ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದಿತ ಅಬಾಬಿಗಳು

ಕಾವ್ಯ ಸಂಗಾತಿ ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೮೬)ಕವಿತೆ ಸುರಿಸುವ ಹನಿಗಳುಮನಸ್ಸಿನ ಮಧುರ ಸ್ವರಗಳುಕವನದೊಂದಿಗೆ ಉಷೋದಯಹಕೀಮಾಕವಿತ್ವದಿಂದ ದಕ್ಕುವುದು ಅಭಯ. ೮೭)ಜುಬ್ಬವೋ ಅಂಗಿಯೋ ಜೇಬು ತುಂಬಬೇಕಷ್ಟೇಜೈಕಾರ ಕೂಗುವರು ಬಾವುಟಗಳು ಹೊರುವರುಮತ್ತೆ ಪ್ರಾಮಣಿಕತೆ ಪಾಠ ಮಾಡುವರುಹಕೀಮಾಅಲ್ಲಾಹ್ ನೋಡುವುದಿಲ್ಲವೆಂದೆ ಇವರ ನಂಬಿಕೆ? ೮೮)ಜಮಾತುಗಳ ಹೆಸರಿನಲ್ಲಿ ಸಮಾಜದಲ್ಲಿ ಗೌರವಅಧಿಕಾರಕ್ಕಾಗಿ ಗುಂಪುಗಾರಿಕೆಯ ಅಹಂಕಾರಇವರು ಯಾರ ಕಾರುಣ್ಯವನ್ನು ಕೋರುತ್ತಿದ್ದಾರೆ?ಹಕೀಮಾಜನರ ಪ್ರೀತಿಗಾಗಿಯೋ ಇಲ್ಲ ಸ್ವ ಕೀರ್ತಿಗಾಗಿಯೋ? ೮೯)ವಾಸ್ತವದಲ್ಲಿ ನಡೆಯುತ್ತಿರುವುದು ಹಲಾಲಾಹಲಾಲಿನ ಮುಸುಕಿನಲ್ಲಿ ಹರಾಮಾ?ನಮಗೆ ಅಡ್ಡ ಬರದವರೆಗೇ ಏನಾದರೂಹಕೀಮಾಅಡ್ಡ ಬಂದರೆ ದೀನ್ ಆದರೂ ನೈ ಜಾಂತಾ. ೯೦)ಲೋಕ ಕಾಗೆಯಂತೆ ತಿವಿಯುತ್ತಿದೆನಿನಗೆ ಉಗ್ರವಾದಿಯ ಮುದ್ರೆಯೊತ್ತುತ್ತಿದೆನೀನು ಮಾತ್ರ ಮಣಿಗಳನ್ನು ಏಣಿಸುತ್ತಿರುಹಕೀಮಾನಿನ್ನಲ್ಲಿ ವಿಶ್ವಾಸ ಧೈರ್ಯ ಇದೆಯಾ? ಪದದಗಳ ಅರ್ಥ :-ಜಮಾತ್ = ಧಾರ್ಮಿಕ ಸಮೂಹ/ಸಭೆಹಲಾಲ್ = ಧರ್ಮ, ಹರಾಮ್ = ಅಧರ್ಮದೀನ್ = ಧರ್ಮ ೯೧)ಉಷಃಕಾಲ ಕಂಬಳಿ ಹೊದ್ದುಕೊಂಡಿದೆಊಹೆಗಳ ಉತ್ಸವ ಆರಂಭವಾಗಿದೆನಿಮ್ಮ ತಾತನವರು ಅಂದೆಂದೋ ನವಾಬರಾಗಿದ್ದರಂತೆಹಕೀಮಾನೀವು ಮಾತ್ರ ಗುಲಾಮರಂತೆ ಬದಲಾಗುತ್ತಿದ್ದೀರಿ. ೯೨)ಸಾಕು ಸಾಕಾಗದ ಉದ್ಯೋಗಗಳುಸಾಯಂಕಾಲಕ್ಕೆ ಚಿಕನ್ ತುಣುಕುಗಳುಗಳಿಕೆಯೆಲ್ಲಾ ಅನಗತ್ಯ ಖರ್ಚುಗಳುಹಕೀಮಾಪ್ರವಾದಿಯವರ ವಿಧಾನವನ್ನು ಯಾವಾಗ ಪಾಲಿಸುವುದು? ೯೩)ಕೂಲಿಯಾಗಿ, ಕಾರ್ಮಿಕನಾಗಿ, ರಿಕ್ಷಾವಾಲನಾಗಿಆಯಿಲ್, ದುಮ್ಮು-ಧೂಳು, ಬೆವರಿನಲ್ಲಿಹೊಟ್ಟೆಪಾಡಿಗಾಗಿ ದುಡಿದು ದಣಿಯುವೆಯಲ್ಲಾಹಕೀಮಾನಿನಗಿಲ್ಲವೆ ಪಲ್ಲಕ್ಕಿಯನ್ನೇರುವ ಅಧಿಕಾರ? ೯೪)ಇಂದಿಗೂ ಸಾಕು ಸಾಲದ ಕೆಲಸಗಳಲ್ಲಿ ಕೊಳೆಯುತ್ತಅರ್ಧ ಹೊಟ್ಟೆಯ ಉಪವಾಸದಲ್ಲಿ ಬೇಯುತ್ತಕೊತಕೊತ ಕುದಿಯುತ್ತ ಆವಿಯಾಗುತ್ತಿಹೆವುಹಕೀಮಾನಮಗಾಗಿ ಇನ್ನೊಂದು ಮಹಾಮಾರಿ ಕಾಯುತ್ತಿಹುದೆ? ೯೫)ಯಾಕೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದು?ಇದೇನಾ ನಮಗೆ ಕಲಿಸಿದ ಜೀವನ ವಿಧಾನ!ದೇವರಿಗಿಂತ ಮನುಷ್ಯರಿಗೇ ಭಯಪಡುತ್ತಿದ್ದೀರಾ?!ಹಕೀಮಾಇದು ಬಲಹೀನ ವಿಶ್ವಾಸದ ಸಮಾಜವೆ? ೯೬)ದೈವವನ್ನು ನಂಬುವುದೆಂದರೆ ವೇಷಧಾರಣೆಯೆ?ಇಲ್ಲವೆ ಸಂಘಗಳ ಏರ್ಪಾಟುಗಳ ಆರ್ಭಟವೆ?ನಮ್ಮಲ್ಲೇ ಇಲ್ಲ ಒಗ್ಗಟ್ಟುಹಕೀಮಾನಿಜವಾಗಿಯೂ ನಾವು ದೈವದ ಮಕ್ಕಳೇನಾ? ೯೭)ಯಾರೋ ಒಬ್ಬರು ಬಲಿಯಾದರಷ್ಟೇಸ್ವಲ್ಪ ಹೊತ್ತು ಬೀದಿಗಿಳಿದು ಪ್ರದರ್ಶನ ಮಾಡುವೆವುಟೀವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟಣೆಗಳು ಸಮಾವೇಶಗಳುಹಕೀಮಾಮತ್ತೆ ಬೆಳಗಾದರೆ ದುರಸ್ತಿಗಳೇ ಜೀವನ. ೯೮)ನೈತಿಕ ಮೌಲ್ಯಗಳೆನ್ನುತ್ತಾರೆವ್ಯಾಪಾರದಲ್ಲಿ ಮೋಸ ಮಾಡುತ್ತಾರೆಅಲ್ಲಾಹ್ ಕಸಮ್ ಎಂದು ನಂಬಿಸುತ್ತಾರೆಹಕೀಮಾಅಲ್ಲಾಹ್ ಅಂದ್ರೆ ಅಷ್ಟು ಸಾಮಾನ್ಯ ಪದವೆ? ೯೯)ರೋಗಿಗೆ ಬೇಕಿರುವುದು ಚಿಕಿತ್ಸೆಮಂತ್ರಿಸುವ ಕಾಯಿಗಳುದಾರದ ತಾಯತ್ತುಗಳು ಅಲ್ಲವಲ್ಲಾಹಕೀಮಾಬಾಬಾಗಳಿಂದ ಬಾಧೆಗಳು ದೂರವಾಗುವವೆ? ೧೦೦)ಕಪಟವು ಮನುಷ್ಯನಲ್ಲಿ ನೆಲೆಯೂರಿದೆಯಾರನ್ನು ಮೋಸ ಮಾಡುತ್ತಿದ್ದಾನೆಸಮಾಜವನ್ನಾ? ಇಲ್ಲ ದೈವವನ್ನಾ?