ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಬರುವಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲ
ನನ್ನವರೆಂದು ನಂಬುವುದರಲ್ಲಿ ಸುಖವಿಲ್ಲ

ಸ್ಪಷ್ಟತೆ ಇಲ್ಲದ ನಿಲುವಿಗೆ ಹುಡುಕುತ್ತಿರುವೆ ಏಕೆ
ಮನದಲ್ಲಿ ಮೋಸವೆ ತುಂಬಿರುವುದರಲ್ಲಿ ಸತ್ಯವಿಲ್ಲ

ಕೆಸರಿನ ಮೇಲೆಯು ಸೂರ್ಯನು ಕಿರಣಗಳನ್ನು ಚೆಲ್ಲುವನು
ನಿನ್ನಂತೆ ನೀನಾಗಿರುವ ಇಚ್ಛಾ ಶಕ್ತಿಇರುವುದರಲ್ಲಿ ವ್ಯರ್ಥವಿಲ್ಲ

ಸಿಂಹನಂತಿರು ಸಿಂಹಾಸನದ ಆಸೆ ಎಂದೂ ಬಯಸದೆ
ನೋವು ಕೊಟ್ಟವರನ್ನು ನಿರ್ಲಕ್ಷಿಸಿ ಬಾಳುವುದರಲ್ಲಿ ಭಯವಿಲ್ಲ

ಇನ್ನೊಬ್ಬರನ್ನು ಅವಲಂಬಿಸಿಯೇ ಇರಬೇಕೇನು “ಮಾಜಾ”
ನಿನ್ನ ಅವಶ್ಯಕತೆಯನ್ನು ಮಾತ್ರ ಬಯಸುವುದರಲ್ಲಿ ಒಲವಿಲ್ಲ


About The Author

Leave a Reply

You cannot copy content of this page

Scroll to Top