ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಳಿಗೆ ಅರುಣೋದಯ

ಶಾಲಿನಿ ಕೆಮ್ಮಣ್ಣು

.

ಮನವೇ ಮರೆತು ಹೋಗದಿರು
ಹೃದಯವೇ ದೂರ ಮಾಡದಿರು
ತನುವೇ ನನ್ನ ತೊರೆಯದಿರು
ನಯನ ವೇ ನೋಟ ಬದಲಾಯಿಸದಿರು
ಕರವೇ ಕವಲಾಗದಿರು
ಕಾಲೇ ಅನ್ಯ ಪಥ ತುಳಿಯದಿರು
ಪ್ರಾಣವೇ ಜೀವವ ಸಂತೈಸು
ದುಂಬಿಯೆ ಜೇನ ಮುತ್ತಿಕ್ಕು
ಕಂಪಿಲ್ಲದ ಕುಸುಮದಂತೆ
ಬರಡಾದ ಬಯಲಂತೆ
ಕಳೆ ಇಲ್ಲದ ಆಭರಣದಂತೆ
ಕಾಯುತಿದೆ ಈ ಒಡಲು
ನಿನ್ನ ಪ್ರೇಮ ಸಿಂಚನಕೆ
ಮಧುರ ಸಿಹಿ ಚುಂಬನಕೆ
ಅಪ್ಪುಗೆಯ ಆನಂದಕೆ
ಬಾ ಮಳೆಯೇ ತಂಪಾಗಿ
ಮುದದೆ ಅರುಣೋದಯ ವಾಗಿ

——————-

About The Author

Leave a Reply

You cannot copy content of this page

Scroll to Top