ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅಮ್ಮಂದಿರ ದಿನದ ವಿಶೇಷ

ಗಜಲ್

ಡಾ. ವಾಯ್ .ಎಮ್. ಯಾಕೊಳ್ಳಿ

ಅವ್ವ‌ ತಾನಿಟ್ಟ ಕಣ್ಣೀರಿನ ಲೆಕ್ಕ ಹಾಕಬಹುದೇ ನಾವು
ಅವ್ಚ ಪಟ್ಟ ಕಷ್ಟಗಳ ಪಟ್ಟಿ ಮಾಡಬಹುದೇ ನಾವು

ಬೆಂಕಿಯಲಿ ತಾ ಬೆಂದು ಬೆಳಕನಷ್ಟೇ ನಮಗೆ ಬಿಟ್ಟವಳು
ಚಿಂದಿಯನುಟ್ಟು ಹೊಸತು ಕೊಟ್ಟದ್ದು ಹೇಳಬಹುದೆ ನಾವು

ಎದ್ದು ಬಂದೆವು ಅರ್ಧ ರಾತ್ರಿಯಲಿ ಅದೆ ಗುಡಿಸಲಲಿ ಬಿಟ್ಟು
ಒಂದು ಮಾತೂ ಹೇಳದೆ ಕ್ಷಮಿಸಿ ಬಿಟ್ಟಳು ಬರೆಯಬಹುದೆ ನಾವು

ಅರಮನೆ ಆಡಂಬರದ ಬದುಕಿನಲಿ ಈಗ ಮೆರೆಯುತ್ತಿದ್ದೇವೆ
ದೂರ‌ ಕುಳಿತೇ ಸಂಭ್ರಮಿಸಿದಳು ಬಣ್ಣಿಸಬಹುದೇ ನಾವು

ಮಡದಿ ಮಕ್ಕಳು ಒಡವೆ ವಸ್ತು ಗಳಿಕೆಯಲಿ‌ ಮುಳುಗಿದೆವು ಚಿಂದಿ‌ ಮನೆಯಲಿ ಬೆಂದ ದೇವತೆ ಯಯಾ ನೆನೆಯಬಹುದೆ ನಾವು

ಅಣ್ಣ ತಮ್ಮ ಅಕ್ಲ ತಂಗಿ ಎನಲಿಲ್ಲ ಮರೆತು ದೂರ ನಡೆದೆವು
ಒಬ್ವರ ಮುಂದಾರೆ ಆಡಿಕೊಂಡಳೆ ಆ ಮಾತೆ ಅನ್ನಬಹುದೆ ನಾವು

ಭೂಲೋಕದಿ ಬೆಳಗಿದ ನಕ್ಷತ್ರ ಅವಳು ಯಾವ ದೇವರು ಸಾಟಿ?
‘ಯಯಾ ‘ ಬರಿಯ ಪದಗಳಲಿ ಬರೆದು‌ ತೀರಿಸಬಹುದೆ ನಾವು


ಡಾ. ವಾಯ್ .ಎಮ್. ಯಾಕೊಳ್ಳಿ

About The Author

1 thought on “ಅಮ್ಮಂದಿರ ದಿನದ ವಿಶೇಷ”

  1. ಹೆಚ್. ಮಂಜುಳಾ.

    ಎಂಥ ಅರ್ಥಗರ್ಭಿತ ಗಜಲ್, ಅವಳು ತನಗಾಗಿ ಎಂದೂ ಏನನ್ನೂ ಕೇಳಳು ಅವಳ ಕನಸು ಮನಸಲ್ಲಿ ಕೇವಲ ಕರುಳಕುಡಿಗಳಿಗಾಗಿ ಬದುಕುತ್ತಿರುತ್ತಾಳೆ. ಯಾವ ದೇವರೂ ಅವಳನ್ನು ಸರಿಗಟ್ಟಲಾರ.ಧನ್ಯವಾದಗಳು ಸರ್.

Leave a Reply

You cannot copy content of this page

Scroll to Top