ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗ‌ಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ‌ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ‌ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….‌‌

ಈ ಸಂಜೆ Read Post »

ಕಥಾಗುಚ್ಛ

ಕಥೆ ಶಾರದ ಭಾಗ-2 ಅನಸೂಯ ಎಂ.ಆರ್ ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು  “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್  SSLC ಪರೀಕ್ಷೆಯಲ್ಲಿ  ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು  ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ.   ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು  “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು  ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು ಶ್ರಮಗಳಿದ್ದರೆ ಸಾಕು ಈಗ ಮುಂದುವರಿಬಹುದು.ನೀನೇನು ಚಿಂತೆ ಮಾಡ್ಬೇಡ”   ಅಂದು ರಾತ್ರಿ ಎಲ್ಲರ ಊಟವಾದ ನಂತರ ಶಾರದಳೇ “ವರುಣ್, ಎಲೆಕ್ಟ್ರಿಕಲ್ ಶಾಪ್ ಇಡೋಕ್ಕೆ ಬಂಡವಾಳನ ಎಲ್ಲಿಂದ ಹೇಗೆ ವ್ಯವಸ್ಥೆ ಮಾಡ್ಬೇಕು ಅಂತ ಪ್ಲಾನ್ ಏನು ಮಾಡಿದೀಯಾ?”ಎಂದು ಕೇಳಿದಳು”ಅತ್ತೆ ಅಪ್ಪ ಒಂದು  ಸ್ಟಲ್ಪ ಬಂಡವಾಳ ಕೊಡಲಿ.ಅಂಗಡಿಗೆ ಹೇಗೂ ಬಾಡಿಗೆನ ಕೊಡಬೇಕಾಗಿಲ್ಲ ಆದ್ದರಿಂದ ಬ್ಯಾಂಕ್ ನಲ್ಲಿ ಸಾಲವನ್ನು ಕೊಡಿಸಲಿ. ಸಾಲ ತೀರಿಸೊ ಜವಾಬ್ದಾರಿನೂ ನಂದೆ” ಆಗ   ಮಂಜುನಾಥ “ಅಕ್ಕ ಇನ್ನು ವಾಣಿದು ಮದ್ವೆ ಆಗಿಲ್ಲ. ಇನ್ನ ಒಂದೆರಡು ವರ್ಷ ಅವರತ್ರನೇ ಕೆಲ್ಸ ಮಾಡಿ ಅನುಭವ ಆಗಲಿ ವಾಣಿ ಮದ್ವೆ ಆದ ಮೇಲೆ ಅವನು ಹೇಳಿದಂಗೆ  ಮಾಡಿಕೊಡ್ತೀನಿ”ಎಂದು ಹೇಳಿದ.”ಈಗಾಗಲೇ ಮೂರು ವರ್ಷದ ಅನುಭವ ಆಯ್ತು ಕಣಪ್ಪ ನಾನೇ ಸ್ವಂತ ಶಾಪ್ ಇಟ್ಟು ನಡಿಸೋ ಅಷ್ಟು ಜವಾಬ್ದಾರಿ ಬಂದಿದೆ. ನಾನೇನೂ ಇನ್ನು ಚಿಕ್ಕಹುಡುಗ ಅಲ್ಲ. ಎಲ್ಲರೂ ಸಪೋರ್ಟ್ ಮಾಡ್ರಿ” ಎಂದನು. “ಆಯ್ತು ಮಂಜು, ನೀನು ನಿನ್ನ ಕೈಲಾದಷ್ಟು ಕೊಡು ನನ್ನ ಕೈಲಾದಷ್ಟು ನಾನು ಕೊಡ್ತೀನಿ. ಉಳಿದಿದ್ದಕ್ಕೆ ಬ್ಯಾಂಕ್ ಲ್ಲಿ ಸಾಲ ತೆಗೆದುಕೊಡು. ಸಾಲದ ಹಣ ಅವನೇ ಕಟ್ಟಬೇಕು”ಎಂದು ತೀರ್ಮಾನವಾದ ಖುಷಿಯಲ್ಲಿ ತಮ್ಮ ವರುಣನ ಮುಖ ಅರಳಿದಾಗ ವಾಣಿ “ಅಂಗಡಿಗೆ ಏನಂತ ಹೆಸರಿಡ್ತೀಯಾ ವರುಣ” ಮಂಜು ತಕ್ಷಣವೇ “ಶಾರದಾ ಎಲೆಕ್ಟ್ರಿಕಲ್ಸ್”ಎನ್ನುತ್ತಿದ್ದಂತೆ ಎಲ್ಲರು ಚಪ್ಪಾಳೆ ಹಾಕಿದರು. ಎರಡು ತಿಂಗಳೊಳಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗಾಡುತ್ತ ವರುಣ್ ಎಲ್ಲ ಕೆಲಸಗಳನ್ನು ಮುಗಿಸಿದನು   ಶುಭ ಮುಹೂರ್ತದಲ್ಲಿ ಅಂಗಡಿಯನ್ನು ಪ್ರಾರಂಭಿಸಿದನು  ಕೆಲವು ದಿನಗಳಾದ ಮೇಲೆ “ಅತ್ತೆ,ಇದು ನನ್ನ ಮೊದಲನೆ ಲಾಭ. ನೀನು ಅಮ್ಮ ನಿಮಗೇನು ಇಷ್ಟಾನೋ ತಗೊಳ್ಳಿ” ಹಣವನ್ನು ಕೊಡುತ್ತ ಹೇಳಿದ.” ನಮಗೇನು ಬೇಡ ಕಣಪ್ಪ ಮೊದಲು ಬ್ಯಾಂಕ್ ಸಾಲ ತೀರ್ಸು.ಆಮೇಲೆ ಕೊಡೋದು ಇದ್ದೇ ಇದೆ” ಶಾರದ ಹೇಳಿದಳು.ಆಗ ಮಂಗಳ ” ಹೌದು ಬ್ಯಾಂಕಿಗೆ ಕಟ್ಟಪ್ಪ”ಎಂದಳು. ಎಲ್ಲರೂ ಆ ರಾತ್ರಿ ಊಟಕ್ಕೆ  ಕುಳಿತಾಗ ಶಾರದ ವರುಣ್ ಹಣ ತಂದುಕೊಟ್ಟ ವಿಷಯ ಹೇಳಿ ಬ್ಯಾಂಕ್ ಸಾಲ ತೀರ್ಸಲು ತಿಳಿಸಿದೆ ಎಂದಳು. ಆಗ ಮಂಜುನಾಥ ಹೆಮ್ಮೆಯಿಂದ “ನಮ್ಮ ಮನೇಲಿರೊ ಐದು ಜನ ಇದೀವಿ ಅದ್ರಲ್ಲಿ ನಾಲ್ಕು ಜನ ದುಡಿತೀವಿ” ಹೇಳಿದ ಕೂಡಲೆ ವಾಣಿ ” ಅಪ್ಪ, ನಾವು ಐದು ಜನರು ದುಡೀತಾ ಇದೀವಿ ಕಣಪ್ಪ. ನಾವು ನಾಲ್ಕು ಜನ ಹೊರಗಡೆ ದುಡಿದ್ರೆ ಅಮ್ಮ ಮನೆಯೊಳಗೆ ದುಡೀತಾಳೆ.”ತಕ್ಷಣವೇ ಶಾರದ “ಸರ್ಯಾಗಿ ಹೇಳಿದೆ ಕಣೆ”ಎಂದು ಅವಳ ಬೆನ್ನು ತಟ್ಟಲು “ಆಯ್ತು ಮಗಳೆ ಒಪ್ಕಂಡೆ. ಅದಕ್ಕೆ ಹೇಳೋದು ನಾನು ನನ್ನ ಮಗಳು ಜಾಣೆ ಅಂತ” ಎಂದು ಹೇಳಿದವನು ತಕ್ಷಣ ಹೆಂಡತಿ ಕಡೆ ನೋಡುತ್ತಾ” ತಪ್ಪಾಯ್ತು ನಮ್ಮ ಮಗಳು”  ಎನ್ನಲು ಎಲ್ಲರೂ ನಕ್ಕು ಬಿಟ್ಟರು. ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು  “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್  SSLC ಪರೀಕ್ಷೆಯಲ್ಲಿ  ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು  ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ.   ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು  “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು  ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು

Read Post »

ಕಾವ್ಯಯಾನ

ರೆಕ್ಕೆಗಳ ಹರವಿದಷ್ಟು ಕಂಬನಿ

ಕಾವ್ಯಯಾನ ರೆಕ್ಕೆಗಳ ಹರವಿದಷ್ಟು ಕಂಬನಿ ಅಶೋಕ ಹೊಸಮನಿ ದೃಷ್ಟಿ ದೃಷ್ಟಿಯನೆದುರಿಸುವುದು ಸುಲಭದ ಮಾತಲ್ಲ ಸಖಾಎರಡೇ ಎರಡು ಹೆಜ್ಜೆಗಳ ಪ್ರೇಮಆತ್ಮಗಳ ಅನಂತ ಬಿಕ್ಕು ದೇವರು ದೇವರನೆದುರಿಸುವುದು ಸುಲಭದ ಮಾತಲ್ಲ ಸಖಾತೀರಿ ಹೋದವು ಅದೆಷ್ಟೋ ನದಿಗಳುಕಣ್ಮರೆಯಾದರು ಕಡು ತೀರದಷ್ಟು ಸೂರ್ಯ,ಚಂದ್ರರು ಮುಸ್ಸಂಜೆ ಮುಸ್ಸಂಜೆಯನೆದುರಿಸುವುದು ಸುಲಭದ ಮಾತಲ್ಲ ಸಖಾಸುಟ್ಟ ನೆತ್ತರಿನಲಿಬೆಂದ ಕನಸುಗಳ ಮೇಳವು ಖಡ್ಗ ಖಡ್ಗವನೆದುರಿಸುವುದು ಸುಲಭದ ಮಾತಲ್ಲ ಸಖಾಎತ್ತರಕ್ಕೇರಿಸುವಾಗಲೂ ಪ್ರೀತಿಉಕ್ಕೀತು ಶಾಂತಿಯ ಬಾವುಟವು ಸಖಾರೆಕ್ಕೆಗಳ ಹರವಿದಷ್ಟು ಕಂಬನಿತಾಕಿದಷ್ಟು ಒಡನಾಡಿ ನೋಟಗಳುಹಾದಿಗೊಂದಿಷ್ಟು ಕೋರಿಕೆಯೂ

