ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಿಡಿಯುತ್ತಿದೆ

ಡಾ.ನಿರ್ಮಲ ಬಟ್ಟಲ

ಗೆಳೆಯಾ….
ಮಿಡಿಯುತ್ತಿದೆ ನನ್ನ ಹೃದಯ ನಿನಗಾಗಿ
ಹೊಸ ರಾಗಗಳ ಹೊರ ಹೊಮ್ಮಿಸಿದ
ವೀಣೆ ಮಿಡಿದಂತೆ….

ಮಿಡಿಯುತ್ತಿದೆ ನನ್ನ ಭಾವ
ನಿನಗಾಗಿ
ಕಳಕಂಠದಿ ಸ್ವರವೆತ್ತಿ
ಕೋಗಿಲೆ ಹಾಡಿದಂತೆ……

ಮಿಡಿಯುತ್ತಿದೆ ನನ್ನ ಜೀವ
ನಿನಗಾಗಿ
ಕಾವ್ಯಕ್ಕೆ ಸ್ಪೂರ್ತಿಯಾಗಿ
ಹೊಸ ಕಾವ್ಯ ಮೂಡಿಬಂದಿದೆ…..

ಈ ಮಿಡಿತ ತುಡಿತಗಳೆಲ್ಲ
ನಿನ್ನ ಪ್ರೀತಿಗಾಗಿ
ಬಾಳಪಯಣದಿ ಸಂತಸದ
ಕ್ಷಣಗಳನು ಕೂಡಿಡುವುದಕಾಗಿ…


ಡಾ.ನಿರ್ಮಲ ಬಟ್ಟಲ

About The Author

1 thought on “ಮಿಡಿಯುತ್ತಿದೆ”

  1. Rajashri Nandi

    Sanskhiptavagi sundaravad hadu henediddeera. Vandu manadalada sandesha. Nimage nanna subhashayagalu.

Leave a Reply

You cannot copy content of this page

Scroll to Top