ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚಿವುಟದಿರಿ ಬದುಕ

ಜಯಲಕ್ಷ್ಮಿ ಎಂ ಬಿ

Centre decides to go light on the school going children!

ಕಸಿಯದಿರಿ ಬಾಲ್ಯವನು ಸೆಳೆಯದಿರಿ ಬದುಕನ್ನು
ಕುಸಿಯುವುದು ಆಸೆಗಳ ಬಹುಮಹಡಿಯು
ಹುಸಿಯಾಸೆ ತೋರುತಲಿ ಎಳೆಯದಿರಿ ಕೆಲಸಕ್ಕೆ
ಬಸವಳಿದು ಹೋಗುವರು ದುಡಿಮೆಯಿಂದ

ಮಕ್ಕಳನು ಪೋಷಿಸದೆ ಎಳೆಮನವ ಚಿವುಟಿದರೆ
ದಕ್ಕುವುದು ನರಕವದು ಬಲುನಿಶ್ಚಿತ
ಸೊಕ್ಕಿನಲಿ ದುಡಿಸಿದರೆ ಕಡುಪಾಪ ಸುತ್ತುವುದು
ಹಕ್ಕಿಲ್ಲ ಬಾಲಕಾರ್ಮಿಕತೆಗೆಂದು

ಶಿಕ್ಷಣವ ಮಕ್ಕಳಿಗೆ ಒದಗಿಸುತ ಸಲಹಿದರೆ
ರಕ್ಷಣೆಯು ಬಾಲ್ಯದಲಿ ದಕ್ಕುತಿಹುದು
ತಕ್ಷಣಕೆ ದುಡಿಮೆಯನು ಹೊರುವಂತೆ ಹಚ್ಚಿದರೆ
ಶಿಕ್ಷಣದಿ ವಂಚನೆಗೆ ಸಿಲುಕುತಿಹರು

ದೇಶವದು ಹೊಂದುವುದು ಏಳ್ಗೆಯನು ಪ್ರತಿನಿಮಿಷ
ತೋಷವದು ದೊರೆಯುವುದು ಕಲಿಕೆಯಿಂದ
ಪಾಶವನು ಬಿಗಿಯದೆಲೆ ಮಕ್ಕಳನು ಸಲಹಿದೆಡೆ
ದೋಷವದು ಕಳೆಯುವುದು ಬದುಕಿನಿಂದ


ಜಯಲಕ್ಷ್ಮಿ ಎಂ ಬಿ

About The Author

1 thought on “ಚಿವುಟದಿರಿ ಬದುಕ”

Leave a Reply

You cannot copy content of this page

Scroll to Top