ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಈರಪ್ಪಬಿಜಲಿಕೊಪ್ಪಳ

ವಿಶ್ವಮಾನವ ಪ್ರೇಮವ ಸಾರಿದ ಸಾಮಾಜಿಕ ಹರಿಕಾರ ನಮ್ಮೀ ಬಸವ
ಕೋಶ ಮಂತ್ರಿಯಾಗಿ ರಾಜ್ಯ ಉದ್ದರಿಸಿದ ಸರದಾರ ನಮ್ಮೀ ಬಸವ ||

ಲಿಂಗಬೇಧ ನೀಗಿಸಲು ಸಮಾನತೆ ಅನಿವಾರ್ಯ ಎನಿಸಿತೇ ನಿನಗೆ
ವರ್ಣಬೇಧ ಅಳಿಸಲು ದಿಟ್ಟ ಹೆಜ್ಜೆಯನಿಟ್ಟ
ಕ್ರಾಂತಿಕಾರ ನಮ್ಮೀ ಬಸವ ||

ಸಮಾಜದಲ್ಲಿ ಅಜ್ಞಾನ ಮೌಢ್ಯತೆ ತಾಂಡವ ಆಡುತಿದೆಯಲ್ಲ
ಅಂಧತೆ ನೀಗಿಸಲು ಮಹಿಳಾ ಶಿಕ್ಷಣಕೆ ಒತ್ತು ನೀಡಿದ ಸೋಜುಗಾರ ನಮ್ಮೀ ಬಸವ||

ವಚನಗಳ ಮೂಲಕ ಜೀವನದ ಸಾರವನು ತೋರಿದೆಯಲ್ಲ ಜಗಕೆ
ಕರ್ಮಗಳ ಹಿರಿಮೆ ತಿಳಿಸಲು ಕಾಯಕವೇ ಕೈಲಾಸವೆಂದ ಸೂತ್ರಧಾರ ನಮ್ಮಿ ಬಸವ ||

ಲೋಕದ ಆಗುಹೋಗುಗಳ ಚರ್ಚೆಗೆ ಅನುಭವ ಮಂಟಪ ಸ್ಥಾಪಿಸಿದೆಯಲ್ಲ
ವೈಚಾರಿಕ ನೆಲೆಯಲಿ ಜನಮನದಲ್ಲಿ ಬಿಜಲಿ ಮೂಡಿಸಿದ ಮೋಡಿಗಾರ ನಮ್ಮೀ ಬಸವ ||


About The Author

1 thought on “ಬಸವ ಜಯಂತಿ ವಿಶೇಷ”

  1. D N Venkatesha Rao

    ವಚನಗಳ ಮಹತ್ವವನ್ನು, ವಚನಕಾರರನ್ನು ಚೆನ್ನಾಗಿ ನೆನಪಿಸಿ ಕೊಂಡಿದ್ದೀರಿ.

Leave a Reply

You cannot copy content of this page

Scroll to Top