ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಈ ಕೊರೊನಾ ಕಾಲದಲಿ

ಬಿ.ಶ್ರೀನಿವಾಸ

A Major Coronavirus Outbreak Will Test India to the Limit | Time

ಸಾಲು ಸಾಲು ಹೊರಟಿವೆ
ದೂರದೂರಿಗೆ
ನಿಲ್ಲುವುದಿಲ್ಲ
ಬೇರುಗಳ ಹುಡುಕುವ ಪಯಣ
ಮಣ್ಣು ಸೇರುವ ತನಕ

ಒದ್ದೆಯಾಗಿವೆ
ಸಾಲಿಡಿದು ಹೊಂಟ
ಇರುವೆಗಳ ಕಣ್ಣೂ

ಮಾಧ್ಯಮದವನೊಬ್ಬ ಅರಚುತ್ತಲೇ ಇದ್ದಾನೆ
“ನಿರಾಶ್ರಿತರೇಕೆ ಸಾಯಲು ಬರ್ತಾರೆ?”

ಭೂಮಿ ಕಂಪಿಸುತಿದೆ

Coronavirus Lockdown: Will die of hunger before any disease, say home-bound migrant  workers - The Financial Express

ಮಣ್ಣು ಸೇರುವ ಜೀವಗಳ ತವಕಕೆ!
ಮನುಷ್ಯರ ನಿಖರ ಸಂಖ್ಯೆ ತಿಳಿಸಿದ ಈ ಕಾಲಕೆ


About The Author

4 thoughts on “ಈ ಕೊರೊನಾ ಕಾಲದಲಿ”

  1. Namadev Kagadagar

    “ಈ ಕೊರೋನಾ ಕಾಲದಲ್ಲಿ ” ಕವಿತೆ ಈಗಿನ ದುಸ್ಥಿತಿಯನ್ನು ಎತ್ತಿ ಹಿಡಿದಿದೆ.. ಕರಾಳ ಮುಖಗಳನ್ನು ತೋರಿಸುವಂತಿದೆ… ಕವಿ ಬಿ.ಶ್ರೀನಿವಾಸ ರವರು ಮಗ್ಗಲುಗಳನ್ಬು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ…

  2. S D Doddachikkannanavar

    ಸರ್
    ಕರೊನ ಕಾಲಘಟ್ಟದಲ್ಲಿ
    ಅನುಭವಿಸಿದ ನೋವು
    ಯಾತನೆಗಳು ತುಂಬಾ
    ಮಾರ್ಮಿಕವಾಗಿ ಮೂಡಿಬಂದಿದೆ ಸರ್

  3. ಕೊರೊನಾದ ಪರಿಣಾಮಗಳು, ಸಾವಿನ ಸಮಯದಲ್ಲಾದ ತವರಿನ ನೆನಪುಗಳು, ಶೋಚನೀಯ ಬದುಕು ಮತ್ತೊಮ್ಮೆ ಕಣ್ಣ ಮುಂದೆ ಹಾದು ಹೋದಂತಾಯಿತು ಸರ್.

Leave a Reply

You cannot copy content of this page

Scroll to Top