
ಪ್ರೇಮ ಬಂಧದ
ಸುಂದರ ಬೆಸುಗೆ

About The Author

Leave a Reply

You cannot copy content of this page

Scroll to Top