ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ .ಡೋ ನಾ ವೆಂಕಟೇಶ

ಬದುಕು

ಬದುಕು ಬದುಕುವುದು
ಸರಳವಲ್ಲ
ಬಡಿದಾಡುವ ಲೋಕದಲ್ಲಿ
ನಡೆದಾಡುವ ತನಕ

ಸಮಚಿತ್ತ ಜೀವನ
ಸುಗಮವಲ್ಲ
ಸಫಲ ಜೀವನ
ಸರಳವಲ್ಲ

ಜೀವನಕೆ ಬೇಕು
ಸ್ವಲ್ಪ ತಾಳ್ಮೆ
ಸ್ವಲ್ಪ ಸಹನೆ
ಮತ್ತಷ್ಟು ಉದಾಸೀನ

ಹಾಗೂ
ಬಹಳಷ್ಟು ಸಲ ಬೇಕು
ದಿವ್ಯ ನಿರ್ಲಕ್ಷ್ಯ

ಜೀವಿಸುವ ಸೂತ್ರ
ಅನುಸರಿಸು ನಿನ್ನ
ಉಸಿರಿರುವ ತನಕ
ಜೀವಂತವಾಗಿರುವ ತನಕ


About The Author

12 thoughts on “ಬದುಕು”

  1. ಮಂಜುನಾಥ

    ತುಂಬಾ ಚೆನ್ನಾಗದೆ ಕವಿತೆ ವೆಂಕಣ್ಣಾ.
    “ಬದುಕು ಬದುಕುವುದು ಸರಳವಲ್ಲಾ”

  2. Dr K B SuryaKumar

    ಸಮ ಚಿತ್ತ ಜೀವನ ಸುಲಭವಲ್ಲ ☺️☺️☺️☺️ ಸುಂದರ ಸಾಲುಗಳು.. .

  3. ಬಹಳಷ್ಟು ಸಲ ಬೇಕು
    ದಿವ್ಯ ನಿರ್ಲಕ್ಷ್ಯ ..

    * ಈಸಾಲಿನಲ್ಲಿಯೇ ಬದುದು ಸಾಗುತ್ತಿದೆ
    ಬಹುತ್ವ ‘ಬಡ ಭಾರತದ’ ಜನಜಂಗುಳಿ
    ನಿರ್ಲಿಪ್ತವಾಗಿ….

  4. Anonymous – ಎಂಬಲ್ಲಿ ನನ್ನ ಹೆಸರು ನಮೂದಿಸಿ.
    –ಪ್ರಭುರಾಜ ಅರಣಕಲ್

Leave a Reply

You cannot copy content of this page

Scroll to Top