ರೆಕ್ಕೆಗಳ ಹರವಿದಷ್ಟು ಕಂಬನಿ Read Post »

ಇತರೆ

ಜ್ಞಾನದ ಹೊತ್ತಿಗೆಗಳು

ಲೇಖನ ಜ್ಞಾನದ ಹೊತ್ತಿಗೆಗಳು ಆರ್. ಬಿ. ಪ್ರಿಯಾಂಕ : ಪುಸ್ತಕಗಳು  ಮಸ್ತಕಗಳ   ತೆರೆಸುತ್ತವೆ,  ಪುಸ್ತಕಗಳು  ಹೃದಯಗಳ  ತಟ್ಟುತ್ತವೆ,   ಪುಸ್ತಕಗಳು  ಮಾತು – ಮನಗಳ ಒಂದು ಮಾಡುತ್ತವೆ,   ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ  ಜಿಜ್ಞಾಸೆಗಳ ಫಲವಾಗಿವೆ.  ಮನುಷ್ಯನ  ಯೋಚನೆಗಳು,  ಕಾರ್ಯಗಳು,  ಸಾಧನೆಗಳು, ಪುಸ್ತಕಗಳ  ರೂಪದಲ್ಲಿ   ಶಾಶ್ವತವಾಗಿರುತ್ತವೆ. ಈ  ಪುಸ್ತಕಗಳು ಪೀಳಿಗೆಯಿಂದ  ಪೀಳಿಗೆಗೆ ಜ್ಞಾನವವನ್ನು  ವರ್ಗಾಯಿಸುವ ಸುಲಭ ಸಾಧನಗಳಾಗಿವೆ. ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ ನಮ್ಮ ಅಜ್ಞಾನದ ಅರಿವು ನಮಗಾಗುತ್ತದೆ. ಡಾ ll A.P.J.ಅಬ್ದುಲ್ ಕಲಾಂ  ರವರ ಮಾತಿನಂತೆ ” ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ” ಎಂಬ ನುಡಿಯಂತೆ ಪುಸ್ತಕಗಳು ನಮ್ಮಿಂದ ಎಂದಿಗೂ ದೂರ ಹೋಗದ ಆಪ್ತ ಸ್ನೇಹಿತನಂತೆ. ಪುಸ್ತಕಗಳು ಜ್ಞಾನದ ಜೊತೆ ಜೊತೆಗೆ ಜೀವನ ಪಾಠವನ್ನು, ಸಹಾಯ – ಸಹಕಾರಗಳನ್ನು ಕಲಿಸುತ್ತವೆ. ” ದೇಶ ಸುತ್ತಿ ನೋಡು ಕೋಶ ಓದಿ ನೋಡು “ ಎಂಬಂತೆ ಪುಸ್ತಕಗಳನ್ನು  ಓದುವುದರಿಂದ ವಿವಿಧ ದೇಶಗಳಲ್ಲಿನ  ಸಾಹಿತ್ಯ, ಕಲೆ,  ಸಂಸ್ಕೃತಿ,  ಹಾಗೂ ಆಚಾರ-ವಿಚಾರಗಳು ತಿಳಿಯುತ್ತವೆ. ಒಬ್ಬ  ವ್ಯಕ್ತಿ  ತಾನಿರುವ ಸ್ಥಳದಲ್ಲಿಯೇ  ಲೋಕದ ಅನುಭವವನ್ನು  ಪುಸ್ತಕಗಳಿಂದ  ಪಡೆಯುತ್ತಾನೆ.   ಪುಸ್ತಕಗಳು ಧರ್ಮ,  ದೇಶ,  ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರಿಂದ ಇವು ಸತ್ಯವೂ, ನಿತ್ಯವೂ, ನಿರಂತರವೂ,  ಸುಂದರವೂ  ಆಗಿವೆ.  ” ಓದಿನ ಸುಖವೊಂದೇ ನಿತ್ಯವಾದದ್ದು, ಮಿಕ್ಕ ಸುಖಗಳಿಗೆ ನಾವು  ಹಲವರನ್ನು ಅವಲಂಬಿಸಬೇಕಾಗುತ್ತದೆ ಎಂಬ ಮಾತಿನಂತೆ, ಪುಸ್ತಕಗಳು ಸ್ಪಂದನಕ್ಕೆ ಗುರಿಯಾಗಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತವೆ. ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು  ಹೋಗುತ್ತವೆ. ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ, ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿಸುವಂತೆ ಮಾಡುತ್ತದೆ, ಪುಸ್ತಕವು ಹೇಗೆ ಜೀವಿಸಬೇಕೆಂದು ಕಲಿಸುತ್ತದೆ. ಎಂಬ ಡಾ ll ಬಿ. ಆರ್. ಅಂಬೇಡ್ಕರ್ ರವರ ನುಡಿಯಂತೆ, ಉತ್ತಮ ಪುಸ್ತಕಗಳು  ನಮ್ಮ ಬದುಕಿನ ದಾರಿದೀಪಗಳಾಗಿವೆ. ಜೀವನವನ್ನು ಕಟ್ಟುವ ಶಕ್ತಿಗಳಾಗಿವೆ. ” A room without books is like a body without a soul”      ಎಂಬಂತೆ ” ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ “.        ಪುಸ್ತಕಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಓದಬೇಕು ಅದರಿಂದ ಜ್ಞಾನ ಹೆಚ್ಚುತ್ತದೆ.                     ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.  ಎಂಬಂತೆ ಬಂಗಾರವನ್ನು ಉಜ್ಜಿದಷ್ಟೂ ಹೊಳಪು ಬರುವಂತೆ ಜ್ಞಾನವನ್ನು ಹಂಚಿದಷ್ಟೂ ಹೆಚ್ಚುತ್ತಲೇ ಹೋಗುತ್ತದೆ. ಈ ಜ್ಞಾನ ಪುಸ್ತಕಗಳನ್ನು ಓದುವುದರಿoದ  ಸಿಗುತ್ತದೆ. ಪುಸ್ತಕಗಳನ್ನು ಓದುವ, ಸಂಗ್ರಹಿಸುವ  ಪ್ರವೃತ್ತಿ  ಪ್ರತಿಯೊಬ್ಬ  ಸುಶಿಕ್ಷಿತನಲ್ಲೂ  ಬೆಳೆಯಬೇಕು. ಮಹಾಕಾವ್ಯಗಳಾದ ರಾಮಾಯಣ,  ಮಹಾಭಾರತ, ಮತ್ತು ಭಗವದ್ಗೀತೆ,  ಬೈಬಲ್, ಕುರಾನ್ ಗ್ರಂಥಗಳು ಹಾಗೂ ಕಾಳಿದಾಸರ ಕೃತಿಗಳು ಇನ್ನೂ ಇತ್ಯಾದಿ ಪುಸ್ತಕಗಳನ್ನು ಮೊದಲು  ಓದಿದವರು ನಂತರದಲ್ಲಿ ಅವುಗಳನ್ನು  ನಿರ್ಲಕ್ಷಿಸಿದ್ದರೆ,  ಇಂತಹ ಮಹಾನ್ ಗ್ರಂಥಗಳ ಹಿನ್ನೆಲೆ ಮತ್ತು ಅವುಗಳ ಮಹತ್ವ  ನಮಗೆ ತಿಳಿಯುತ್ತಿರಲಿಲ್ಲ. ಸಾಧ್ಯವಾದಷ್ಟು ಪುಸ್ತಕಗಳನ್ನು ಓದಿ ಅವುಗಳನ್ನು ಜೋಪಾನವಾಗಿ  ಸಂಗ್ರಹಿಸಿಡೋಣ. ಎಲ್ಲರ   ಮನೆ-ಮನಗಳಲ್ಲಿ  ಪುಸ್ತಕಗಳು ಬೆಳಗಲಿ ಎಂದು ಆಶಿಸೋಣ…..

ಜ್ಞಾನದ ಹೊತ್ತಿಗೆಗಳು Read Post »

