ಅನುಮಾನ

ಕಾವ್ಯಯಾನ

ಅನುಮಾನ

ಬಿ.ಶ್ರೀನಿವಾಸ

ನಿನ್ನೆ ರಾತ್ರಿಯಿಡೀ ಎಚ್ಚರವಿಲ್ಲದ ಸುದೀರ್ಘ ನಿದ್ರೆ

ಅಪ್ಘನ್ನಿನ ಚೂಪು ಮೊನಚಿನ ಬಂದೂಕು
ಆಕ್ರಂದನ,
ಓಡುವ ವಿಮಾನದಿಂದ ಸಿಡಿದ ದೇಹಗಳು
ಅಳುವ ಕಂದಮ್ಮಗಳು…
ನೋಡಿಯೂ ಮಲಗಿದ
ನನ್ನ ಬಗ್ಗೆ
ನನಗೇ ಅನುಮಾನ!

ಹೌದು,
ನಾನು
ನನ್ನಂತೆ ನನ್ನ ಊರು,
ನನ್ನ ದೇಶ
ನನ್ನ ಜಗತ್ತೂ..
ನಿದ್ರೆಗೆ ಜಾರಿತು ಎನ್ನಲಾರೆ

ಸತ್ತವರಿಗೆ ಮಾತ್ರ ನಿರಾಳತೆ
ಮಾತು …
ಎಷ್ಟು ಸತ್ಯ!


About The Author


Comments

Leave a Reply

You cannot copy content of this page