ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ನಾವು ಮುಖದಲ್ಲಿ ರಸನೆ ಪಡೆದೇವಿಮೌನ ಎಂಬುವ ಕೀಲಿ ಜಡೆದೇವಿ ಸುಖಾ ಎಂಬುವದು ಒಂದು ಮೃಗತೃಷ್ಣೆನಾವು ಬರಿ ನೋವು ಮಾತ್ರ ಹಡೆದೇವಿ ಎಲ್ಲ ಸಂಬಂಧಗಳು ಬದಿಗಿಟ್ಟುಹಣಾ ಗಳಿಸುತ್ತ ಕಾಲ ಕಳೆದೇವಿ ದಾತ ನೀಡಿದ್ದು ಸಾಲಲಿಲ್ಲ ಅಂತನಿತ್ಯ ಆಸೆಯ ಒಡ್ಡು ಒಡೆದೇವಿ ಅರಿಯದೆ ಉಳಿದಿದೆ ಜಗದಾಗ ಗುರಿಅಮಲಿನಲಿ ಯಾವ ಯತ್ತ ನಡೆದೇವಿ ಬದುಕು ಜಗದಾಗ ಬರಿ ನಾಲ್ಕು ದಿನ“ಪ್ರಕಾಶ” ಈ ನಿಜಾನೇ ಮರೆತೇವಿ





