ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿನಗಿದೋ ನಮೋ ನಮಃ

ಹೆಚ್.ಮಂಜುಳಾ

ಪೌರ ಕಾರ್ಮಿಕ ನೀನು ನಿನಗಿದೋ ನಮೋ ನಮಃ……..
ನಿನಗಿದೋ ನಮೋ ನಮಃ…..

ನಮ್ಮನೆಯ ಕಸ ಕೊಳೆಗಳನ್ನು
ಅಸಹ್ಯಿಸದೇ ಬಾಚಿ ತುಂಬುವ
ಆ ನಿನ್ನ ಕೈಗಳ ಋಣ…

ಗಬ್ಬು ನಾರುತ್ತಿದ್ದರೂ ಕೊಳಕೆನ್ನದೇ-
ಮೂಗು ಮುಚ್ಚದೇ ಗಾಡಿ ತುಂಬಿಸಿ
ಸಾಗಿಸುವ ನಿನ್ನ ಸಹಿಷ್ಣತೆಯ ಋಣ…

ನಿನ್ನ ನೋಡಿ ಮೂಗು ಮುರಿಯುವ
ನಮ್ಮಂಥವರ ಕಡೆಗಣಿಸದೇ-
ಕರ್ಮ ಕಳೆಯುವ ನಿನ್ನ ಋಣ…

ಹೇಗೆ ತಾನೇ ತೀರಿಸಬಲ್ಲೆವೋ ಬಂದುವೇ ನಿನ್ನ ಋಣ..?! ಕೇವಲ
ನಿನಗಿದೋ ನಮ್ಮೆಲ್ಲರ ನಮೋ ನಮಃ.. ನಮನ..!


About The Author

1 thought on “ನಿನಗಿದೋ ನಮೋ ನಮಃ”

Leave a Reply

You cannot copy content of this page

Scroll to Top