ಇತರೆ

ದಾರಾವಾಹಿ ಆವರ್ತನ ಅದ್ಯಾಯ-39 ‘ಕೊಡೆಕ್ಕೆನಾ’ ಹೋಟೇಲಿನೆದುರು ವ್ಯಾಪಾರ ಆರಂಭಿಸಿ ಕೈಸುಟ್ಟುಗೊಂಡು ದಿವಾಳಿಯಾದ ಹೇಮಚಂದ್ರನು ಹೈರಾಣಾಗಿದ್ದ ಸಂದರ್ಭದಲ್ಲಿ ತನ್ನ ಹತ್ತಿರದ ಸಂಬಂಧಿಯೊಬ್ಬನ ಸಲಹೆಯ ಮೇರೆಗೆ ಗುರೂಜೀಯವರಲ್ಲಿಗೆ ಬಂದ. ಅವರ ಆಪ್ತ ಸಹಾಯಕ ರಾಘವನ ಕಥೆ ಕೇಳಿ ಬೆಕ್ಕಸ ಬೆರಗಾಗಿ ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಸರಿಪಡಿಸಿ ನೆಟ್ಟಗೆ ಕುಳಿತುಕೊಂಡ. ತನ್ನದೂ ಇವನದೇ ಕಥೆ. ಹಾಗಾಗಿ ತನಗೂ ಈ ಗುರೂಜಿಯವರಿಂದ ಪರಿಹಾರ ದೊರಕೀತು ಎಂದುಕೊಂಡು ಉಲ್ಲಸಿತನಾದ. ಅದರ ನಡುವೆಯೂ ಅವನನ್ನೊಂದು ಅನುಮಾನ ಕಾಡಿತು. ಅದನ್ನು ನಿವಾರಿಸಿಕೊಳ್ಳಲು, ‘ನನ್ನದೂ ನಿಮ್ಮದೇ ಸಮಸ್ಯೆ ಮಾರಾಯ್ರೇ. ಆದರೆ ಈ ಗುರೂಜಿಯವರು ಅದಕ್ಕೆ ಯಾವ್ಯಾವ ಬಗೆಯ ಪರಿಹಾರವನ್ನು ಹೇಳಬಹುದೆಂಬ ಐಡಿಯಾ ಇದೆಯಾ ನಿಮಗೆ…?’ ಎಂದು ರಾಘವನನ್ನು ಪ್ರಶ್ನಿಸಿದ. ‘ಅಯ್ಯೋ, ಅದು ಬಿಡಿ. ಅವರು ಯಾವತ್ತೂ ದುಡ್ಡು ಮಾಡುವವರ ಜಾತಿಗೆ ಸೇರಿದವರಲ್ಲ. ಹಾಗಾಗಿ ದೊಡ್ಡ ದೊಡ್ಡ ವಿಧಿಗಳನ್ನೇನೂ ಹೇಳುವುದಿಲ್ಲ. ನಿಮಗ್ಯಾರಾದರೂ ಮಾಟ ಗೀಟ ಮಾಡಿಸಿದ್ದರೆ ಅದರ ನಿವಾರಣೆಗೆ ಕೆಲವು ಪೂಜೆ, ಪುನಸ್ಕಾರಗಳನ್ನು ಹೇಳಬಹುದಷ್ಟೇ. ಎಷ್ಟೆಷ್ಟೋ ಬಡವರ ಸಮಸ್ಯೆಗಳನ್ನು ಅವರು ಕೆಲವೊಮ್ಮೆ ಪುಕ್ಕಟೆಯಾಗಿ ತಮ್ಮ ಮಂತ್ರಶಕ್ತಿಯಿಂದಲೇ ನಿವಾರಿಸಿ ಕಳುಹಿಸಿದ್ದುಂಟು!’ ಎಂದು ವಿಸ್ಮಯ ಸೂಚಿಸುತ್ತ ಹೇಳಿದ. ಅಷ್ಟು ಕೇಳಿದ ಹೇಮಚಂದ್ರ ಪೂರ್ಣ ನಿರಾಳನಾದ. ‘ಹೌದೂ, ನಿಮ್ಮದೆಂಥ ಸಮಸ್ಯೆ ಮಾರಾಯ್ರೇ…?’ ಎಂದು ರಾಘವ ಎತ್ತಲೋ ನೋಡುತ್ತ, ಸಿಗರೇಟಿನ ಹೊಗೆ ಉಗುಳುತ್ತ ಅವನನ್ನು ಪ್ರಶ್ನಿಸಿದ. ‘ನನ್ನದೂ ವ್ಯಾಪಾರದ ಅವಸ್ಥೆಯೇ ಮಾರಾಯ್ರೇ! ಹೊಟೇಲು ಮಾಲಿಕನೊಬ್ಬ ನನ್ನ ಮೇಲೆ ಮಾಟ ಮಾಡಿಸಿರಬೇಕು. ಬರೇ ಆರು ತಿಂಗಳಲ್ಲಿ ಇಪ್ಪತ್ತು ಲಕ್ಷ ಲಾಸ್ ಆಯಿತು. ಅದರ ಮೇಲೆ ಒಂದಷ್ಟು ಸಾಲವೂ ಆಗಿಬಿಟ್ಟಿದೆ. ಆ ಸಾಲಗಾರರ ತೊಂದರೆ ತಾಳಲಾಗದೆ ಜೀವ ತೆಗೆದುಕೊಳ್ಳುವುದೊಂದೇ ದಾರಿ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲಿ ನನ್ನ ಸಂಬಂಧಿಕನೊಬ್ಬ ಈ ಗುರೂಜಿಯವರಲ್ಲಿಗೆ ಕಳುಹಿಸಿಕೊಟ್ಟ!’ ಎಂದ ವಿಷಾದದಿಂದ. ‘ಓಹೋ, ಹೌದಾ… ಇಲ್ಲಿಗೆ ಬಂದಾಯ್ತಲ್ಲ ಇನ್ನು ಮಂಡೆಬಿಸಿ ಬಿಟ್ಟುಬಿಡಿ. ನೀವೆಷ್ಟು ಕಳೆದುಕೊಂಡಿದ್ದೀರೋ ಅದರ ಡಬ್ಬಲ್ ತಿರುಗಿ ನಿಮ್ಮ ಹತ್ತಿರ ಬಂದೇ ಬರುತ್ತದೆ. ಅದಕ್ಕೆ ನಾನು ಭರವಸೆ ಕೊಡಬಲ್ಲೆ!’ ಎಂದು ಎದೆಯುಬ್ಬಿಸಿ ಅಂದವನು, ‘ಹೌದೂ ನಿಮ್ಮನ್ನು ಇಲ್ಲಿಗೆ ಕಳುಹಿಸಿದವನು ನಿಮ್ಮ ಸಂಬಂಧಿಕನೆಂದಿರಲ್ಲ ಆ ಪುಣ್ಯಾತ್ಮನ ಹೇಸರೇನಂದಿರಿ…?’ ಎಂದು ಪ್ರಶ್ನಿಸಿದ. ‘ಪ್ರಕಾಶ ಅಂತ. ಅವನು ನನ್ನ ಹತ್ತಿರದ ಸಂಬಂಧಿಯೇನೂ ಅಲ್ಲ. ಆದರೂ ಕಷ್ಟಕಾಲದಲ್ಲಿ ಅಂಥವರೇ ಆಗುವುದು ಅಂತ ಈಗ ಗೊತ್ತಾಗುತ್ತಿದೆ ಮಾರಾಯ್ರೇ!’ ಎಂದು ಹೇಮಚಂದ್ರ ಅವನನ್ನು ಸ್ಮರಿಸಿದ. ‘ಓಹೋ, ಅವನಾ… ಹೌದೌದು. ಅಂತವರೇ ಆಗುವುದು ಮಾರಾಯ್ರೇ!’ ಎಂದ ರಾಘವ ಇನ್ನು ತನ್ನ ಕೆಲಸವಾಯಿತು ಎಂಬಂತೆ ಎದ್ದು ನಿಂತವನು ಯಾರಿಗೋ ಕರೆ ಮಾಡಲು ನೆನಪಾದಂತೆ ನಟಿಸುತ್ತ ಫೋನೆತ್ತಿಕೊಂಡು, ‘ಆಯ್ತು ನೀವು ಕುಳಿತಿರಿ. ನಾನೀಗ ಬಂದೆ…’ ಎಂದವನು ಮತ್ತೆ ಅವನತ್ತ ತಿರುಗಿಯೂ ನೋಡದೆ ಹೊರಟು ಹೋದ. ಅವನು ಅತ್ತ ಹೋಗುತ್ತಲೇ, ಎಲ್ಲಿಂದಲೋ ಹಾರಿ ಬಂದ ಕಾಗೆಯೊಂದು ಹೇಮಚಂದ್ರನ ನೆತ್ತಿಯ ಮೇಲಿನ ಮರದ ಕೊಂಬೆಯಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಕ್ರಾವ್ಸ್…ಕ್ರಾವ್ಸ್…ಕ್ರಾವ್ಸ್…! ಎಂದು ಅರಚಿದ್ದು, ಪಿಚಕ್ಕನೆ ಅವನ ಮೇಲೆ ಹಿಕ್ಕೆ ಸುರಿದು ಹಾರಿ ಹೋಯಿತು. ಹೇಮನಾಥ ಬೆಚ್ಚಿಬಿದ್ದ. ಅವನ ಮೈಯಿಡೀ ಕೆಟ್ಟ ವಾಸನೆ ಹೊಮ್ಮತೊಡಗಿತು. ಅಸಹ್ಯದಿಂದ ಎದ್ದು ಸಮೀಪದ ನಳ್ಳಿಯತ್ತ ಧಾವಿಸಿ ತೊಳೆದುಕೊಂಡ. ಆದರೂ ಕೊಳೆತ ಮೀನಿನಂಥ ವಾಸನೆ ಹಾಗೆಯೇ ಉಳಿಯಿತು. ತಲೆಯನ್ನು ಕರವಸ್ತ್ರ್ರದಿಂದ ತಿಕ್ಕಿತಿಕ್ಕಿ ಒರೆಸಿಕೊಂಡು ಮರಳಿ ಅಲ್ಲಿ ಕೂರಲಾಗದೆ ಅಸಹನೆಯಿಂದ ಅಡ್ಡಾಡತೊಡಗಿದ.                                                                                    *** ಹೇಮಚಂದ್ರನೊಡನೆ ಮಾತಾಡಿ ಅಲ್ಲಿಂದ ಮರೆಯಾದ ರಾಘವ ಕೂಡಲೇ ಗುರೂಜಿಯವರಿಗೆ ಕರೆ ಮಾಡಿದ. ಆದರೆ ಆಹೊತ್ತು ಗುರೂಜಿಯವರ ಎದುರಿನಲ್ಲಿ ಶ್ರೀಮಂತ ಜೋಡಿಯೊಂದು ತಮ್ಮ ಜೀವನವೇ ಕಳೆದು ಹೋದಂಥ ದುಃಖದಿಂದ ಕುಳಿತಿತ್ತು. ಗುರೂಜಿಯವರು ಅವರ ಸಮಸ್ಯೆಯನ್ನೂ ಅವರ ಮನೆಯ ವಿವರವನ್ನೂ ಮತ್ತು ವಠಾರದ ಚಿತ್ರಣವನ್ನೂ ಅವರಿಂದಲೇ ಕೆದಕಿ ಕೆದಕಿ ಪ್ರಶ್ನಿಸುತ್ತ ಸಾಕಷ್ಟು ತಿಳಿದುಕೊಂಡವರು ಕೊನೆಯಲ್ಲಿ ತಮ್ಮ ಕವಡೆಗಳನ್ನು ಹರಿಯಬಿಟ್ಟರು. ಅವುಗಳು ಕೆಲವುಕ್ಷಣ ಕುಣಿದು ಕುಪ್ಪಳಿಸಿ ಬಿದ್ದ ಸ್ಥಿತಿಯ ಮೇಲೆ ಲೆಕ್ಕಾಚಾರ ಹಾಕಿದವರು, ‘ನೋಡೀ, ನಿಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಈಚೀಚೆಗೆ ಕಂಡು ಬಂದಿರುವ ಮನಸ್ತಾಪಕ್ಕೂ ಮತ್ತು ನಿಮ್ಮ ಆರ್ಥಿಕ ಸಂಕಷ್ಟಕ್ಕೂ ಕಾರಣವೇನೆಂದು ಇಲ್ಲಿ ಸ್ಪಷ್ಟವಾಗುತ್ತಿದೆ. ನೀವು ಹೊಸತಾಗಿ ಕಟ್ಟಿಸಿರುವ ಬಂಗಲೆಯ ವಾಸ್ತುದೋಷವೇ ಈ ಎಲ್ಲ ಅನಾಹುತಕ್ಕೆ ಕಾರಣ! ಆದರೆ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಬಂಗಲೆಯ ಮುಖ್ಯ ದ್ವಾರವನ್ನು ಕಿತ್ತು ನಾವು ಸೂಚಿಸುವ ದಿಕ್ಕಿಗೆ ಇರಿಸಿದರಾಯ್ತು. ಆನಂತರ ನಿಮ್ಮ ಬೆಡ್‍ರೂಮಿಗೆ ನೇರವಾಗಿ ಕಾಣಿಸುವ, ನಿಮ್ಮ ನೆರೆಮನೆಯ ತೋಟದಲ್ಲಿ ಹಳೆಯ ಕಾಟು ಮಾವಿನಮರವೊಂದಿದೆ ಅಂತ ಹೇಳಿದಿರಲ್ಲ ಆ ಮರವು ಪ್ರೇತಾತ್ಮಗಳ ವಾಸ್ಥಸ್ಥಾನವಾಗಿರುವುದೂ ಇಲ್ಲಿ ತೋರಿ ಬರುತ್ತಿದೆ. ಅವು ಮಸ್ಸರಗೊಂಡು ನಿಮ್ಮ ದಾಂಪತ್ಯ ಸುಖಕ್ಕೆ ಕಲ್ಲು ಹಾಕುತ್ತಿವೆ. ಆದಷ್ಟು ಬೇಗ ಆ ಮರವನ್ನು ಕಡಿಸುವ ಏರ್ಪಾಟ್ಟು ಮಾಡಿಸಿ. ಬಳಿಕ ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ಭಕ್ತಿಯಿಂದ ನೆರವೇರಿಸಿಬಿಡಿ. ಆಮೇಲೆ ನಿಮ್ಮ ಸರ್ವ ಸಮಸ್ಯೆಗಳೂ ನಿವಾರಣೆಯಾಗುತ್ತವೆ, ಚಿಂತಿಸಬೇಡಿ!’ ಎಂದು ಸಲಹೆಯಿತ್ತರು.    ಅಷ್ಟು ಕೇಳಿದ ಹೆಂಗಸು ಸ್ವಲ್ಪ ನಿರಾಳಲಾಗಿ ಗಂಡನ ಮುಖ ದಿಟ್ಟಿಸಿದಳು. ಆದರೆ ಗಂಡಸಿಗೆ ಮರುಕ್ಷಣ ಬೇರೊಂದು ಚಿಂತೆ ಕಾಡಿತು. ‘ಸರಿ ಗುರೂಜಿ. ನೀವು ಹೇಳಿದಂತೆ ಮನೆಯ ದ್ವಾರವನ್ನು ತೆಗೆದು ಬೇರೆಡೆಗಿರಿಸಬಹುದು. ಆದರೆ ಮಾವಿನ ಮರ ಕಡಿಯಲು ನೆರೆಮನೆಯವರು ಒಪ್ಪುತ್ತಾರಾ…?’ ಎಂದು ಪ್ರಶ್ನಿಸಿದ. ‘ಅದೂ ಹೌದು. ಆದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ ಬಿಡಿ!’ ಎಂದ ಗುರೂಜಿಯವರು ಕುಂಕುಮದ ಕಟ್ಟೊಂದನ್ನು ತೆಗೆದು ಕಣ್ಣುಮುಚ್ಚಿ ಮಂತ್ರಿಸಿ ಅವರ ಕೈಗಿತ್ತು, ‘ಈ ಪ್ರಸಾದವನ್ನು ಆ ಮನೆಯವರಿಗೆ ಕೊಡಿ ಮತ್ತು ಆ ಮರದ ಕುರಿತು ನಾವು ಹೇಳಿದ ವಿಷಯವನ್ನೂ ಅವರಿಗೆ ವಿವರಿಸಿ. ಒಪ್ಪುತ್ತಾರೆ. ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ನಾವೇ ಹೇಳುತ್ತೇವೆ. ಯಾವುದಕ್ಕೂ ಆ ಕೆಲಸವಾದ ಮೇಲೆ ಇನ್ನೊಮ್ಮೆ ಬಂದು ಹೋಗಿ!’ ಎಂದು ನಗುತ್ತ ಹೇಳಿದರು. ಆಗ ಆ ದಂಪತಿಗೆ ಧೈರ್ಯ ಬಂತು. ‘ಸರಿ ಗುರೂಜಿ!’ ಎಂದು ಅವರು ನಮ್ರವಾಗಿ ಎದ್ದವರು ಐನೂರರ ಎರಡು ನೋಟುಗಳನ್ನು ಅವರ ಹರಿವಾಣದಲ್ಲಿಟ್ಟು ಕೈಮುಗಿದು ಹೊರಟು ಹೋದರು.    ಶ್ರೀಮಂತ ದಂಪತಿ ಹೊರಗೆ ಹೋದ ಬೆನ್ನಿಗೆ ಮಧ್ಯಮವರ್ಗದ ಜೋಡಿಯೊಂದು ಅಳುಕುತ್ತ ನಾಚುತ್ತ ಗುರೂಜಿಯ ಕೋಣೆಯನ್ನು ಪ್ರವೇಶಿಸಿತು. ಗುರೂಜಿಯವರು ಆ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಹೌದೂ, ಇವರು ಮೂರು ತಿಂಗಳ ಹಿಂದೊಮ್ಮೆ ಬಂದು ಹೋದವರಲ್ಲವಾ…? ಎಂದುಕೊಂಡವರ ಮುಖದಲ್ಲಿ ತಟ್ಟನೆ ಅಸಹನೆಯ ಹೊಗೆಯಾಡಿತು. ಥತ್! ದರಿದ್ರದವುಗಳೆಲ್ಲಿಯಾದರೂ! ಮತ್ತೆ ಯಾಕೆ ವಕ್ಕರಿಸಿದವು? ಎಂದು ಚಿಂತಿಸಿದವರಿಗೆ ಆ ಜೋಡಿಯ ಸಮಸ್ಯೆಯೂ ಮುನ್ನೆಲೆಗೆ ಬಂತು. ಥೂ! ಇವುಗಳು ಕೊಡುವ ಇನ್ನೂರು ರೂಪಾಯಿಗೆ ನಾವು ಇವರಿಗೆ ಸಂತಾನಭಾಗ್ಯ ಕರುಣಿಸಬೇಕಂತೆ. ತಲೆಕೆಟ್ಟವುಗಳು! ಎಂದು ಒಳಗೊಳಗೇ ಬೈದುಕೊಳ್ಳುತ್ತ, ‘ಹ್ಞೂಂ  ಹೇಳಿ ಏನು ವಿಶೇಷ? ಏನಾದರೂ ಸಿಹಿ ಸುದ್ದಿ ತಂದಿದ್ದೀರೋ ಇಲ್ಲವೋ…?’ ಎಂದು ನಗುತ್ತ ಕೇಳಿದರು. ಆದರೆ ಆ ದಂಪತಿಯ ಮುಖಗಳು ಬಾಡಿದವು. ‘ಅದು ಗುರೂಜೀ… ನಾವು ಹೋದ ಸಲ ಬಂದಾಗ ನೀವು ನಮ್ಮ ತೊಂದರೆಯ ನಿವಾರಣೆಗೆ ನಮ್ಮ ಕುಲದೇವರಿಗೆ ಒಂದೂವರೆ ಕಿಲೋ ಉದ್ದಿನ ಬೇಳೆಯನ್ನು ಭಕ್ತಿಯಿಂದ ಸಮರ್ಪಿಸಿಲು ಹೇಳಿದ್ದಿರಿ. ನಾವು ಕೂಡಾ ಹಾಗೆಯೇ ಮಾಡಿದೆವು. ಆದರೆ ಆ ಮೇಲೆ ಮೂರು ತಿಂಗಳು ಕಳೆಯಿತು. ಇನ್ನೂ ಯಾವ ಸೂಚನೆಯೂ ಇಲ್ಲ!’ ಎಂದ ಹೆಂಗಸು ಮತ್ತೆ ತಲೆ ತಗ್ಗಿಸಿ ಕುಳಿತಳು. ಗುರೂಜಿಯವರಿಗೆ ಜಿಗುಪ್ಸೆ ಮೂಡಿತು. ‘ಹೌದಾ ಅಮ್ಮಾ… ಮೂರು ತಿಂಗಳಲ್ಲಿ ಎಷ್ಟು ಬಾರಿ ಕೊಟ್ಟಿದ್ದೀರಿ? ಒಂದೇ ಸಲ ಅಲ್ಲವಾ… ಅದೂ ಒಂದೂವರೆ ಕೇಜಿ ಅಷ್ಟೇ ತಾನೇ. ಅಯ್ಯೋ, ಅಷ್ಟಕ್ಕೆಲ್ಲ ನಮ್ಮ ಈಗಿನ ಯಾವ ದೇವರು ಪ್ರಸನ್ನನಾಗುತ್ತಾನಮ್ಮಾ! ಇನ್ನೊಂದಷ್ಟು ಕಾಲ ಕೊಡುತ್ತಲೇ ಇರು. ದೇವರಿಗೂ ನಾವು ಆಗಾಗ ಸ್ವಲ್ಪ ಕಾಟ ಕೊಡುತ್ತಲೇ ಇರಬೇಕಮ್ಮಾ. ಆಗಲೇ ಅವನೂ ನಮ್ಮಾಚೆ ತಿರುಗಿ ನೋಡುವುದು!’ ಎಂದು ವ್ಯಂಗ್ಯವಾಗಿ ನಗುತ್ತ ಹೇಳಿದರು. ಆಗ ಅವಳ ಗಂಡ, ಗುರೂಜಿಯವರಿಗೆ ಕಾಣದಂತೆ ಹುಬ್ಬುಗಂಟಿಕ್ಕಿ ತಲೆಯನ್ನು ಕೆರೆದುಕೊಂಡ. ‘ಹ್ಞಾಂ! ಅಂದಹಾಗೆ ಇನ್ನು ಮುಂದೆ ಹೀಗೆ ಮಾಡಿ, ಒಂದು ತಿಂಗಳು ಉದ್ದಿನ ಬೇಳೆ ಕೊಟ್ಟರೆ ಮತ್ತೊಂದು ತಿಂಗಳು ತೊಗರಿಬೇಳೆ ಕೊಡಿ. ಅದರಿಂದ ದೇವರು ಸಂಪ್ರೀತನಾಗಿ ನಿಮಗೆ ಖಂಡಿತಾ ಸಂತಾನವಾಗುತ್ತದೆ. ಹೋಗಿ ಬನ್ನಿ!’ ಎಂದು ಗುರೂಜಿಯವರು ನಯವಾಗಿ ಅಂದರು. ಅಷ್ಟು ಕೇಳಿದ ಆ ಬಡಪಾಯಿ ದಂಪತಿ, ‘ಆಯ್ತು ಗುರೂಜಿ. ಎಲ್ಲಾ ನಿಮ್ಮ ಆಶೀರ್ವಾದ!’ ಎಂದು ಕೈಮುಗಿದು ಇನ್ನೂರು ರೂಪಾಯಿಯನ್ನು ಅವರ ಮುಂದಿಟ್ಟು ಹೊರಟು ಹೋದರು. ಅಷ್ಟರಲ್ಲಿ ಗುರೂಜಿಯವರಿಗೆ ರಾಘವನ ಕರೆ ಬಂತು. ಫೋನೆತ್ತಿಕೊಂಡರು. ಅದು ತಮ್ಮ ಸಹಾಯಕನ ಕರೆ ಎಂದು ತಿಳಿದರೂ ಅಭ್ಯಾಸ ಬಲದಂತೆ, ‘ಓಂ ನಾಗಾಯ ನಮಃ ಯಾರು ಮಾತಾಡ್ತಾ ಇರೋದು…?’ ಎಂದರು.    ‘ನಾನು ಗುರೂಜೀ ರಾಘವ…ಹೊರಗಡೆ ಒಂದು ಹೊಸ ಕೇಸು ಬಂದು ಕೂತಿದೆ. ಕೆಂಪು ಶರ್ಟು ಮತ್ತು ಹಳೆಯ ಮಾಡೆಲಿನ ರಾಡೋ ವಾಚು ಧರಿಸಿರುವ ಹೇಮಚಂದ್ರ ಎಂಬವನಿದ್ದಾನೆ. ಸುಮಾರಾದ ಕುಳವೇ. ಹೊಟೇಲ್ ಬ್ಯುಸಿನೆಸ್ಸು. ಯಾರೋ ಮಾಟ ಮಾಡಿಸಿದ್ದಾರಂತೆ. ಈಗ ವ್ಯಾಪಾರ ಮುಳುಗಿ ಇಪ್ಪತ್ತು ಲಕ್ಷ ಲಾಸ್ ಆಗಿದೆಯಂತೆ. ಗಮನಿಸಿ!’ ಎಂದು ಸಂಕ್ಷಿಪ್ತ ಮಾಹಿತಿ ನೀಡಿ ಫೋನಿಟ್ಟ. ‘ಓಹೋ, ಹೌದಾ…, ಸರಿ, ಸರಿ!’ ಎಂದು ಗುರೂಜಿಯೂ ಫೋನಿಟ್ಟವರು ತಕ್ಷಣ ಅಣ್ಣಪ್ಪನನ್ನು ಕರೆದು, ‘ನೋಡನಾ… ಹೇಮಚಂದ್ರ ಎಂಬವನನ್ನು ಒಳಗೆ ಕಳುಹಿಸು…!’ ಎಂದು ಆಜ್ಞಾಪಿಸಿದರು. ಅದಕ್ಕವನು, ‘ಗುರೂಜೀ, ಸುಮಿತ್ರಮ್ಮ ಎಂಬವರು ಅವರಿಗಿಂದ ಮೊದಲು ಬಂದು ಕೂತಿದ್ದಾರೆ…!’ ಎಂದು ಹಲ್ಲುಗಿಂಜಿದ. ‘ಪರ್ವಾಗಿಲ್ಲ ಮಾರಾಯಾ. ಅವರನ್ನು ಇನ್ನೂ ಸ್ವಲ್ಪಹೊತ್ತು ಕುಳಿತಿರಲು ಹೇಳಿ ಇವನನ್ನು ಮೊದಲು ಕಳುಹಿಸು ಹೋಗು!’ ಎಂದು ಒರಟಾಗಿ ಅಂದರು. ಅವನು, ‘ಆಯ್ತು, ಗುರೂಜಿ’ ಎಂದುತ್ತರಿಸಿ ಹೊರಗೆ ಹೋದ. ಹೇಮಚಂದ್ರ ಉತ್ಸಾಹದಿಂದ ಒಳಗೆ ಬಂದವನು ಗುರೂಜಿಯವರಿಗೆ ಅತಿಯಾದ ಧೈನ್ಯ ಮತ್ತು ಗೌರವದಿಂದ ನಮಸ್ಕರಿಸಿ ಕುಳಿತುಕೊಂಡ. ಗುರೂಜಿಯವರು ಅವನನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದವರು ದೇಶಾವರಿ ನಗು ಬೀರುತ್ತ ಧ್ಯಾನಸ್ಥರಾದರು. ಕೆಲಕ್ಷಣದ ಬಳಿಕ ಕಣ್ಣು ತೆರದು ಕವಡೆಗಳನ್ನೆತ್ತಿ ಹಣೆಗೊತ್ತಿಕೊಂಡು ಮೇಜಿನ ಮೇಲೆ ಹರಡಿದರು. ತುಸುಹೊತ್ತು ಅವುಗಳನ್ನೇ ತದೇಕಚಿತ್ತದಿಂದ ದಿಟ್ಟಿಸುತ್ತ ಲೆಕ್ಕಾಚಾರವನ್ನೂ ಹಾಕಿದವರು ಅವನತ್ತ ತಲೆಯೆತ್ತಿ, ‘ಜೀವನದಲ್ಲಿ ನೀವು ಬಹಳವೇ ಕಷ್ಟನಷ್ಟವನ್ನನುಭವಿಸಿರುವ ಹಾಗಿದೆಯಲ್ಲ…!’ ಎಂದು ಕನಿಕರದಿಂದ ನೋಡುತ್ತ ಅಂದರು. ಹೇಮಚಂದ್ರ ತಟ್ಟನೆ ನೆಟ್ಟಗೆ ಕುಳಿತವನು, ‘ಹೌದು ಹೌದು, ಗುರೂಜೀ…!’ ಎಂದು ವಿಷಾದದಿಂದ ಗೋಣಲ್ಲಾಡಿಸಿದ. ‘ಜೀವಮಾನದ ಗಳಿಕೆ ಲಕ್ಷಲಕ್ಷ ಕರಗಿ ಹೋದಂತೆ ತೋರುತ್ತಿದೆ ಇಲ್ಲಿ, ಹೌದೇ…?’ ಎಂದು ಗುರೂಜಿ ಅದೇ ಧಾಟಿಯಿಂದ ಪ್ರಶ್ನಿಸಿದರು. ಹೇಮಚಂದ್ರನ ಮುಖದಲ್ಲಿ ವಿಲಕ್ಷಣ ಕಾಂತಿ ಮಿನುಗಿತು. ಅದನ್ನು ಗಮನಿಸಿದ ಗುರೂಜಿಯವರು ಮತ್ತೆ ಕವಡೆಗಳತ್ತ ನೋಡುತ್ತ, ‘ನಿಮ್ಮದು ಆಹಾರ ಪೂರೈಕೆಯ ವ್ಯವಹಾರವಿರಬೇಕಲ್ಲ…?’ ಎಂದರು ತಲೆ ಎತ್ತದೆಯೇ. ಆಗ ಹೇಮಚಂದ್ರ ನಿಜಕ್ಕೂ ವಿಸ್ಮಯಗೊಂಡ. ಅವನಿಗೆ ಗುರೂಜಿಯ ಮೇಲಿದ್ದ ಸಣ್ಣ ಅನುಮಾನವೂ ಕರಗಿ ಹೋಯಿತು. ಇವರು ಅಂತಿಂಥ ವ್ಯಕ್ತಿಯಲ್ಲ. ದಿವ್ಯದೃಷ್ಟಿ ಉಳ್ಳವರು ಅನ್ನುವುದರಲ್ಲಿ ಸಂಶಯವೇ ಇಲ್ಲ! ಎಂದುಕೊಂಡವನಿಗೆ ಅವರ ಮೇಲೆ ಅಪಾರ ನಂಬಿಕೆ ಹುಟ್ಟಿಬಿಟ್ಟಿತು. ‘ಹೌದು ಗುರೂಜಿ, ತಾವು ಸರಿಯಾಗೇ ಹೇಳಿದಿರಿ. ನನ್ನ ಇಪ್ಪತ್ತು ವರ್ಷದ ಸಂಪಾದನೆಯನ್ನು ಆರೇ ತಿಂಗಳಲ್ಲಿ ಒಬ್ಬಾತ ಮುಳುಗಿಸಿಬಿಟ್ಟ. ಅದರ ಮೇಲೆ ಈಗ ಒಂದಷ್ಟು ಸಾಲಕ್ಕೂ ಬಿದ್ದು ಸಾಯುವುದೊಂದೇ ಬಾಕಿ ಎಂಬಂತಾಗಿದೆ ನನ್ನ ಪರಿಸ್ಥಿತಿ!’ಎಂದು ಉಮ್ಮಳಿಸಿ ಬಂದ ದುಃಖವನ್ನು ಹತ್ತಿಕ್ಕಿಕೊಳ್ಳುತ್ತ ಹೇಳಿದವನು ತನ್ನ ಹಲವು ವರ್ಷಗಳ ಕಥೆಯನ್ನೆಲ್ಲ ಅವರ ಮನಕರಗುವಂತೆ ವಿವರಿಸಿ, ‘ನನ್ನಂಥ ಶನಿ ಹಿಡಿದವನನ್ನು ನೀವೇ ಕಾಪಾಡಬೇಕು ಗುರೂಜೀ!’ ಎಂದು ಕೈಮುಗಿದು ಬೇಡಿಕೊಂಡ. ಗುರೂಜಿ ಮತ್ತೊಮ್ಮೆ ಅವನತ್ತ ಮಂದಹಾಸ ಬೀರಿದವರು ಮರಳಿ ಕೆಲವು ಕ್ಷಣ ಕಣ್ಣುಮುಚ್ಚಿ ತೆರೆದರು. ‘ನೀವು ವ್ಯಾಪಾರಕ್ಕೆ ಆಯ್ಕೆ ಮಾಡಿಕೊಂಡ ಜಾಗದಲ್ಲಿ ದೋಷವಿತ್ತು ಹೇಮಚಂದ್ರರೇ. ಅದಕ್ಕೆ ಸರಿಯಾಗಿ ಬಲವಾದ ಕ್ಷುಧ್ರ ಮಾಟವೊಂದೂ ನಿಮ್ಮ ಮೇಲೆ ಪ್ರಯೋಗಿಸಲ್ಪಟ್ಟಿದೆ! ವ್ಯಾಪಾರ ಆರಂಭಿಸುವ ಮೊದಲು ನೀವು ಯಾರನ್ನಾದರೂ ಜ್ಯೋತಿಷಿಗಳನ್ನು ಸಂಪರ್ಕಿಸಿ ಸರಿಯಾದ ಸಲಹೆ ಸೂಚನೆ ಪಡೆದುಕೊಂಡು ಮುಂದುವರೆಯುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಆದರೂ ಕಾಲ ಮಿಂಚಿಲ್ಲ ಬಿಡಿ. ನಿಮ್ಮ ತಾಪತ್ರಯಕ್ಕೆ ಪರಿಹಾರವಿದೆ. ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿ. ಆನಂತರ ನಾವು ತಿಳಿಸುವ ಶುಭಗಳಿಗೆಯಲ್ಲಿ ಅದೇ ವ್ಯಾಪಾರವನ್ನು ಬೇರೆ ಜಾಗದಲ್ಲಿ ಪುನರಾರಂಭಿಸಿ. ಎಲ್ಲವನ್ನೂ ವೃದ್ಧಿಸಿ ಕೊಡುವ ಜವಾಬ್ದಾರಿ ನಮ್ಮದು. ಚಿಂತಿಸಬೇಡಿ ಹೋಗಿಬನ್ನಿ!’ ಎಂದು ಅಭಯ ನೀಡಿದರು. ಅಷ್ಟು ಕೇಳಿದ ಹೇಮಚಂದ್ರನ ಕೊರಗು ದಿಢೀರ್ರನೆ ಮರೆಯಾಯಿತು. ‘ಖಂಡಿತಾ ನೆರವೇರಿಸುತ್ತೇನೆ ಗುರೂಜಿ. ಮುಕ್ಕಾಲು ಮುಳುಗಿದವನಿಗೆ ಚಳಿಯೇನು ಮಳೆಯೇನು? ಒಟ್ಟಾರೆ ನನ್ನನ್ನು ಕಾಪಾಡುವ ಜವಾಬ್ದಾರಿ ನಿಮ್ಮದು!’ ಎಂದು ನಮ್ರವಾಗಿ ಕೈಮುಗಿದವನು ಐನೂರರ ನೋಟೊಂದನ್ನು ತೆಗೆದು ಅವರ ಹರಿವಾಣದಲ್ಲಿಟ್ಟು ಹಿಂದಿರುಗಿದ.   (ಮುಂದುವರೆಯುವುದು)       ಗುರುರಾಜ್ ಸನಿಲ್