ಹಕೀಮಾವಾಸ್ತವವಾಗಿ ತನಗೆ ತಾನೇ ಮೋಸಹೋಗುತ್ತಿದ್ದಾನೆ. ೧೦೧)ಬಡವನೆಂದರೆ ಎಲ್ಲರಿಗೂ ತಾತ್ಸರವೇಗುಲಾಮಗಿರಿಗೆ ವಾರಸತ್ವವೆ?ಮತ್ತೆ ಯಾಕೆ ನೀಚವಾಗಿ ಕಾಣುವಿರಿಹಕೀಮಾಮಹಮ್ಮದ್ (ಸ) ಬಡವರೇ ಅಲ್ಲವೆ! ೧೦೨)ಧರ್ಮವೆಂದರೆ ದೈವಾಜ್ಞೆಗಳ ಸಾರಇವರೇನು ತಲಾ ಒಂದೊಂದು ದಿಕ್ಕು!ಎಲ್ಲರಿಗೂ ತಮ್ಮದೇ ವ್ಯಾಪಾರದ ಗುಂಗುಹಕೀಮಾಅಸಲು ಧರ್ಮವೆಂದರೇನು ಅಂತ ಬಲ್ಲರೆ? ೧೦೩)ದೈವ ಸಂದೇಶವೇನಾದರೂ ಉದ್ಯೋಗವೆ?ರಜಾ ದಿನಗಳಲ್ಲಿ ಸಾರಲುಸಂಘಗಳಲ್ಲಿ ಎಲ್ಲರೂ ಅವರೇನಾ?ಹಕೀಮಾದೈವವೆಂದರೆ ಭಯವಿದ್ದರೆ ಅಲ್ಲವೆ! ೧೦೪)ಅಕ್ಕಪಕ್ಕದವರೊಡನೆ ಜಗಳಗಳುಸಮಾಜದಲ್ಲಿ ಸುಧಾರಕರಂತೆ ನಾಟಕಗಳುನಿಮ್ಮ ವೇಷಭೂಷಣಗಳೆಲ್ಲಾ ಬರೀ ತೋರಿಕೆಯೆ?ಹಕೀಮಾದೈವಕಾರ್ಯದಲ್ಲೂ ಕಣ್ಣಾಮುಚ್ಚಾಲೆಯಾಟವೆ! ೧೦೫)ಮಾತುಗಳಷ್ಟೇ ಆಚರಣೆ ಎಲ್ಲಿನಿನ್ನ ಮನದ ಕನ್ನಡಿಯಲ್ಲಿ ನೋಡುವಾಸ್ತವದ ಬೆಳಕಿನಲ್ಲಿ ಬದುಕುಹಕೀಮಾಇಹಲೋಕದಲ್ಲಿ ನೀನು ದಾರಿಹೋಕನೇ! ೧೦೬)ಹಣದ ಮೇಲೆಷ್ಟು ವ್ಯಾಮೋಹ!ಹೆಜ್ಜೆ ಹೆಜ್ಜೆಗೂ ವಂಚನೆಗಳುದುಡ್ಡೇ ಸರ್ವಸ್ವವೆ?ಹಕೀಮಾಇದೊಂದು ದೊಡ್ಡ ಪರೀಕ್ಷೆ ಹುಷಾರು. ೧೦೭)ಆತ್ಮೀಯತೆ ಅನುರಾಗಗಳುಇಂದು ಹೇಳಿಕೊಳ್ಳಲ್ಲಷ್ಟೇನಾಮನುಷ್ಯ ಮನುಷ್ಯನನ್ನೇ ನಂಬುವುದಿಲ್ಲಹಕೀಮಾದೈವದ ಮೇಲಾದರೂ ನಂಬಿಕೆ ಇದೆಯಾ? ೧೦೮)ಕಷ್ಟಗಳಲ್ಲಿದ್ದರೆ ಸಲಹೆಗಳನ್ನು ಕೊಡುತ್ತಾರೆಹಸಿವಿನಲ್ಲಿರುವವರಿಗೆ ಅನ್ನ ನೀಡಬೇಕುಮಾತುಗಳಿಂದ ಹಸಿವು ನೀಗುವುದೆ?