ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ವೇಣು ಜಾಲಿಬೆಂಚಿ

430 Taj Mahal Night Photos - Free & Royalty-Free Stock Photos from  Dreamstime

ಚಿತ್ತಾಗುವ ಇಲ್ಲ ಪತ್ತಾಗುವ ಹೃದಯವೂ ಅಲ್ಲ ನಿನ್ನದು
ಹೆಚ್ಚಾಗುವ ಇಲ್ಲ ಕಮ್ಮಿಯಾಗುವ ಹೃದಯವೂ ಅಲ್ಲ ನಿನ್ನದು

ಮುಚ್ಚಿದ ಮನೆಯ ಬಾಗಿಲ ಮುಂದೆ ಕೋಗಿಲೆಯೂ ಇಲ್ಲ
ಹೆದರಿಸುವ ಇಲ್ಲ ಬೆದರಿಸುವ ಹೃದಯವೂ ಅಲ್ಲ ನಿನ್ನದು

ತಾಜಮಹಲು ಪ್ರೀತಿ ಸಂಕೇತ ಅಳಿಯದುಳಿದಿದೆ ಪ್ರೀತಿಗೆ
ವಿಷವುಣಿಸುವ ಇಲ್ಲ ವಿಷಬೆರೆಸುವ ಹೃದಯವೂ ಅಲ್ಲ ನಿನ್ನದು

ಒಂದೇ ಕೋಲಿನಿಂದ ಇತಿಹಾಸ ರಚಿಸಿದ ಮಹಾತ್ಮರಿಲ್ಲಿ
ಕಣ್ಮುಚ್ಚಿಸುವ ಇಲ್ಲ ಬೆನ್ನಿಗಿರಿಯುವ ಹೃದಯವೂ ಅಲ್ಲ ನಿನ್ನದು

ಡೊಳ್ಳು ಹೊಟ್ಟೆಯ ಮೇಲೆ ಕೈಯಾಡಿಸಿದರಾಗದು ಕ್ರಾಂತಿ
ಜಾಲಿ ಮುಂದೆ ನುಗ್ಗುವ ಇಲ್ಲ ಹಿಂದೆ ಸರಿಯುವಹೃದಯವೂ ಅಲ್ಲ ನಿನ್ನದು


ವೇಣು ಜಾಲಿಬೆಂಚಿ

About The Author

Leave a Reply

You cannot copy content of this page

Scroll to Top