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ “ಪ್ರೇಮ ಕುರುಡು” ಎಂಬ ಉಕ್ತಿಯೇ ಬಹುಕಾಲದಿಂದ ಜನಜನಿತವಾಗಿದೆ. ನಾನು ಉದ್ಯೋಗಕ್ಕೆ ಸೇರಿ ಆರೆಂಟು ವರ್ಷಗಳೇ ಕಳೆದಿದ್ದವು. ಉತ್ಸಾಹ ತುಂಬಿದ ತರಗತಿಯ ಪಾಠಗಳು, ಯಕ್ಷಗಾನ-ನಾಟಕ-ಸಾಹಿತ್ಯ ಸಂಬಂಧಿಯಾದ ನನ್ನ ಹವ್ಯಾಸಗಳಿಂದಾಗಿ ವರ್ಷಗಳು ಕಳೆದದ್ದೂ ಅರಿವಿಗೆ ಬಾರದಂತಹ ಉಲ್ಲಾಸದ ದಿನಗಳು ನನಗೆ ‘ಮದುವೆಯ ವಯಸ್ಸಾಗಿದೆ’ ಎಂಬುದರತ್ತ ಗಮನ ಹರಿಸಲೂ ಬಿಡಲಾರದಂತೆ ತಡೆದಿದ್ದವು. ನನ್ನ ತಮ್ಮ ನಾಗೇಶ ಗುಂದಿ ನಾನು ಕಾಲೇಜು ಉಪನ್ಯಾಸಕನಾಗಿ ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ. ಸಿದ್ದಾಪುರ ತಾಳೂಕಿನ ಕಾನಸೂರಿನ ಆಸುಪಾಸಿನ ಯಾವುದೋ ಹಳ್ಳಿಯ ಶಾಲೆಯಲ್ಲಿ ಅವನ ಶಿಕ್ಷಕ ವೃತ್ತಿಯು ಮುಂದುವರಿದಿತ್ತು. ಅದೇ ಊರಿನ ತರುಣಿಯೋರ್ವಳೊಡನೆ ಪ್ರೇಮ ಸಂಬಂಧ ಬೆಳೆದು ವಿವಾಹದ ತೀರ್ಮಾನಕ್ಕೂ ಬಂದಿದ್ದ. ಮುಖ್ಯವಾಗಿ ಹುಡುಗಿ ದೈವಜ್ಞ ಬ್ರಾಹ್ಮಣ ಸಮುದಾಯದವಳಾಗಿದ್ದು ದಲಿತ ಸಮುದಾಯದ ನನ್ನ ಸಹೋದರನಿಗೆ ಈ ವಿವಾಹ ಸಂಬಂಧವು ಸಂಘರ್ಷಕ್ಕೆ ಎಡೆಯಾಗಬಹುದೆಂಬ ಆತಂಕವೂ ಇತ್ತು. ಈ ಕಾರಣದಿಂದ ಸಹಜವಾಗಿಯೇ ಆತ ಮದುವೆಗೆ ಅವಸರ ಪಡುತ್ತಿರುವುದು ಸ್ಪಷ್ಟವಾಗಿತ್ತು. ಆದರೆ ಅವನಿಗಿಂತ ಹಿರಿಯನಾಗಿ ನಾನು ಇದ್ದುದರಿಂದ ನಮ್ಮ ತಂದೆ-ತಾಯಿಯರು ಅವನ ಮದುವೆಗೆ ಸಮ್ಮತಿಸಲು ಅನಮಾನಿಸುತ್ತಿದ್ದರು. ಸಂದರ್ಭದ ಸೂಕ್ಷ್ಮಗಳೆಲ್ಲ ನನ್ನ ಅರಿವಿಗೆ ಬಂದಾದ ಮೇಲೆ ಈ ಸಮಸ್ಯೆಗೆ ನಾನು ಪರಿಹಾರವನ್ನು ಸೂಚಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಒಂದೋ ನಾನು ತಕ್ಷಣ ಮದುವೆಯ ನಿರ್ಧಾರಕ್ಕೆ ಬಂದು ನನ್ನ ಸಹೋದರನ ದಾರಿಯನ್ನು ಸುಗಮಗೊಳಿಸಬೇಕು. ಇಲ್ಲವೆ ನನ್ನ ಮದುವೆಗೆ ಮುನ್ನ ಸಹೋದರನ ಮದುವೆಗೆ ಮುಕ್ತ ಮನಸ್ಸಿನಿಂದ ಒಪ್ಪಿಗೆ ತಿಳಿಸಿ ತಾಯಿ-ತಂದೆಯರನ್ನೂ ಒಡಂಬಡಿಸಬೇಕು. ನನಗೆ ಎರಡನೆಯ ದಾರಿಯೇ ಸುಲಭ ಮತ್ತು ಸೂಕ್ತವೆನ್ನಿಸಿತು. ಹಾಗೆಯೇ ಮಾಡಿದೆ. ಯಾವ ಅಡ್ಡಿ-ಆತಂಕಗಳೂ ಇಲ್ಲದೆ ದೈವಜ್ಞ ಬ್ರಾಹ್ಮಣ ಸಮುದಾಯದ ಯುವತಿ ‘ಮಂಜುಳಾ’ ನನ್ನ ಸಹೋದರನ ಪತ್ನಿಯಾಗಿ ನಮ್ಮ ತಾಯಿ ತಂದೆಯರ ಹಿರಿಯ ಸೊಸೆಯಾಗಿ ನಮ್ಮ ಮನೆ ತುಂಬಿದಳು. ಅಲ್ಲಿಂದ ಮುಂದಿನ ದಿನಗಳಲ್ಲಿ ನಮ್ಮ ತಾಯಿ ತಂದೆ ಬಂಧು ಬಳಗವೆಲ್ಲ ಸೇರಿ ನನಗೂ ಮದುವೆಗಾಗಿ ಒತ್ತಾಯಿಸಲು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ನಮ್ಮ ಜಾತಿಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು ದೊರೆಯುವುದು ಕಷ್ಟವಾಗಿತ್ತು. ಅಪರೂಪದಲ್ಲಿ ಕೆಲವು ಓದಿದ, ಓದುತ್ತಿರುವ ಯುವತಿಯರು ಕಾಣಿಸುತ್ತಿದ್ದರೂ ವಿವಾಹ ಸಂಬಂಧದ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ನಾನು ಮದುವೆಯ ತೀರ್ಮಾನಕ್ಕೆ ಬರದೆ ನಿರಾಳವಾಗಿ ಇರುವಂತೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ನನ್ನ ದಾಯಾದಿ ಸಂಬಂಧಿಯಾದ ಹೂವಾ ವಂದಿಗೆ ಎಂಬ ಸದ್ಗೃಹಸ್ಥ. ಹುಬ್ಬಳ್ಳಿಯ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಹೂವಾ ವಂದಿಗೆಯವರು ಹುಬ್ಬಳ್ಳಿಯ ಗಣೇಶ ಪೇಟೆ ಎಂಬ ಭಾಗದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರಿಗೆ ಮೂವರು ಗಂಡು ಮಕ್ಕಳು. ಹುಬ್ಬಳ್ಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಖಾಸಗಿ ಕೆಲಸದಲ್ಲಿದ್ದರು. ಹೂವಾ ಅವರ ಧರ್ಮಪತ್ನಿ ತುಂಬಾ ಬಂಧು ವತ್ಸಲೆಯೆನ್ನಿಸಿದ ತಾಯಿಯಾಗಿದ್ದರು. ಯಾವಾಗಲೂ ಅವರಿಗೆ ನೆಂಟರಿಷ್ಟರು ಮನೆಗೆ ಬರುತ್ತಾ ಇರಬೇಕು. ಅವರಿಗೆ ರುಚಿ ರುಚಿಯಾದ ಅಡಿಗೆ ಮಾಡಿ ಉಣ್ಣಿಸುವುದರಲ್ಲಿ ಅತ್ಯಂತ ಪ್ರೀತಿ ಮತ್ತು ಸಂತೋಷ…! ಊರಿನ ಕಡೆಯಿಂದ ಯಾರೇ ಬಂದರೂ ಅವರ ಯೋಗಕ್ಷೇಮವನ್ನು ನೋಡಿಕೊಂಡು ಆತಿಥ್ಯ ನೀಡುವುದರಲ್ಲಿ ಧನ್ಯತೆಯನ್ನು ಕಾಣುತ್ತಿದ್ದರು. ಗಣೇಶ ಪೇಟೆಯಲ್ಲಿ ಹೂವಾ ವಂದಿಗೆಯವರ ಮನೆಯ ಆಚೀಚೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು, ಮರಾಠರು ನೆಲೆಸಿದ್ದರು. ಎಲ್ಲರೊಂದಿಗೆ ಹೂವಾ ವಂದಿಗೆಯವರ ಪರಿವಾರ ಅತ್ಯಂತ ಆಪ್ತವಾಗಿ ಹೊಂದಿಕೊಂಡಿದ್ದರು. ಅವರಿಗೆ ತುಂಬ ಹತ್ತಿರದಲ್ಲಿ ಒಂದು ಮರಾಠಾ ಭಾವಸಾರ ಕ್ಷತ್ರಿಯ ಕುಟುಂಬ ನೆಲೆಸಿತ್ತು. ಅದು ವಿಷ್ಣುರಾವ್ ಸುಲಾಖೆ ಎಂಬ ಗ್ರಹಸ್ಥರ ಮನೆ. ಅವರಿಗೆ ಮೂವರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದರು. ಮೂರು ಗಂಡು ಮಕ್ಕಳು ಜವಳಿ ವ್ಯಾಪಾರ ಮತ್ತು ಟೇಲರಿಂಗ್ ಕೆಲಸ ಮಾಡುತ್ತಿದ್ದರು. ಗಣೇಶ ಪೇಟೆಯಲ್ಲಿ “ರಾಯಲ್ ಟೇಲರ್ಸ ” ಎಂಬ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆ ಮತ್ತು ಟೇಲರಿಂಗ್ ಮಟೀರಿಯಲ್ಸ್ಗಳನ್ನು ಬಾಂಬೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು. ತಂದೆ ವಿಷ್ಣುರಾವ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ರಾಣಿಬೆನ್ನೂರಿನ ಇಬ್ಬರು ಸೋದರ ಅಳಿಯಂದಿರಿಗೆ ಕೊಟ್ಟು ಮದುವೆ ಮಾಡಿದ್ದರು. ಈ ಕುಟುಂಬದ ಎಲ್ಲ ಸದಸ್ಯರೂ ಹೂವಾ ವಂದಿಗೆಯವರ ಕುಟುಂಬದೊಡನೆ ಅನ್ಯೋನ್ಯವಾಗಿದ್ದರು. ಹಬ್ಬ ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಊಟೋಪಚಾರಗಳ ವಿನಿಮಯವೂ ನಡೆಯುತ್ತಿತ್ತು. ಧಾರವಾಡದಲ್ಲಿ ನಾನು ಎಂ.ಎ ಓದಿನ ದಿನಗಳಿಂದ ಹೂವಾ ವಂದಿಗೆಯವರ ಮನೆಗೆ ಭೇಟಿ ನೀಡುವ ಸಲಿಗೆ ಬೆಳೆಸಿಕೊಂಡಿದ್ದೆ. ವಿಶೇಷವಾಗಿ ಹೂವಾ ಅಂಕಲ್ ಪತ್ನಿ ಶಿವಮ್ಮ ಚಿಕ್ಕಮ್ಮ ಸೊಗಸಾಗಿ ಮಟನ್ ಮಸಾಲೆ ಮಾಡಿ ಬಡಿಸುತ್ತಿದ್ದುದು. ನನಗೆ ಹುಚ್ಚು ಹಿಡಿಸುವಷ್ಟು ಪ್ರಿಯವಾಗಿತ್ತು. ನಾನು ಉದ್ಯೋಗಿಯಾದ ಬಳಿಕ ನಮ್ಮ ಭೇಟಿ ಅಪರೂಪವಾಗಿತ್ತಾದರೂ ಎರಡು ತಿಂಗಳಿಗೊಮ್ಮೆಯಾದರೂ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದೆ. ಇದೇ ಹೂವಾ ವಂದಿಗೆಯವರ ಮನೆಯಲ್ಲಿಯೇ ನೆರೆಯ ವಿಶ್ವನಾಥರಾವ್ ಸುಲಾಖೆಯವರ ಕಿರಿಯ ಮಗಳು ನಿರ್ಮಲಾ ನನಗೆ ಪರಿಚಯವಾಗಿದ್ದಳು. ನಾನು ವಿವಾಹಕಾಂಕ್ಷೆಯಾದೆನೆಂಬುದು ತಿಳಿದಾಗ ಹೂವಾ ವಂದಿಗೆ ಅವರು ನಿರ್ಮಲಾ ಕುರಿತು ಸಣ್ಣ ಸೂಚನೆ ನೀಡದರು. ನನಗೂ ಸರಿಯೆನ್ನಿಸಿ ಅಂಕಲ್ ಮನೆಗೆ ಹೋದಾಗಲೆಲ್ಲ ನಿರ್ಮಲಾಳನ್ನು ನೋಡದೆ ಮರಳಿ ಬರುತ್ತಿರಲಿಲ್ಲ. ಆದರೆ ಅದೇ ಆಗ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆದ ನಿರ್ಮಲಾಳಿಗೆ ಮದುವೆಯ ಯೋಚನೆಯೂ ಇರಲಿಲ್ಲ. ಇನ್ನು ಒಂದು ವರ್ಷದ ಓದು ಮುಗಿದರೆ ಅವಳು ತನ್ನ ಓದು ಮುಗಿಸಿ ಡಿಪ್ಲೋಮಾ ಪಾಸು ಮಾಡುವ ನಿರೀಕ್ಷೆಯಲ್ಲಿ ಕಾದೆವು. ಆದರೆ ನಮ್ಮ ನಡುವಿನ ಸಂಬಂಧದ ಸುಳಿವು ಅವಳ ಪಾಲಕರ ಗಮನಕ್ಕೆ ಬಂದರೆ ನಮ್ಮ ವಿವಾಹ ಕಷ್ಟವೇ ಎಂಬ ಆತಂಕದಲ್ಲಿ ಅವಳು ವಿವಾಹಕ್ಕೆ ಸಮ್ಮತಿಸಿದಳು. ಈ ನಡುವೆ ನಮ್ಮ ವಿವಾಹ ಸಂಬಂಧ ನಡೆಯಲು ಅವಳ ಹಿರಿಯ ಅಕ್ಕ ಲಕ್ಷ್ಮಿ ಎಂಬುವವರು ಬೆಂಬಲವಾಗಿ ನಿಂತು ಧೈರ್ಯ ತುಂಬಿದರು. ೧೯೮೪ರ ಮೇ ತಿಂಗಳ ಒಂದು ದಿನ ನಾವು ಧಾರವಾಡದ ವಿವಾಹ ನೋಂದಣಿ ಕಛೇರಿಯಲ್ಲಿ ಕೇವಲ ನಾಲ್ಕಾರು ಜನ ಬಂಧುಗಳು-ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟೆವು. ನಮ್ಮ ತಾಯಿ ತಂದೆಯರು ನನ್ನ ನಿರ್ಧಾರಕ್ಕೆ ಯಾವುದೇ  ಆಕ್ಷೇಪವೆತ್ತಲಿಲ್ಲ. ಸುಶಿಕ್ಷಿತರಾದ ನಮ್ಮ ತಂದೆಯವರು ಸಂದರ್ಭದ ಸೂಕ್ಷ್ಮ ವನ್ನು ಅರಿತು ನನ್ನನ್ನು ಬೆಂಬಲಿಸಿದರು. ತಾಯಿಯೂ ಒಪ್ಪಿಕೊಂಡು ನಿರ್ಮಲಾಳನ್ನು ಸೊಸೆಯಾಗಿ ಸ್ವೀಕರಿಸಿದಳು. ಆರಂಭದ ಕೆಲವು ದಿನಗಳವರೆಗೆ ತೀವೃ ಪ್ರತಿರೋಧ ವ್ಯಕ್ತಪಡಿಸಿದ ನಿರ್ಮಲಾಳ ತವರು ಮನೆಯ ಪರಿವಾರ ಕಾಲಕಳೆದಂತೆ ನಮ್ಮ ಸ್ಥಿತಿ-ಗತಿಗಳನ್ನು ಅರ್ಥಮಾಡಿಕೊಂಡು ನಮ್ಮ ವಿವಾಹ ಸಂಬಂಧವನ್ನು ಒಪ್ಪಿಕೊಂಡರು. ನಮ್ಮನ್ನು ಹುಬ್ಬಳ್ಳಿಗೆ ಕರೆಸಿಕೊಂಡು ತಮ್ಮ ಸಮಾಜ ಬಂಧುಗಳ ಸಮ್ಮುಖದಲ್ಲಿ ವಿವಾಹ ವಿಧಿಗಳನ್ನು ಮತ್ತೊಮ್ಮೆ ಪೂರೈಸಿ ವರೋಪಚಾರ ಇತ್ಯಾದಿಗಳಿಂದ ನಮ್ಮನ್ನು ಗೌರವಿಸಿ ಬೀಳ್ಕೊಟ್ಟರು. ಮರಾಠಿ ಮಾತ್ರ ಭಾಷೆಯ ಇಡಿಯ ಪರಿವಾರವೂ ಅಂದಿನಿಂದ ಇಂದಿನವರೆಗೂ ಗೌರವಪೂರ್ವಕವಾಗಿಯೇ ನಮ್ಮನ್ನು  ಬಾಂಧವ್ಯವನ್ನು ಮುಂದುವರೆಸಿದ್ದಾರೆ. “ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು” ಬೆರೆತಂತೆ ವಿಭಿನ್ನ ಸಂಸ್ಕೃತಿ-ಭಾಷೆ ಇತ್ಯಾದಿ ವ್ಯತ್ಯಾಸಗಳ ನಡುವೆಯೂ ಪರಸ್ಪರರನ್ನು ಅರ್ಥಮಾಡಿಕೊಂಡು ಗ್ರಹಸ್ಥ ಜೀವನ ನಡೆಸುವ ನಮ್ಮ ಸಂಕಲ್ಪ ಸಾಮಾಜಿಕವಾಗಿಯೂ ಗೌರವಾದರಗಳೊಂದಿಗೆ ಸಾಂಸಾರಿಕ ಜೀವನವನ್ನು ಮುನ್ನಡೆಸಲು ಸಾಧ್ಯವಾದದ್ದು ನಮ್ಮ ಅದೃಷ್ಟವೆಂದೇ ನಾನು ಭಾವಿಸಿದ್ದೇನೆ…. ರಾಮಕೃಷ್ಣ ಗುಂದಿ

