ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹರಿದು ಬೀಳಲಿ

ಡಾ. ಕೆ.ಬಿ. ಸೂರ್ಯ ಕುಮಾರ್

ಹರಿದು ಬೀಳಲಿ ಮುಸಲದಾರೆಯ ಮಳೆಯು ಆಗಸದಿಂದ,
ಕೊಚ್ಚಿ ಹೋಗಲಿ ಕಟು ದ್ವೇಷವೆಲ್ಲಾ ,
ಬೆಳೆಸಿ ಕೊಂಡ್ಡಿದ್ದೆವು ನಾವು ತಲೆ ತಲಾಂತರದಿಂದ .
ತೊಳೆದು ಹೋಗಲಿ ಎಲ್ಲಾ ನೋವು, ನಿರ್ಲಕ್ಷದ ನೆರಳು.
ಮೇಲೆ ಬರಲಿ ಇನ್ನೊಮ್ಮೆ ಸೂರ್ಯ ಬಿಂಬ,
ತುಂಬುತ್ತ ಆಗಸದಲಿ ಕಾಮನ ಬಿಲ್ಲಿನ ಕುಂಭ.
ಶಮನಿಸಲಿ ರವಿಯ ಕಿರಣದ ತಾಪ
ಮುರಿದಿರುವ ನಮ್ಮಯ ಮನದ ನೋವು ಗಳನ್ನು.
ಕಳಚಿ ತೆಗೆಯಲಿ ಸುತ್ತಲಿನ ಮಂಜಿನಾ ಪದರ,
ಕಾಣುವಂತಾಗಲಿ ಎಲ್ಲರಾ ಮುಖಾರವಿಂದ …
ತೆಗೆದೊಗೆಯಲಿ ಭಾಷೆ, ಬಣ್ಣ, ಜಾತಿಯತೆಯ ಮುಖವಾಡ.
ಎಳೆ ಕಿರಣಗಳ ಸ್ಪರ್ಶ,
ಕರಗಿಸಲಿ ನಮ್ಮಯ ಸ್ವಾರ್ಥತೆ,
ಇರಲಿ ನೆರೆಮನೆಯ ನೋವಿನಲಿ ಭಾಗಿಯಾಗುವ ನಮೃತೆ …
ಭಾಸ್ಕರ ಕಿರಣದ ಪ್ರಖರತೆಗೆ
ಕಾಣುವಂತಾಗಲೀ,
ಎಲ್ಲರೂ ನೆರೆ ಹೊರೆಯವರಂತೆ…
ಮತ್ತೆ ಅರಳಲಿ ಭುವಿಯ ಮೇಲೆ ನಂಬಿಕೆಯ ಪುಷ್ಪ
ತೋರಲಿ ಪರ್ವತ ಶಿಖರಗಳು ಹೃದಯಕ್ಕೆ
ಸ್ವರ್ಗವೆಂಬಾ ನಕ್ಷೆ..


About The Author

42 thoughts on “ಹರಿದು ಬೀಳಲಿ-ಡಾ. ಕೆ.ಬಿ. ಸೂರ್ಯ ಕುಮಾರ್”

  1. D N Venkatesha Rao

    ತುಂಬಾ ಚೆನ್ನಾಗಿ ಕವನಸಿದ್ದೀರ. ಅಭಿನಂದನೆಗಳು

    1. Dr K B SuryaKumar

      ಅಣ್ಣಾ. ನಿಮ್ಮಿಂದಾಗಿ ಸಂಗಾತಿಗೆ ಸಂಗಾತಿಯಾದೆ ☺️☺️☺️

    2. ಚೆನ್ನಾಗಿದೆ ಕವನ ಸರ್, ಕಾವ್ಯ ಧ್ವನಿ ಸೊಗಸಾಗಿದೆ

    3. ಲೋಕನಾಥ್ ಅಮಚೂರು

      ಛಿದ್ರ ಗೊಂಡ ಮನಸ್ಸು ಒಂದು ಗೂಡುವಲ್ಲಿ ಕವಿಹ್ರದಯಗಳು ಸಾಕಷ್ಟು ಕೆಲಸ ಮಾಡಬೇಕಿದೆ. ಒಳ್ಳೆಯ ಕವಿತೆ.

  2. K B RATHANBABU

    ಹರಿಯುತಿದೆ ಕಾವ್ಯ ಧಾರೆಯು ಮುದವ ನೀಡುತ್ತಾ ಮುಸಲ ಧಾರೆಯ ಪರಿ.. ಸಾಗಲೀ ಕವಿ ಸಿಂಚನ .ಹೊಸ ವರುಷದ ಸೂರ್ಯ ಕಿರಣದಿ ವಿಷು ಸಂಕ್ರಮಣ ವ ಆಚರಿಸುತಾ.. ತುಂಬಾ ಸೊಗಸಾಗಿದೆ ನಿಮ್ಮ ಈ ಕಾವ್ಯ ಧಾರೆ..ಶುಭವಾಗಲಿ .. ಹಂಚುತಿರಿ ಸಿಹಿ ಮುತ್ತುಗಳ ಕವಿ ಕಲ್ಪನೆಯ.

  3. Jayashreeprasad

    Apt for today , true thoughts have poured out
    A hindi song comes to my mind ….
    Aa chal ke tujhe mein leke chalun ek aise gagan ke tale /Jahan ghum bhi na hon ,. Aasoon bhi na hon/ Bas pyar hi pyar pale / Jahan samjhoutha aur shanthi hi phyle

  4. ಮಂಜುನಾಥ ಪೈ

    “ಹರಿದು ಬೀಳಲಿ-“ ನಿಮ್ಮ ಈ ಕವಿತೆ ಅತಿ ಸುಂದರವಾಗಿದೆ.
    ಓದಿ ಆನಂದವಾಯಿತು. ಧನ್ಯವಾದಗಳು

  5. ನೀವು ಉತ್ತಮ ಕಥೆಗಾರರು ಎಂದು ಗೊತ್ತು ಆದರೆ ನೀವು ಒಳ್ಳೆಯ ಕವಿಯೂ ಎಂದು ತಿಳಿದು ಬಹಳ ಸಂತೋಷವಾಯಿತು.
    ಡಾ.ವಿ.ಕೆ.ಚಂಗಪ

Leave a Reply

You cannot copy content of this page

Scroll to Top