ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿಂಧು ಭಾರ್ಗವ, ಹನಿಗವನಗಳು

೧) ಕಲ್ಲು ಕೇವಲ ಕಲ್ಲಲ್ಲ

ಕಲ್ಲು ಚಪ್ಪರದಲ್ಲಿ ಮಲ್ಲಿಗೆಯ ಹೂವುಗಳು
ಘಮಘಮಿಸುತ ನಿಂತು ಬೆರಗು ಮೂಡಿಸುವವು
ಕಲ್ಲು ಬೆಂಚಿನ ಮೇಲೆ ಕುಳಿತ ಜೋಡಿಗಳು
ಮೈಮರೆತು ಪ್ರೇಮಲೋಕಕೆ ಮೆರುಗು ನೀಡಿಹರು.

೨) ಸಂವೇದನೆ

ಸಂವೇದನಾ ಶಕ್ತಿ ಇರಲಿ ನಮ್ಮೊಳಗೆ
ಸರ್ವರನು ಕೊಂಡೊಯ್ಯಿರಿ ನಿಮ್ಮೊಂದಿಗೆ
ಅಭಿಜ್ಞಾನವು ಅರಳಲಿ ಮಸ್ತಕಗಳಲ್ಲಿ
ಅಂಧಕಾರ ಅಳಿಸಲಿ ಮನಮನಗಳಲ್ಲಿ

೩) ಮುಂಗಾರು

ಮುಂಗಾರು ಆಗಮನಕೆ ಮೊದಲು
ಗುಡುಗು ಸಿಡಿಲುಗಳ ನರ್ತನ..
ಆಗಾಗ್ಗೆ ಬಿದ್ದ ನಾಲ್ಕ್ ಹನಿಗಳಿಂದ
ಹರುಷಗೊಳುವ ಭೂಮನ..
ನಳನಳಿಸುತ aಮೊಗ್ಗರಳಿಸಿ
ಚಿಗುರಿ ನಿಲ್ಲುವ ಲತೆಗಳು..
ಹೊಸ ಭರವಸೆ ಹೊಸ ಆಕಾಂಕ್ಷೆಗಳ
ಹೊತ್ತು ನಿಂತ ಸುಮಗಳು..


About The Author

Leave a Reply

You cannot copy content of this page

Scroll to Top