ಅಂಕಣ ಬರಹ Read Post »

ಕಾವ್ಯಯಾನ

ಪ್ರಿಯ ಕೊಲೆಗಡುಕರೇ

ಕಾವ್ಯಯಾನ ಪ್ರಿಯ ಕೊಲೆಗಡುಕರೇ ಹೇಗಿದ್ದೀರಿ?ಬಹುಶಃ ಚೆನ್ನಾಗಿರುವಿರಿ ನನಗೆ ನೆನಪಿಲ್ಲನಿಮ್ಮ ಮಡಿಲನು ನಾನುತುಂಬಿದ ದಿನನಾನು ಹುಟ್ಟಿದ ಕಾರಣಕ್ಕೆನೀವು ಅಪ್ಪ ಅಮ್ಮರಾದಿರಿಎಂದು ನೀವು ಹೇಳಿಯೇ ಗೊತ್ತು… ನಾನು ಚಿಕ್ಕವಳಾಗಿದ್ದಾಗಊರಿನ ಜಾತ್ರೆಯಲ್ಲಿ ನಾನು ಇಷ್ಟಪಟ್ಟರಾಜಕುಮಾರನ ಬೊಂಬೆಯನ್ನು ಕೊಡಿಸಿನನ್ನ ಆಟವನ್ನು ನಿಮ್ಮ ಸಂಭ್ರಮವಾಗಿಸಿದಿರಿ ಬಹುಶಃ ನನಗೆ ಹನ್ನೆರಡೋಹದಿಮೂರೋ ವಯಸ್ಸಿರಬೇಕುಹೊಟ್ಟೆ ನೋವೆಂದು ಮುಖಕಿವಿಚಿದಾಗಹೆಣ್ಣಾದಳೆಂದು ಊರಿಗೆಲ್ಲಾ ಸುದ್ದಿಹಂಚಿದಿರಿ ಎಲ್ಲವೂ ಸರಿ ಇತ್ತುಅರವಿಂದ ನನ್ನನ್ನು ನೋಡುವವರೆಗೆಇಲ್ಲ ನಾನು ಅವನನ್ನು ಕಾಣುವವರೆಗೆಜಾತ್ರೆಯಲಿ ಕೊಂಡ ಬೊಂಬೆ ರಾಜಕುಮಾರಜೀವತಳೆದು ನನ್ನ ಅರವಿಂದನಾಗಿದ್ದ ಅವನನ್ನು ಕಂಡಂದು ಒಡಲೊಳಗೆಬಣ್ಣದ ಚಿಟ್ಟೆಯೊಂದು ರೆಕ್ಕೆ ಬಡಿದ ಹಾಗೆಮನಸ್ಸು ಅವನೆಡೆಗೆ ಹೊರಟಿತುಕಿಟಕಿ ಗಾಜಿನ ಮೇಲಿನ ನೀರ ಹನಿಯ ಹಾಗೆ ಅರವಿಂದ ನನ್ನೊಳಗಿನಹೆಣ್ಮನಸನ್ನು ಕದ್ದ ಕಳ್ಳಅವನಿಗೆ ನಾನು ಕಣ್ಣಾಗಿಅವನು ನನ್ನ ಕಣ್ಣ ರೆಪ್ಪೆಯಾಗಿಬದುಕಿಡೀ ಜೊತೆಯಾಗಿರಬೇಕೆಂಬುದುಹೃದಯ ನ್ಯಾಯಾಲಯದ ತೀರ್ಪು ನಿಜವಾಗಿಯೂನನಗೆ ಗೊತ್ತಿರಲಿಲ್ಲ ಪ್ರೀತಿಸುವುದುಒಂದು ಉದ್ಯೋಗ ಅದು ಖಾಯಂಆಗಬೇಕಾದರೆ ತಪ್ಪದೆ ನಡೆದಿರಬೇಕುಜಾತಿಯ ಪರಿಶೀಲನೆ ಎಂಬುದು ಅಪ್ಪಾ ನಿನಗೆ ನೆನಪಿದೆಯೇ?ಕೆಲ ವರ್ಷಗಳ ಹಿಂದೆ ನಡುರಸ್ತೆಯಲಿಅಪಘಾತವಾಗಿ ಬಿದ್ದಿದ್ದ ನಿನ್ನನ್ನುಉಪಚರಿಸಿದವರು, ಆಸ್ಪತ್ರೆ ಸೇರಿಸಿದವರು,ರಕ್ತ ನೀಡಿ ಉಪಕರಿಸಿದವರು ಯಾರಜಾತಿಯನ್ನು ನಾನು ಕೇಳಲಿಲ್ಲ, ನಿನ್ನೊಡಲ ರಕ್ತಕೊನೆಗೂ ಯಾವ ಜಾತಿ ತಿಳಿಯಲೇ ಇಲ್ಲ ‘ಮುಟ್ಟಿಸಿಕೊಂಡವನು’ ಕತೆಯನ್ನುಮನಮುಟ್ಟುವಂತೆ ಬೋಧಿಸುವ ಅಮ್ಮಾನಿನ್ನ ಕಿಡ್ನಿ ಕಸಿ ಮಾಡಿದ ವೈದ್ಯರುನಿನಗೆ ನೀಡಿದ ಕಿಡ್ನಿ ಯಾವಜಾತಿಯವರದೆಂದು ಹೇಳಿದರೇ?ಪ್ರತೀದಿನ ನಿನ್ನನ್ನು ಶುದ್ಧಗೊಳಿಸುವಕಿಡ್ನಿ ಯಾವ ಜಾತಿಯದೆಂದು ಅರಿವಾಗಲೇ ಇಲ್ಲ ನಿಮಗಗತ್ಯವಿದ್ದಾಗ ಎದುರಾಗದ ಜಾತಿನಮ್ಮನ್ನು ಬೆಸೆಯುವ ಸಮಯದಲ್ಲಿಎದುರಾಯಿತೇ?ಹಸಿದಾಗ ಅನ್ನವಿಡದದಿಕ್ಕುಗೆಟ್ಟಾಗ ದಾರಿ ತೋರದಬಿದ್ದಾಗ ಹುಸಿ ಸಂತಾಪ ತೋರುವಈ ಸತ್ವಹೀನ ಸಮಾಜ, ಮಠದ ಐಗಳಹುಸಿ ಮರ್ಯಾದೆಗೆ ಕಟ್ಟುಬಿದ್ದಿರಲ್ಲ… ಮದುವೆ, ಮಡದಿ, ಮಕ್ಕಳುಕೊನೆಗೆ ಮನೆಗೂ ವಿಮುಖರಾದಮಠದ ಐಗಳಿಗೆ ಅನ್ಯರ ಮದುವೆ ಚಿಂತೆ…!ಅವರಿಗೇಕೆ ನಮ್ಮ ಪ್ರೀತಿಯ ಗೊಡವೆ?ಅವರಿಗೇಕೆ ನಮ್ಮ ಮರ್ಯಾದೆಯ ಒಡವೆ? ಎಷ್ಟೊಂದು ಜನ್ಮಗಳಳಿದುಮತ್ತೆ ಸೇರಿದ್ದೆವು ನಾವುನಮ್ಮನ್ನು ದೂರಮಾಡುವುದರಲ್ಲಿಅವರಿಗೆ, ನಿಮಗೆ ಏಕಿಷ್ಟು ಆತುರ?ಬಾಳುಗೆಡುಹುವುದರಲ್ಲಿಏಕಿಷ್ಟೊಂದು ತರಾತುರಿ? ಬಿದ್ದಾಗ ಉಪಚರಿಸಿದಿರಿಬೇಕೆಂದಾಗ ಒದಗಿಸಿದಿರಿಪ್ರೀತಿ ಎಂದರೇನು ತಿಳಿಸಿದಿರಿಪ್ರೀತಿಸುವುದನ್ನು ಕಲಿಸಿದರಿಬದುಕಲು ಬಿಡಿ ಎಂದುಬೇಡಿದಾಗ ಕೊಂದಿರಿ… ಅಯ್ಯೋ….ಏನಾಗಿಹೋಯಿತು…ಅರಳಲು ಹಂಬಲಿಸಿದ ಮೊಗ್ಗೊಂದುನರಳಿ ಅವಸಾನ ಹೊಂದಿತುಯಾವ ಅತ್ತರಿನಿಂದತೊಳೆದರೂ ನಿಮ್ಮ ಕೈಗಂಟಿರುವರಕ್ತದ ವಾಸನೆ ದೂರಾಗದು ಪ್ರಿಯ ಕೊಲೆಗಡುಕರೇ…ಅರಿಯದೇ ಮಾಡಿದ ಪಾಪ ಅರಿತಂದುಪರಿಹಾರವಂತೆ, ನನಗೆ ಗೊತ್ತಿಲ್ಲ…ಕೊನೆಯಲ್ಲಿ ಒಂದೇ ಪ್ರಶ್ನೆನಾನು ಜನಿಸಿದಂದು ಇದ್ದ ಸಂಭ್ರಮನನ್ನನ್ನು ಕೊಲ್ಲುವಾಗಲೂ ಇತ್ತೇ?ಇರಲಿ ನಾನು ನಿಮ್ಮನ್ನು ಕ್ಷಮಿಸಿದ್ದೇನೆಹೇಳಿ, ನೀವು ಕ್ಷಮೆಗೆ ಅರ್ಹರೇ? ಇತಿಎಂದೂ ನಿಮ್ಮವಳಾಗದಹತಭಾಗಿನಿಅಭೀಪ್ಸ.. —————————- ಕಾಂತರಾಜು ಕನಕಪುರ

ಪ್ರಿಯ ಕೊಲೆಗಡುಕರೇ Read Post »

You cannot copy content of this page

Scroll to Top