ಹಕೀಮಾಸಲಹೆಗಳಿಂದ ಕಷ್ಟಗಳು ತೀರುವವೆ? ೧೦೯)ಬಲವೆಂದರೆ ತೋಳ್ಬಲವೆ?ಇಲ್ಲ ಧನ ಬಲವೆ?ಅಧಿಕಾರ ಬಲವೆ?ಹಕೀಮಾಅಸಲು ಬಲವೆಂದರೆ ವಿಶ್ವಾಸವೇ ಅಲ್ಲವೆ! ೧೧೦)ನಿಶ್ಶಬ್ದವು ಶಾಂತಿ ಚಿಹ್ನೆಯೆ?ಹೇಡಿತನದ ಪ್ರತಿರೂಪವೆ?ನಮ್ಮನಾವಾಹಿಸಿದ ಒಳ್ಳೆಯತನವೆ?ಹಕೀಮಾತಪ್ಪನ್ನು ಮನಸ್ಸಿನಲ್ಲೂ ತಡೆಯಲಾರದವರು! ೧೧೧)ಗತವನ್ನು ಅನುಭವದಿಂದ ನೋಡುಪ್ರಸ್ತುವವನ್ನು ಆಚರಣೆಯಿಂದ ಮಾಡುಭವಿಷ್ಯತ್ತಿಗೆ ದಾರಿಗಳನ್ನು ನಿರ್ಮಿಸುಹಕೀಮಾಪರಲೋಕವೇ ಅಲ್ಲವೆ ಅಸಲಿ ಭವಿಷ್ಯತ್ತು. ೧೧೨)ಜೀವನವೆಂದರೆ ವಿಲಾಸಗಳ ವಾಹನವೆ?ಎಲ್ಲೆಗಳಿರದ ವ್ಯಸನಗಳಮಯವೋ?ಮನೋವ್ಯಾಧಿಗಳ ತವರು ಮನೆಯೆ?ಹಕೀಮಾಪ್ರವಾದಿಯವರ ಮಾತೇ ಬದುಕಿಗೇ ಹೂದೋಟ. ೧೧೩)ಊಹೆಗಳಲ್ಲಿ ಎಷ್ಟು ಹೊತ್ತು ಕಳೆಯುವೆ?ಇಸ್ಪೀಟೆಲೆಗಳ ಮಹಡಿಗಳು ಕುಸಿದು ಬೀಳುವವುಸ್ಥಿರವಾದ ನಿರ್ಣಯಗಳನ್ನು ತೆಗೆದುಕೋಹಕೀಮಾದೈವದೊಂದಿಗೆ ನಂಟನ್ನು ಹೆಚ್ಚಿಸಿಕೋ. ೧೧೪)ಕುಸಿಯುತ್ತಿವೆ ಕನಸುಗಳು!ಕರಗುತ್ತಿವೆ ಕಾಲಗಳು!ಎಂದು ಬರುವುದು ಆತ್ಮಸ್ಥೈರ್ಯ?ಹಕೀಮಾಆಚರಣೆಯೇ ನಿನ್ನ ಜೀವನದ ಗೆಲುವು. ೧೧೫)ನಿನ್ನಲ್ಲಿ ಉಕ್ಕುವ ಭಾವಗಳೇಉದ್ವೇಗ ಭರಿತ ಜ್ವಾಲೆಗಳುನೀತಿಗಾಗಿ ಹೋರಾಡುವ ವೀರನಾಗಿಹಕೀಮಾಬದುಕು ವಿಶ್ವಾಸಿಯಾಗಿ ಚಿರಕಾಲ.

ಅನುವಾದಿತ ಅಬಾಬಿಗಳು Read Post »

ಕಾವ್ಯಯಾನ

ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆಮಿತವಾದರೆ ಎಲ್ಲವೂ ಹಿತಅತಿಯಾದರೆ ಅಪಸ್ವರ ಶಾಲಿನಿ ಕೆಮ್ಮಣ್ಣು

Read Post »

You cannot copy content of this page

Scroll to Top